ಭಾರತದಲ್ಲೇ ಮೊದಲು ಬಿಡುಗಡೆಯಾಗುತ್ತಿದೆ 'ಒನ್‌ಪ್ಲಸ್ ಟಿವಿ'!
ಭಾರತದ ನಂ.1 ಪ್ರೀಮಿಯಂ ಸ್ಮಾರ್ಟ್‌ಪೋನ್ ಬ್ರ್ಯಾಂಡ್ ಕಂಪೆನಿ ಒನ್‌ಪ್ಲಸ್ ಭಾರತೀಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶದ ಟಿವಿ ಮಾರುಕಟ್ಟೆಯಲ್ಲಿ ಪ್ರಬಲವಾಗಿರುವ ಶಿಯೋಮಿಯ ಮಿ ಟಿವಿಗಳಿಗೆ ಸೆಡ್ಡುಹೊಡೆಯುವ ಸಲುವಾಗಿ, ಭಾರತದಲ್ಲೇ ಮೊದಲು ತನ್ನ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ ತಿಂಗಳ ವೇಳೆಗೆ ವಿಭಿನ್ನ ಪರದೆಯ ಗಾತ್ರಗಳಲ್ಲಿರುವ ಒನ್‌ಪ್ಲಸ್ ಸ್ಮಾರ್ಟ್‌ಟಿವಿಗಳು ಭಾರತದಲ್ಲಿ ಬಿಡುಗಡೆಯಾಗಲಿವೆ.

ಈಗಾಗಲೇ ತನ್ನ ಮೊಟ್ಟ ಮೊದಲ ಟಿವಿ ಹೆಸರು, ಬ್ರ್ಯಾಂಡ್ ಮತ್ತು ಲೋಗೋವನ್ನು ಈಗಾಗಲೇ ಅನಾವರಣಗೊಳಿಸಿರುವ ಒನ್‌ಪ್ಲಸ್ ಕಂಪೆನಿ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ಸ್ಮಾರ್ಟ್‌ವಿಟಿಯನ್ನು ಪರಿಚಯಿಸಲಿದೆ. 43, 65 ಮತ್ತು 75 ಇಂಚುಗಳ ಗಾತ್ರದಲ್ಲಿ ಒನ್‌ಪ್ಲಸ್ ಸ್ಮಾರ್ಟ್ ಟಿವಿಗಳು ದೇಶದಲ್ಲಿ ಬಿಡಗಡೆಯಾಗುವ ಸಾಧ್ಯತೆಗಳಿವೆ. ಇವುಗಳಲ್ಲಿ, 75 ಇಂಚಿನ ರೂಪಾಂತರವು ಯುಎಸ್ ಮತ್ತು ಚೀನಾದಲ್ಲಿ ಮಾತ್ರ ಲಭ್ಯವಿರಬಹುದು ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.
ಒನ್‌ಪ್ಲಸ್ ಟಿವಿ ಫುಲ್ ಎಚ್‌ಡಿ ರೆಸೊಲ್ಯೂಶನ್‌ನಿಂದ ತೊಡಗಿ, ಕ್ಯೂಎಚ್‌ಡಿ ರೆಸೊಲ್ಯೂಶನ್‌ವರೆಗೆ ಲಭ್ಯವಾಗಲಿದೆ. ಗೂಗಲ್‌ನ ಅಂಡ್ರಾಯ್ಡ್ ಟಿವಿ ಆಪರೇಟಿಂಗ್ ವ್ಯವಸ್ಥೆಯನ್ನು ಒನ್‌ಪ್ಲಸ್ ಬಳಸುತ್ತಿದ್ದು, ಅಂತರ್ಗತ ಕ್ಯಾಮರಾ, ಗೂಗಲ್ ಅಸಿಸ್ಟೆಂಟ್ ವಾಯ್ಸ್ ಕಂಟ್ರೋಲ್ ವ್ಯವಸ್ಥೆ ಕೂಡ ಲಭ್ಯವಾಗಲಿದೆ. ವಿನ್ಯಾಸದಲ್ಲಿ ಒನ್‌ಪ್ಲಸ್ ಯಾವಾಗಲೂ ವಿಶೇಷವಾಗಿದ್ದು, ಹೆಚ್ಚು ಆಕರ್ಷಕವಾಗಿರಲಿದೆ. ಜತೆಗೆ ಸುಲಭ ಮತ್ತು ವೇಗದ ಸಂಪರ್ಕಕ್ಕೆ ಅನುಕೂಲವಾಗುವಂತೆ ಒನ್‌ಪ್ಲಸ್ ಟಿವಿ ಬ್ಲೂಟೂತ್ 5.0 ವ್ಯವಸ್ಥೆ ಹೊಂದಿರುತ್ತದೆ.

ದೇಶದಲ್ಲಿನ ಟಿವಿ ಮಾರುಕಟ್ಟೆಯ ಬೇಡಿಕೆಯಿಂದಾಗಿ ಒನ್‌ಪ್ಲಸ್ ಆದ್ಯತೆಯ ಮೇರೆಗೆ ಭಾರತದಲ್ಲಿ ಹೊಸ ಟಿವಿ ಪರಿಚಯಿಸಲಿದೆ. ಜತೆಗೆ ಚೀನಾ, ಕೆನಡಾ ಮತ್ತು ಅಮೆರಿಕದಲ್ಲೂ ಮಾರುಕಟ್ಟೆ ಪ್ರವೇಶಿಸಲಿದೆ. ಹೀಗಾಗಿ ಸಹಜವಾಗಿಯೇ ಜನರಿಗೆ ಹೊಸ ಟಿವಿ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಉಂಟಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಶಿಯೋಮಿ ಎಂಐ ಸ್ಮಾರ್ಟ್‌ಟಿವಿಗಳ ಜತೆ ಒನ್‌ಪ್ಲಸ್ ದರಸಮರಕ್ಕೆ ಮುಂದಾಗುವ ಸಾಧ್ಯತೆಯಿದ್ದು, ಇದರಿಂದ ಗ್ರಾಹಕರಿಗೆ ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ.
ಭಾರತದ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ದಿಗ್ಗಜ ಒನ್‌ಪ್ಲಸ್ ಮತ್ತೊಂದು ಹೆಜ್ಜೆಯನ್ನು ಇಡುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ, ನಮ್ಮ ಕಲ್ಪನೆಯು ಅಂತ್ಯವಿಲ್ಲ. ನಾವು ಭವಿಷ್ಯದ ಮುಂದೆ ನೋಡುತ್ತಿದ್ದೇವೆ ಎಂದುಒನ್‌ಪ್ಲಸ್ ಕಂಪೆನಿ ಸಹ ಸಂಸ್ಥಾಪಕ ಪೀಟ್ ಲೌ ಅವರು ಹೇಳಿದ್ದಾರೆ. ಒನ್‌ಪ್ಲಸ್ ಕಂಪೆನಿ ಟೆಲಿವಿಷನ್ ಉದ್ಯಮದಲ್ಲಿ ಅಂತರವನ್ನು ಪರಿಹರಿಸಲು ಸಿದ್ಧವಾಗಿರುವುದಾಗಿ ಹೇಳಿಕೊಂಡಿದೆ. ಇದು ಪ್ರೀಮಿಯಂ ಟಿವಿ ವಿಭಾಗದಲ್ಲಿ ನಿರೀಕ್ಷೆಯನ್ನು ಮೀರಿರುವ ಸಾಧ್ಯತೆಗಳನ್ನು ಹೊಂದಿದೆ.
ಇಂದು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಟಿವಿಗಳು ಕೇವಲ ಟಿವಿಗಳಾಗಿ ಉಳಿದಿಲ್ಲ. ಹಾಗಾಗಿ, ಒನ್‌ಪ್ಲಸ್ ಕಂಪೆನಿ ತನ್ನ ಮುಂಬರುವ ಪ್ರೀಮಿಯಂ ಟಿವಿ ವಿಭಾಗದಲ್ಲಿ ಉತ್ತಮ ಗುಣಮಟ್ಟದ ಹಾರ್ಡ್ವೇರ್ಗಳನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಕೃತಕ ಬುದ್ದಿಮತ್ತೆ ತಂತ್ರಜ್ಞಾನಮಿತಿಯಿಲ್ಲದ ಬಳಕೆದಾರರ ಅನುಭವವನ್ನು ಸೃಷ್ಟಿಸುತ್ತವೆ ಮತ್ತು ಟಿವಿ ತನ್ನ ವಿನ್ಯಾಸದಿಂದಲೇ ಹೆಚ್ಚು ಸದ್ದು ಮಾಡಲಿದೆ ಎಂದು ಒನ್‌ಪ್ಲಸ್ ಕಂಪೆನಿಯೇ ಹೇಳಿಕೊಂಡಿದೆ.


Click it and Unblock the Notifications