Subscribe to Gizbot

ಒನ್ ಪ್ಲಸ್ ಒನ್ ಭಾರತದಲ್ಲಿ ಪೂರ್ಣ ವಾರಂಟಿಯೊಂದಿಗೆ

Written By:

ಒನ್ ಪ್ಲಸ್ ಒನ್ ಹೆಸರಿನೊಂದಿಗೆ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. "ಅತ್ಯದ್ಭುತ" ವಾಗಿರುವ ಈ ಫೋನ್ ಅನ್ನು ಭಾರತೀಯರು ಅತಿ ದೀರ್ಘ ಕಾಲದಿಂದ ನಿರೀಕ್ಷಿಸುತ್ತಿದ್ದರು.

ಅದಾಗ್ಯೂ, ಭಾರತದ ಉಪ ಪ್ರಾಂತ್ಯಗಳಲ್ಲಿ ಕಂಪೆನಿಯು ಡಿವೈಸ್ ಅನ್ನು ಇನ್ನೂ ಲಾಂಚ್ ಮಾಡಿಲ್ಲ, ಹೆಚ್ಚಿನ ಬಳಕೆದಾರರು ಇದನ್ನು ಮೂರನೇ ವ್ಯಕ್ತಿ ಮಾರಾಟಗಾರರಿಂದ ಖರೀದಿಸಿದ್ದು ಒನ್ ಪ್ಲಸ್‌ನೊಂದಿಗೆ ಅಧಿಕೃತ ವಾರಂಟಿಯನ್ನು ಪಡೆದುಕೊಂಡಿಲ್ಲ ಎಂದಾಗಿದೆ.

ಪೂರ್ಣ ವಾರಂಟಿ ಫೋನ್ ಆಗಿ ಒನ್ ಪ್ಲಸ್ ಒನ್

ಇಂದು, ಒನ್ ಪ್ಲಸ್‌ನ ಭಾರತೀಯ ಮುಖ್ಯಸ್ಥ ವಿಕಾಸ್ ಅಗರ್‌ವಾಲ್ ಹೇಳುವಂತೆ, ಒನ್ ಪ್ಲಸ್ ಒನ್‌ನ ಗ್ಲೋಬಲ್ ವೇರಿಯೇಂಟ್ ಅನ್ನು ತಂದಿರುವ ಭಾರತೀಯ ಬಳಕೆದಾರರಿಗೆ ಭಾರತದಲ್ಲಿ ಪೂರ್ಣ ವಾಯ್ದೆ ದೊರೆಯಲಿದೆ ಎಂದು ಘೋಷಿಸಿದ್ದಾರೆ. ಒನ್ ಪ್ಲಸ್ ಡಾಟ್ ನೆಟ್‌ನಿಂದ ತರಿಸಿಕೊಂಡಿರುವ ಫೋನ್‌ಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಗ್ಲೋಬಲ್ ಒನ್‌ಗಿಂತ ಬೇರೆಯಾಗಿರುವುದರಿಂದ ಚೈನೀಸ್ ಒನ್‌ಗೆ ವಾಯ್ದೆ ದೊರೆಯುವುದಿಲ್ಲ.

ಇದನ್ನೂ ಓದಿ: ಹೊಸ ಫೋನ್ ಖರೀದಿಯೇ ಇಲ್ಲಿದೆ ಆಕರ್ಷಕ ಸಂಗ್ರಹ

ಅವರು ಹೇಳುವಂತೆ, " ಭಾರತದಲ್ಲಿರುವ ನಮ್ಮ ಗ್ರಾಹಕರು ಒನ್ ಪ್ಲಸ್ ಅನ್ನು ಭಾರತಕ್ಕೆ ತರುವಲ್ಲಿ ನಮ್ಮನ್ನು ಹೆಚ್ಚು ಉತ್ಸುಕರನ್ನಾಗಿಸಿದ್ದಾರೆ. ನಮ್ಮ ಉತ್ಪನ್ನದಲ್ಲಿ ನಿಮ್ಮ ನಂಬಿಕೆ, ನಮ್ಮ ಗುರಿ ಮತ್ತು ಒನ್‌ ಪ್ಲಸ್‌ನ ಬೆಳವಣಿಗೆಗೆ ಬ್ರ್ಯಾಂಡ್ ಅವಿಭಾಜ್ಯ ಅಂಗವಾಗಿದೆ.

ಒನ್ ಪ್ಲಸ್ ವಿಶೇಷತೆಗಳು
ಒನ್ ಪ್ಲಸ್ ಡಿವೈಸ್, 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು ಇದರ ರೆಸಲ್ಯುಶನ್ 1920 ×1080 ಪಿಕ್ಸೆಲ್‌ಗಳಾಗಿದೆ. ಇದು ಗೋರಿಲ್ಲಾ ಗ್ಲಾಸ್ 3 ಅನ್ನು ಪಡೆದುಕೊಂಡಿದೆ. ಕ್ವಾಲ್‌ಕಾಮ್‌ನ ಉತ್ತಮ ಸ್ನ್ಯಾಪ್‌ಡ್ರಾಗನ್ 801 ಜೊತೆಗೆ 2.5GHZ ಅನ್ನು ಫೋನ್ ಪಡೆದುಕೊಂಡಿದೆ. ಕ್ವಾಡ್ ಕೋರ್ ಸಿಪಿಯುನೊಂದಿಗೆ 3ಜಿಬಿ RAM ಅನ್ನು ಡಿವೈಸ್ ಹೊಂದಿದೆ. ಫೋನ್ ಆಂಡ್ರಾಯ್ಡ್ 4.4 ಪ್ಲಾಟ್‌ಫಾರ್ಮ್‌ನಲ್ಲಿ ಚಾಲನೆಯಾಗುತ್ತಿದೆ.

ಇನ್ನು ಫೋನ್‌ನ ಇತರ ಅಂಶಗಳತ್ತ ಗಮನಹರಿಸುವುದಾದರೆ ಇದು 13 ಮೆಗಾಪಿಕ್ಸೆಲ್ ಕ್ಯಾಮೆರಾದ ಜೊತೆಗೆ ಸೋನಿಯ IMX214 ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಫೋನ್ ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾದೊಂದಿಗೆ ಬಂದಿದ್ದು ಇದರ ಆಂತರಿಕ ಸಂಗ್ರಹಣೆ 16 ಜಿಬಿ ಮತ್ತು 64 ಜಿಬಿಯದ್ದಾಗಿದೆ. ಇನ್ನು ಫೋನ್ 4G LTE / 3G, Wi-Fi 802.11 ac (2.4/5 GHz), ವೈಫೈ ಡೈರೆಕ್ಟ್, ಬ್ಲ್ಯೂಟೂತ್ 4.1, ಜಿಪಿಎಸ್ ಮತ್ತು ಎನ್‌ಎಫ್‌ಸಿ ಹಾಗೂ 3100 mAh ಬ್ಯಾಟರಿಯೊಂದಿಗೆ ಫೋನ್ ಬಂದಿದೆ.

English summary
This article tells about OnePlus To Offer Full Warranty For One Smartphone in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot