Just In
- 4 hrs ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- 4 hrs ago
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
- 7 hrs ago
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- 7 hrs ago
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
Don't Miss
- Movies
Katheyondu Shuruvagide: ಕೃತಿಯನ್ನು ಮದುವೆಯಾದರೂ ವರ್ಣಿಕಾಳ ಹುಡುಕಾಟ ನಡೆಸುತ್ತಿರುವುದ್ಯಾಕೆ ಯುವರಾಜ..?
- News
Padma Awards 2023: ಎಸ್.ಎಲ್.ಭೈರಪ್ಪ, ಎಸ್.ಎಂ.ಕೃಷ್ಣ, ಸುಧಾ ಮೂರ್ತಿ, ರಾಣಿ ಮಾಚಯ್ಯಗೆ ಪ್ರಶಸ್ತಿ
- Sports
WIPL 2023: ಮಹಿಳಾ ಐಪಿಎಲ್ ಫ್ರಾಂಚೈಸಿ ಗೆದ್ದ ಆರ್ಸಿಬಿ; ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು?
- Lifestyle
ಗರುಡ ಪುರಾಣ ಪ್ರಕಾರ ಈ 4 ಗುಣಗಳಿದ್ದರೆ ಆ ವ್ಯಕ್ತಿ ಖಂಡಿತ ಯಶಸ್ವಿಯಾಗುತ್ತಾನೆ
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೆಪ್ಟೆಂಬರ್ ತಿಂಗಳಿನಲ್ಲಿ ಒನ್‌ಪ್ಲಸ್ ಟಿವಿ ಬಿಡುಗಡೆ ಸಾಧ್ಯತೆ!
ತನ್ನ ಮೊಟ್ಟ ಮೊದಲ ಟಿವಿ ಹೆಸರು, ಬ್ರ್ಯಾಂಡ್ ಮತ್ತು ಲೋಗೋವನ್ನು ಈಗಾಗಲೇ ಅನಾವರಣಗೊಳಿಸಿರುವ ಒನ್‌ಪ್ಲಸ್ ಕಂಪೆನಿ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ಸ್ಮಾರ್ಟ್‌ವಿಟಿಯನ್ನು ಪರಿಚಯಿಸಲಿದೆ ಎಂದು ತಿಳಿದುಬಂದಿದೆ. 43 ಇಂಚು, 55 ಇಂಚು, 65 ಇಂಚು ಮತ್ತು 75 ಎಂಬ ನಾಲ್ಕು ಸ್ಕ್ರೀನ್ ಗಾತ್ರಗಳಲ್ಲಿ ಸೆಪ್ಟೆಂಬರ್ ತಿಂಗಳಿನ ವೇಳೆಗೆ ಒನ್‌ಪ್ಲಸ್ ಟಿವಿ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಕಂಪೆನಿಯ ಖಚಿತ ಮೂಲಗಳು ತಿಳಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಒನ್‌ಪ್ಲಸ್ ಟಿವಿ ಫುಲ್ ಎಚ್‌ಡಿ ರೆಸೊಲ್ಯೂಶನ್‌ನಿಂದ ತೊಡಗಿ, ಕ್ಯೂಎಚ್‌ಡಿ ರೆಸೊಲ್ಯೂಶನ್‌ವರೆಗೆ ಲಭ್ಯವಾಗಲಿದೆ. ಗೂಗಲ್‌ನ ಅಂಡ್ರಾಯ್ಡ್ ಟಿವಿ ಆಪರೇಟಿಂಗ್ ವ್ಯವಸ್ಥೆಯನ್ನು ಒನ್‌ಪ್ಲಸ್ ಬಳಸುತ್ತಿದ್ದು, ಅಂತರ್ಗತ ಕ್ಯಾಮರಾ, ಗೂಗಲ್ ಅಸಿಸ್ಟೆಂಟ್ ವಾಯ್ಸ್ ಕಂಟ್ರೋಲ್ ವ್ಯವಸ್ಥೆ ಕೂಡ ಲಭ್ಯವಾಗಲಿದೆ. ವಿನ್ಯಾಸದಲ್ಲಿ ಒನ್‌ಪ್ಲಸ್ ಯಾವಾಗಲೂ ವಿಶೇಷವಾಗಿದ್ದು, ಹೆಚ್ಚು ಆಕರ್ಷಕವಾಗಿರಲಿದೆ. ಜತೆಗೆ ಸುಲಭ ಮತ್ತು ವೇಗದ ಸಂಪರ್ಕಕ್ಕೆ ಅನುಕೂಲವಾಗುವಂತೆ ಒನ್‌ಪ್ಲಸ್ ಟಿವಿ ಬ್ಲೂಟೂತ್ 5.0 ವ್ಯವಸ್ಥೆ ಹೊಂದಿರುತ್ತದೆ.
ದೇಶದಲ್ಲಿನ ಟಿವಿ ಮಾರುಕಟ್ಟೆಯ ಬೇಡಿಕೆಯಿಂದಾಗಿ ಒನ್‌ಪ್ಲಸ್ ಆದ್ಯತೆಯ ಮೇರೆಗೆ ಭಾರತದಲ್ಲಿ ಹೊಸ ಟಿವಿ ಪರಿಚಯಿಸಲಿದೆ. ಜತೆಗೆ ಚೀನಾ, ಕೆನಡಾ ಮತ್ತು ಅಮೆರಿಕದಲ್ಲೂ ಮಾರುಕಟ್ಟೆ ಪ್ರವೇಶಿಸಲಿದೆ. ಹೀಗಾಗಿ ಸಹಜವಾಗಿಯೇ ಜನರಿಗೆ ಹೊಸ ಟಿವಿ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಉಂಟಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಶಿಯೋಮಿ ಎಂಐ ಸ್ಮಾರ್ಟ್‌ಟಿವಿಗಳ ಜತೆ ಒನ್‌ಪ್ಲಸ್ ದರಸಮರಕ್ಕೆ ಮುಂದಾಗುವ ಸಾಧ್ಯತೆಯಿದ್ದು, ಇದರಿಂದ ಗ್ರಾಹಕರಿಗೆ ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ.
ಭಾರತದ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ದಿಗ್ಗಜ ಒನ್‌ಪ್ಲಸ್ ಮತ್ತೊಂದು ಹೆಜ್ಜೆಯನ್ನು ಇಡುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ, ನಮ್ಮ ಕಲ್ಪನೆಯು ಅಂತ್ಯವಿಲ್ಲ. ನಾವು ಭವಿಷ್ಯದ ಮುಂದೆ ನೋಡುತ್ತಿದ್ದೇವೆ ಎಂದುಒನ್‌ಪ್ಲಸ್ ಕಂಪೆನಿ ಸಹ ಸಂಸ್ಥಾಪಕ ಪೀಟ್ ಲೌ ಅವರು ಹೇಳಿದ್ದಾರೆ. ಒನ್‌ಪ್ಲಸ್ ಕಂಪೆನಿ ಟೆಲಿವಿಷನ್ ಉದ್ಯಮದಲ್ಲಿ ಅಂತರವನ್ನು ಪರಿಹರಿಸಲು ಸಿದ್ಧವಾಗಿರುವುದಾಗಿ ಹೇಳಿಕೊಂಡಿದೆ. ಇದು ಪ್ರೀಮಿಯಂ ಟಿವಿ ವಿಭಾಗದಲ್ಲಿ ನಿರೀಕ್ಷೆಯನ್ನು ಮೀರಿರುವ ಸಾಧ್ಯತೆಗಳನ್ನು ಹೊಂದಿದೆ.
ಇಂದು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಟಿವಿಗಳು ಕೇವಲ ಟಿವಿಗಳಾಗಿ ಉಳಿದಿಲ್ಲ. ಹಾಗಾಗಿ, ಒನ್‌ಪ್ಲಸ್ ಕಂಪೆನಿ ತನ್ನ ಮುಂಬರುವ ಪ್ರೀಮಿಯಂ ಟಿವಿ ವಿಭಾಗದಲ್ಲಿ ಉತ್ತಮ ಗುಣಮಟ್ಟದ ಹಾರ್ಡ್ವೇರ್ಗಳನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಕೃತಕ ಬುದ್ದಿಮತ್ತೆ ತಂತ್ರಜ್ಞಾನಮಿತಿಯಿಲ್ಲದ ಬಳಕೆದಾರರ ಅನುಭವವನ್ನು ಸೃಷ್ಟಿಸುತ್ತವೆ ಮತ್ತು ಟಿವಿ ತನ್ನ ವಿನ್ಯಾಸದಿಂದಲೇ ಹೆಚ್ಚು ಸದ್ದು ಮಾಡಲಿದೆ ಎಂದು ಒನ್‌ಪ್ಲಸ್ ಕಂಪೆನಿಯೇ ಹೇಳಿಕೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470