TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಇಲ್ಲಿಯವರೆಗೂ ಆಪಲ್ ಮತ್ತು ಸ್ಯಾಮ್‌ಸಂಗ್ ಮೊಬೈಲ್ ಕಂಪೆನಿಗಳ ನಡುವೆ ನಡೆಯುತ್ತಿದ್ದ ಕೋಳಿ ಜಗಳಕ್ಕೆ ಇದೀಗ ಚೀನಾದ ಒನ್‌ಪ್ಲಸ್ ಮೊಬೈಲ್ ಕಂಪೆನಿ ಕಾಲಿಟ್ಟಿದೆ. ಭಾರತದ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ 'ಒನ್‌ಪ್ಲಸ್' ಇದೀಗ ಒಂದು ಟ್ವಿಟ್ ಮೂಲಕ ಎವರ್‌ಗ್ರೀನ್ ಟೆಕ್ ಕಂಪೆನಿ ಆಪಲ್‌ನ ಕಾಲೆಳೆದಿದೆ.
ಹೌದು, ವಿಶ್ವ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗಲೂ ಮುಂಚೂಣಿಯಲ್ಲಿರುವ ಆಪಲ್ ಕಂಪನಿಯನ್ನು ಒನ್‌ಪ್ಲಸ್ ಕಂಪನಿ ಸಿಂಪಲ್ ಆಗಿ ಟ್ರೋಲ್ ಮಾಡಿದೆ. ಆಪಲ್ ಕಂಪನಿಯ ವಾಯ್ಸ್ ಅಸಿಸ್ಟೆಂಟ್ ಸಿರಿಯನ್ನು (ಸಿರಿ ಹೆಸರು ಮಾತ್ರ) ಬಳಸಿಕೊಂಡು ಒನ್‌ಪ್ಲಸ್ ಇಂಡಿಯಾ ಆಪಲ್ ಕಂಪೆನಿಯ ಕಾಲೆಳೆದಿದೆ. ಒನ್‌ಪ್ಲಸ್‌ನ ಆ ಕ್ರಿಯೇಟಿವ್ ಟ್ರೋಲ್ ಇದೀಗ ವೈರಲ್ ಆಗುತ್ತಿದೆ.
'ಹೇ ಸಿರಿ, ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಪೈಕಿ ನಂಬರ್ ಒನ್ ಯಾವುದು ಎಂದು ಪ್ರಶ್ನಿಸಿ, ಆ ಟ್ವೀಟ್ ಗೆ iDare you ಯೂ ಎಂದು ಬರೆದು ಟ್ವೀಟ್ ಮಾಡಿದೆ. ನಂತರ ಮತ್ತೊಂದು ಟ್ವಿಟ್‌ನಲ್ಲಿ ಒನ್‌ಪ್ಲಸ್ ಫೋನ್ ಸಿರಿಯನ್ನು ಬೆಂಬಲಿಸುವುದಿಲ್ಲ, ಗೂಗಲ್ ಅಸಿಸ್ಟೆಂಟ್ ಬೆಂಬಲಿಸುತ್ತದೆ ಎಂದು ಭಾರತದಲ್ಲಿ ತಾನು ಆಪಲ್ ಕಂಪೆನಿಯನ್ನು ಮೀರಿಸಿರುವ ಬಗ್ಗೆ ಕಾಲೆಳೆದಿದೆ.
iDare you pic.twitter.com/iSstVVv0aI
— OnePlus India (@OnePlus_IN) January 30, 2019
ಭಾರತದಲ್ಲಿ ಒನ್‌ಪ್ಲಸ್ ಹವಾ ಜೋರಾಗಿದ್ದು, 2018ರಲ್ಲಿ ಕೌಂಟರ್ ಪಾಯಿಂಟ್ ಬಿಡುಗಡೆ ಮಾಡಿರುವ ಮಾರುಕಟ್ಟೆಯ ವರದಿಯ ಪ್ರಕಾರ 30 ರಿಂದ 40 ಸಾವಿರ ರೂ. ಒಳಗೆ ಅತಿ ಹೆಚ್ಚು ಮಾರಾಟವಾದ ಮೊದಲ ಎರಡು ಫೋನ್‌ಗಳು ಒನ್‌ಪ್ಲಸ್‌ನದ್ದಾಗಿವೆ.ಒನ್‌ಪ್ಲಸ್ 6 ಮತ್ತು ಒನ್‌ಪ್ಲಸ್ 6ಟಿ ಎರಡು ಸ್ಮಾರ್ಟ್‌ಫೋನ್‌ಗಳು ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿವೆ.
Disclaimer: OnePlus phones do not support Siri as a feature. Try Google Assistant
— OnePlus India (@OnePlus_IN) January 30, 2019
ದೇಶದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಶೇ.34 ಪಾಲನ್ನು ಹೊಂದಿದ್ದರೆ ಒನ್ ಪ್ಲಸ್ ಕಂಪೆನಿ ಶೇ.33 ರಷ್ಟು ಪಾಲನ್ನು ಹೊಂದಿದೆ. ಆಪಲ್ ಕಂಪನಿಯ ಐಫೋನ್ ಶೇ.23 ರಷ್ಟು ಪಾಲನ್ನು ಮಾತ್ರ ಹೊಂದಿದೆ. ವಿಶ್ವದ ಎವರ್‌ಗ್ರೀನ್ ಕಂಪೆನಿ ಆಪಲ್ ಅನ್ನು ಹಿಂದಿಕ್ಕಿದ ಬರದಲ್ಲಿ ಒನ್‌ಪ್ಲಸ್ ಇಂತಹ ದೊಡ್ಡ ಮಾತನ್ನು ಹೇಳಿ ಹುಬ್ಬೇರಿಸಿದೆ.!