Just In
- 1 hr ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 2 hrs ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 4 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- 5 hrs ago
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
Don't Miss
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Movies
ಬಾಲನಟಿಯರಾಗಿ ಬಂದು ನಾಯಕಿಯರಾಗಿ ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯರ ಜರ್ನಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
43 ಇಂಚಿನ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಪರಿಚಯಿಸಲಿದೆ ಒನ್‌ಪ್ಲಸ್!
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಮನೆ ಮಾತಾಗಿರುವ ಒನ್‌ಪ್ಲಸ್ ಇದೀಗ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಮೂಲಕ ಭಾರತದ ಟಿವಿ ಮಾರುಕಟ್ಟೆಯಲ್ಲಿ ಬಿರುಗಾಳಿ ಬೀಸಲು ಬರುತ್ತಿದೆ. ಒನ್‌ಪ್ಲಸ್ ಶೀಘ್ರದಲ್ಲೇ ಹೊಸ ಟಿವಿಗಳನ್ನು ಬಿಡುಗಡೆ ಮಾಡಲು ತಯಾರಾಗಿದ್ದು, ಆ ಶ್ರೇಣಿಯು 43 ರಿಂದ 75 ಇಂಚುಗಳಷ್ಟು ಗಾತ್ರದಲ್ಲಿರಲಿವೆ ಎಂದು ವರದಿಗಳು ಹೇಳಿವೆ.

ಹೌದು, ಚೀನಾ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒನ್‌ಪ್ಲಸ್ ಟಿವಿಯನ್ನು ಪ್ರಾರಂಭಿಸಲು ಯೋಜಿಸಿದೆ ಮತ್ತು ಆ ಟಿವಿಯು 43 ಇಂಚುಗಳಿಂದ 75 ಇಂಚುಗಳವರೆಗೆ ವಿವಿಧ ಗಾತ್ರಗಳಲ್ಲಿ ಲಭ್ಯವಿರಬಹುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇದರಲ್ಲಿ 43 ಇಂಚಿನ ರೂಪಾಂತರದ ಟಿವಿಯು ಭಾರತದಲ್ಲಿ ಮಾತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ದೇಶದಲ್ಲಿ ಪ್ರೀಮಿಯಮ್ ಟಿವಿ ಮಾರುಕಟ್ಟೆಯನ್ನೇ ಗುರಿಯಾಗಿಸಿಕೊಂಡಿರುವ ಒನ್‌ಪ್ಲಸ್ ಕಂಪೆನಿ, ಭಾರತದ ಟಿವಿ ಉದ್ಯಮವನ್ನೇ ಬದಲಾಯಿಸುವ ನಿರೀಕ್ಷೆಯನ್ನು ಹೊಂದಿದೆ. ಹಾಗಾದರೆ, ಪ್ರೀಮಿಯಮ್ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್‌ಪ್ಲಸ್ ಕಂಪೆನಿಯ ಭಾರತದ ಮಾರುಕಟ್ಟೆಗೆ ತರುತ್ತಿರುವ ಪ್ರೀಮಿಯಮ್ ಸ್ಮಾರ್ಟ್ ಟಿವಿ ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಒನ್‌ಪ್ಲಸ್ ಮುಂದಿನ ನಡೆಯೇನು?
ಭಾರತದ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ದಿಗ್ಗಜ ಒನ್‌ಪ್ಲಸ್ ಮತ್ತೊಂದು ಹೆಜ್ಜೆಯನ್ನು ಇಡುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ, ನಮ್ಮ ಕಲ್ಪನೆಯು ಅಂತ್ಯವಿಲ್ಲ. ನಾವು ಭವಿಷ್ಯದ ಮುಂದೆ ನೋಡುತ್ತಿದ್ದೇವೆ ಎಂದುಒನ್‌ಪ್ಲಸ್ ಕಂಪೆನಿ ಸಹ ಸಂಸ್ಥಾಪಕ ಪೀಟ್ ಲೌ ಅವರು ಹೇಳಿದ್ದಾರೆ. ಹಾಗಾಗಿ, ಒನ್‌ಪ್ಲಸ್ ಪ್ರೀಮಿಯಮ್ ಟಿವಿ ಕುತೂಹಲ ಮೂಡಿಸಿದೆ.

ನಿರೀಕ್ಷೆಗೂ ಮೀರಿದ ಸ್ಮಾರ್ಟ್‌ಟಿವಿ!
ಮೊಬೈಲ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಕಂಪೆನಿಯಷ್ಟು ಅರ್ಥಮಾಡಿಕೊಂಡ ಮತ್ತೊಂದು ಕಂಪೆನಿ ಇಲ್ಲ ಎನ್ನುತ್ತಾರೆ. ಅದೇ ದೃಷ್ಟಿಯಲ್ಲಿ ನೋಡುವುದಾದರೆ, ಒನ್‌ಪ್ಲಸ್ ಕಂಪೆನಿ ಟೆಲಿವಿಷನ್ ಉದ್ಯಮದಲ್ಲಿ ಅಂತರವನ್ನು ಪರಿಹರಿಸಲು ಸಿದ್ಧವಾಗಿರುವುದಾಗಿ ಹೇಳಿಕೊಂಡಿದೆ. ಇದು ಪ್ರೀಮಿಯಂ ಟಿವಿ ವಿಭಾಗದಲ್ಲಿ ನಿರೀಕ್ಷೆಯನ್ನು ಮೀರಿರುವ ಸಾಧ್ಯತೆಗಳನ್ನು ಹೊಂದಿದೆ.

ಮಿತಿಯಿಲ್ಲದ ತಂತ್ರಜ್ಞಾನಗಳು
ಇಂದು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಟಿವಿಗಳು ಕೇವಲ ಟಿವಿಗಳಾಗಿ ಉಳಿದಿಲ್ಲ. ಹಾಗಾಗಿ, ಒನ್‌ಪ್ಲಸ್ ಕಂಪೆನಿ ತನ್ನ ಮುಂಬರುವ ಪ್ರೀಮಿಯಂ ಟಿವಿ ವಿಭಾಗದಲ್ಲಿ ಉತ್ತಮ ಗುಣಮಟ್ಟದ ಹಾರ್ಡ್ವೇರ್ಗಳನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಕೃತಕ ಬುದ್ದಿಮತ್ತೆ ತಂತ್ರಜ್ಞಾನಮಿತಿಯಿಲ್ಲದ ಬಳಕೆದಾರರ ಅನುಭವವನ್ನು ಸೃಷ್ಟಿಸುತ್ತವೆ ಎಂದು ಒನ್‌ಪ್ಲಸ್ ಕಂಪೆನಿಯೇ ಹೇಳಿಕೊಂಡಿದೆ.

ವಿನ್ಯಾಸಕ್ಕೆ ಸಾಟಿಯೇ ಇಲ್ಲವಂತೆ.!
ಭಾರತದ ಟಿವಿ ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಆವೃತ್ತಿಯಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿರುವ ಒನ್‌ಪ್ಲಸ್ ಈ ವರೆಗೂ ಟಿವಿಗೆ ಹೆಸರನ್ನು ನಿಗದಿಪಡಿಸಿಲ್ಲ. ಆದರೆ, ಒನ್‌ಪ್ಲಸ್ ಕಂಪೆನಿಯ ಟಿವಿ ತನ್ನ ವಿನ್ಯಾಸದಿಂದಲೇ ಹೆಚ್ಚು ಸದ್ದು ಮಾಡಲಿದೆ ಎಂದು ಒನ್‌ಪ್ಲಸ್ ಮಾಹಿತಿ ಬಿಟ್ಟುಕೊಟ್ಟಿದೆ. ಇದು ಸ್ಯಾಮ್‌ಸಂಗ್ ಕಂಪೆನಿಗೆ ನೇರ ಸವಾಲಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಏನೆನೆಲ್ಲಾ ನಿರೀಕ್ಷಿಸಬಹುದು?
ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಕಣ್ಣಿಗೆ ಬೇಕಾದಂತಹ ಸ್ಮಾರ್ಟ್‌ಟಿವಿಗಳು ಲಭ್ಯವಿವೆ. ಆದರೆ, ಒನ್‌ಪ್ಲಸ್ ಟಿವಿ ಇಷ್ಟು ಕುತೋಹಲ ಮುಡಿಸಲು ಅದರ ತಂತ್ರಜ್ಞಾನ ಕೂಡ ಕಾರಣ. ಹಾಗಾಗಿ, 4K ಮೀರಿದ ಡಿಸ್‌ಪ್ಲೇ, ಆಂಡ್ರಾಯ್ಡ್ ಪ್ಯಾಕ್, ಸಂಪೂರ್ಣ ವಾಯ್ಸ್ ಅಸಿಸ್ಟೆಂಟ್, ಬೆಸ್ಟ್ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್‌ಗಳನ್ನು ಒನ್‌ಪ್ಲಸ್ ಅಭಿಮಾನಿಗಳು ನಿರೀಕ್ಷಿಸಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470