ಇದೇ ಸೆ.26 ರಂದು ಮಾರುಕಟ್ಟೆಗೆ 'ಒನ್‌ಪ್ಲಸ್ ಟಿವಿ'!..ಭಾರತದಲ್ಲೇ ಮೊದಲು!

|

ವಿಶ್ವದ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಒನ್‌ಪ್ಲಸ್‌ ಕಂಪನಿ ಇದೇ 26 ರಂದು ಟಿವಿ ಮಾರುಕಟ್ಟೆಗೂ ಲಗ್ಗೆ ಇಡುವುದು ಖಚಿತವಾಗಿದೆ. ದೆಹಲಿಯಲ್ಲಿ ‌ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 26 ರಂದು ತನ್ನ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡುವುದಾಗಿ ಕಂಪೆನಿ ತಿಳಿಸಿದೆ. ಪ್ರೀಮಿಯಂ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ಅತಿರಥ ಕಂಪೆನಿಗಳನ್ನು ಹಿಂದಿಕ್ಕಿದ್ದ ಒನ್‌ಪ್ಲಸ್ ಈಗ ಸ್ಮಾರ್ಟ್‌ ಟಿವಿ ಉದ್ಯಮದಲ್ಲಿ ಯಶಸ್ಸು ಕಾಣಲು ಮುಂದಾಗಿದೆ.

ಇದೇ ಸೆ.26 ರಂದು ಮಾರುಕಟ್ಟೆಗೆ 'ಒನ್‌ಪ್ಲಸ್ ಟಿವಿ'!..ಭಾರತದಲ್ಲೇ ಮೊದಲು!

ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಮನೆ ಮಾತಾಗಿರುವ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಅಲ್ಪಕಾಲದಲ್ಲೇ ಮೇಲುಗೈ ಸಾಧಿಸಿದೆ. ಇದೀಗ ಪ್ರೀಮಿಯಂ ಟಿವಿ ಮೂಲಕ ಭಾರತದ ಟಿವಿ ಮಾರುಕಟ್ಟೆಯಲ್ಲಿ ಬಿರುಗಾಳಿ ಬೀಸಲು ಬರುತ್ತಿದ್ದುಲ, ಒನ್‌ಪ್ಲಸ್‌ ಟಿವಿ ಬಗೆಗಿನ ಪ್ರಾಥಮಿಕ ಮಾಹಿತಿಯಂತೆ, 55 ಇಂಚಿನ 4ಕೆ ಕ್ಯುಎಲ್‌ಇಡಿ ಪರದೆ, ಸ್ರೀನ್ ಗುಣಮಟ್ಟ ಹೆಚ್ಚಿಸಲು ಡಾಲ್ಟಿ ವಿಷನ್, ಸಿನಿಮ್ಯಾಟಿಕ್ ಸೌಂಡ್ ಸ್ಪೇಸ್‌ಗಾಗಿ ಡಾಲ್ಟಿ ಆಟ್ಮೋಸ್ 8 ಸ್ಪೀಕರ್ ನಂತಹ ಫೀಚರ್ಸ್ ಅನ್ನು ಸಾಧನವು ಒಳಗೊಂಡಿರಲಿದೆ.

ವಿಶೇಷವೆಂದರೆ, ಒನ್‌ಪ್ಲಸ್‌ ಮೂಲತಃ ಚೀನಾದ ಕಂಪೆನಿಯಾಗಿದ್ದರೂ ಸಹ ಭಾರತದಲ್ಲೇ ಮೊದಲು ತನ್ನ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡುತ್ತಿದೆ. ದೇಶದ ಪ್ರೀಮಿಯಮ್ ಟಿವಿ ಮಾರುಕಟ್ಟೆಯನ್ನೇ ಗುರಿಯಾಗಿಸಿಕೊಂಡಿರುವ ಒನ್‌ಪ್ಲಸ್ ಕಂಪೆನಿ, ಭಾರತದ ಟಿವಿ ಉದ್ಯಮವನ್ನೇ ಬದಲಾಯಿಸುವ ನಿರೀಕ್ಷೆಯನ್ನು ಹೊಂದಿದೆ. ಹಾಗಾದರೆ, ಪ್ರೀಮಿಯಮ್ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್‌ಪ್ಲಸ್ ಕಂಪೆನಿಯ ಭಾರತದ ಮಾರುಕಟ್ಟೆಗೆ ತರುತ್ತಿರುವ ಪ್ರೀಮಿಯಮ್ ಸ್ಮಾರ್ಟ್ ಟಿವಿ ಹೇಗಿರಲಿದೆ ಎಂಬುದನ್ನು ಮುಂದೆ ತಿಳಿಯಿರಿ.

ನಮ್ಮ ಕಲ್ಪನೆಗೆ ಅಂತ್ಯವಿಲ್ಲ.

ನಮ್ಮ ಕಲ್ಪನೆಗೆ ಅಂತ್ಯವಿಲ್ಲ.

ಭಾರತದ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ದಿಗ್ಗಜ ಒನ್‌ಪ್ಲಸ್ ಮತ್ತೊಂದು ಹೆಜ್ಜೆಯನ್ನು ಇಡುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ, ನಮ್ಮ ಕಲ್ಪನೆಗೆ ಅಂತ್ಯವಿಲ್ಲ. ನಾವು ಭವಿಷ್ಯದ ಮುಂದೆ ನೋಡುತ್ತಿದ್ದೇವೆ ಎಂದುಒನ್‌ಪ್ಲಸ್ ಕಂಪೆನಿ ಸಹ ಸಂಸ್ಥಾಪಕ ಪೀಟ್ ಲೌ ಅವರು ಹೇಳಿದ್ದಾರೆ. ಹಾಗಾಗಿ, ಒನ್‌ಪ್ಲಸ್ ಪ್ರೀಮಿಯಮ್ ಟಿವಿ ಕುತೋಹಲ ಮೂಡಿಸಿದೆ.

ನಿರೀಕ್ಷೆಗೂ ಮೀರಿದ ಸ್ಮಾರ್ಟ್‌ಟಿವಿ!

ನಿರೀಕ್ಷೆಗೂ ಮೀರಿದ ಸ್ಮಾರ್ಟ್‌ಟಿವಿ!

ಮೊಬೈಲ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಕಂಪೆನಿಯಷ್ಟು ಅರ್ಥಮಾಡಿಕೊಂಡ ಮತ್ತೊಂದು ಕಂಪೆನಿ ಇಲ್ಲ ಎನ್ನುತ್ತಾರೆ. ಅದೇ ದೃಷ್ಟಿಯಲ್ಲಿ ನೋಡುವುದಾದರೆ, ಒನ್‌ಪ್ಲಸ್ ಕಂಪೆನಿ ಟೆಲಿವಿಷನ್ ಉದ್ಯಮದಲ್ಲಿ ಅಂತರವನ್ನು ಪರಿಹರಿಸಲು ಸಿದ್ಧವಾಗಿರುವುದಾಗಿ ಹೇಳೀಕೊಂಡಿದೆ. ಇದು ಪ್ರೀಮಿಯಂ ಟಿವಿ ವಿಭಾಗದಲ್ಲಿ ನಿರೀಕ್ಷೆಯನ್ನು ಮೀರಿರುವ ಸಾಧ್ಯತೆಯಗಳನ್ನು ಹೊಂದಿದೆ.

ಮಿತಿಯಿಲ್ಲದ ತಂತ್ರಜ್ಞಾನಗಳು

ಇಂದು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಟಿವಿಗಳು ಕೇವಲ ಟಿವಿಗಳಾಗಿ ಉಳಿದಿಲ್ಲ. ಹಾಗಾಗಿ, ಒನ್‌ಪ್ಲಸ್ ಕಂಪೆನಿ ತನ್ನ ಮುಂಬರುವ ಪ್ರೀಮಿಯಂ ಟಿವಿ ವಿಭಾಗದಲ್ಲಿ ಉತ್ತಮ ಗುಣಮಟ್ಟದ ಹಾರ್ಡ್ವೇರ್ಗಳನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಮಿತಿಯಿಲ್ಲದ ಬಳಕೆದಾರರ ಅನುಭವವನ್ನು ಸೃಷ್ಟಿಸುತ್ತವೆ ಎಂದು ಒನ್‌ಪ್ಲಸ್ ಕಂಪೆನಿಯೇ ಹೇಳಿಕೊಂಡಿದೆ.

ವಿನ್ಯಾಸಕ್ಕೆ ಸಾಟಿಯೇ ಇಲ್ಲವಂತೆ.!

ಭಾರತದ ಟಿವಿ ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಆವೃತ್ತಿಯಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿರುವ ಟಿವಿಗೆ ಒನ್‌ಪ್ಲಸ್ ಟಿವಿ ಎಂದು ಹೆಸರಿಸಲಾಗಿದೆ. ಒನ್‌ಪ್ಲಸ್ ಟಿವಿ ತನ್ನ ವಿನ್ಯಾಸದಿಂದಲೇ ಹೆಚ್ಚು ಸದ್ದು ಮಾಡಲಿದೆ ಎಂದು ಒನ್‌ಪ್ಲಸ್ ಕಂಪೆನಿ ಮಾಹಿತಿ ನೀಡಿದೆ. ಇದು ಸ್ಯಾಮ್‌ಸಂಗ್, ಎಲ್‌ಜಿ ಮತ್ತು ಸೋನಿ ಕಂಪೆನಿಗಳಿಗೆ ನೇರ ಸವಾಲಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಏನೆನೆಲ್ಲಾ ನಿರೀಕ್ಷಿಸಬಹುದು?

ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಕಣ್ಣಿಗೆ ಬೇಕಾದಂತಹ ಸ್ಮಾರ್ಟ್‌ಟಿವಿಗಳು ಲಬ್ಯವಿವೆ. ಆದರೆ, ಒನ್‌ಪ್ಲಸ್ ಟಿವಿ ಇಷ್ಟು ಕುತೋಹಲ ಮುಡಿಸಲು ಅದರ ತಂತ್ರಜ್ಞಾನ ಕೂಡ ಕಾರಣ. ಹಾಗಾಗಿ, 4ಕೆ ಕ್ಯುಎಲ್‌ಇಡಿ ಪರದೆ, ಸ್ರೀನ್ ಗುಣಮಟ್ಟ ಹೆಚ್ಚಿಸಲು ಡಾಲ್ಟಿ ವಿಷನ್, ಸಿನಿಮ್ಯಾಟಿಕ್ ಸೌಂಡ್ ಸ್ಪೇಸ್‌, ವಾಯ್ಸ್ ಅಸಿಸ್ಟೆಂಟ್, ಬೆಸ್ಟ್ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್‌ಗಳನ್ನು ಒನ್‌ಪ್ಲಸ್ ಅಭಿಮಾನಿಗಳು ನಿರೀಕ್ಷಿಸಬಹುದಾಗಿದೆ.

Best Mobiles in India

English summary
As well as making popular smartphones, OnePlus has a 55in QLED TV on the way. Here's what we know about the set and when the OnePlus TV is coming out. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X