ಅಮೆಜಾನ್‌ನಲ್ಲಿ ಒನ್‌ಪ್ಲಸ್‌ ಟಿವಿ ಮಾರಾಟ ಫಿಕ್ಸ್‌..! ತಿಂಗಳಾಂತ್ಯಕ್ಕೆ ಮಾರುಕಟ್ಟೆಗೆ..?

By Gizbot Bureau
|

ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ತನ್ನ ಮ್ಯಾಜಿಕ್‌ ತೋರಿಸಿರುವ ಚೀನಾ ಮೂಲದ ಒನ್‌ಪ್ಲಸ್ ಕಂಪನಿಯಿಂದ ಮಾರುಕಟ್ಟೆಗೆ ಟಿವಿ ಬರುತ್ತಿರುವ ಸುದ್ದಿ ಈಗ ಹಳೆಯದೇ ಎನ್ನಬಹುದು. ಆದರೆ, ಹೊಸ ಟಿವಿ ಸುತ್ತ ಹಲವು ನಿರೀಕ್ಷೆಗಳು ಹುಟ್ಟಿಕೊಂಡಿದ್ದು, ಗ್ರಾಹಕರಿಗೆ ಕೌತುಕವನ್ನು ಹೆಚ್ಚಿಸಿದೆ. ಒನ್‌ಪ್ಲಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿರುವ ಪೀಟ್ ಲಾ ಹೊಸ ಟಿವಿಯ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ ಒನ್‌ಪ್ಲಸ್‌ ಟಿವಿ ಯಾವಾಗ, ಎಲ್ಲಿ ದೊರೆಯುತ್ತದೆ ಎಂಬುದರ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

ಅಮೆಜಾನ್‌ನಲ್ಲಿ ಲಭ್ಯ

ಅಮೆಜಾನ್‌ನಲ್ಲಿ ಲಭ್ಯ

ಪೀಟ್‌ ಲಾ ನೀಡಿರುವ ಮಾಹಿತಿಯಂತೆ ಒನ್‌ಪ್ಲಸ್ ಟಿವಿ ಅಮೆಜಾನ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ ಎಂಬುದು ಗೊತ್ತಾಗಿದೆ. ಆದರೆ, ಅಧಿಕೃತ ಬಿಡುಗಡೆಯ ದಿನಾಂಕವನ್ನು ಮಾತ್ರ ಬಹಿರಂಗಗೊಂಡಿಲ್ಲ.

ಗ್ರೇಟ್‌ ಸೇಲ್‌ನಲ್ಲಿ ಮಾರಾಟ

ಗ್ರೇಟ್‌ ಸೇಲ್‌ನಲ್ಲಿ ಮಾರಾಟ

ಬಿಡುಗಡೆಯ ದಿನಾಂಕ ಬಹಿರಂಗವಾಗದಿದ್ದರೂ ಒನ್‌ಪ್ಲಸ್‌ ಟಿವಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ‘ಹೊಸ ಲಾಂಚಿಂಗ್‌' ಉತ್ಪನ್ನಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಮುಂದಿನ ಮಾರಾಟಕ್ಕಾಗಿ ಮೈಕ್ರೋಸೈಟ್‌ನ್ನು ಮೀಸಲಿಡಲಾಗಿದೆ. ಇದು ಮಾರಾಟದ ಸಮಯದಲ್ಲಿ ಬಿಡುಗಡೆಯಾಗುವ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಈ ಪಟ್ಟಿಯಲ್ಲಿ ಒನ್‌ಪ್ಲಸ್ ಟಿವಿ ಕೂಡ ಕಾಣಿಸಿಕೊಂಡಿದೆ.

ಗ್ರೇಟ್‌ ಸೇಲ್‌ ಘೋಷಣೆಯಾಗಿಲ್ಲ

ಗ್ರೇಟ್‌ ಸೇಲ್‌ ಘೋಷಣೆಯಾಗಿಲ್ಲ

ಅಮೆಜಾನ್ ತನ್ನ ವಾರ್ಷಿಕ ಹಬ್ಬದ ಮಾರಾಟದ ದಿನವನ್ನು ಇದುವರೆಗೂ ಘೋಷಿಸಿಲ್ಲ. ಈ ಬೃಹತ್ ಮಾರಾಟ ಸಾಮಾನ್ಯವಾಗಿ 4 ರಿಂದ 5 ದಿನಗಳವರೆಗೆ ಇರುತ್ತದೆ. ಆದರೆ, ಪ್ರತಿಸ್ಪರ್ಧಿ ಫ್ಲಿಪ್‌ಕಾರ್ಟ್ ಈಗಾಗಲೇ ತನ್ನ ಬಿಗ್ ಬಿಲಿಯನ್ ಡೇ ಮಾರಾಟವನ್ನು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4 ರವರೆಗೆ ನಡೆಸುತ್ತಿರುವುದರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಹ ಇದೇ ಸಮಯದಲ್ಲಿ ನಡೆಯುವ ನಿರೀಕ್ಷೆ ಇದೆ.

ಒನ್‌ಪ್ಲಸ್‌ ಟಿವಿ

ಒನ್‌ಪ್ಲಸ್‌ ಟಿವಿ

ಅಮೆಜಾನ್‌ ಪಟ್ಟಿ ಮಾಡಿರುವಂತೆ ಒನ್‌ಪ್ಲಸ್ ಟಿವಿ 4ಕೆ ಕ್ಯೂಎಲ್‌ಇಡಿ ರೆಸಲ್ಯೂಶನ್‌ನೊಂದಿಗೆ 55 ಇಂಚಿನ ಪರದೆಯನ್ನು ಹೊಂದಿದೆ. ಇಷ್ಟೇ ಅಲ್ಲದೇ, ಬ್ಲೂಟೂತ್ ಎಸ್‌ಐಜಿ ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದಂತೆ 43 ಇಂಚು, 65 ಇಂಚು ಮತ್ತು 75 ಇಂಚಿನ ಪರದೆಯ ಟಿವಿಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.

ಗೂಗಲ್‌ ಆಂಡ್ರಾಯ್ಡ್‌ ಟಿವಿ

ಗೂಗಲ್‌ ಆಂಡ್ರಾಯ್ಡ್‌ ಟಿವಿ

ಒನ್‌ಪ್ಲಸ್ ಟಿವಿ ಗೂಗಲ್‌ನ ಆಂಡ್ರಾಯ್ಡ್ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಕನಿಷ್ಠ ಮೂರು ವರ್ಷಗಳವರೆಗೆ ಆಂಡ್ರಾಯ್ಡ್ ಟಿವಿ ಅಪ್‌ಡೇಟ್‌ಗಳು ಸಿಗುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

50 ವ್ಯಾಟ್‌ಗಳ 8 ಸ್ಪೀಕರ್‌

50 ವ್ಯಾಟ್‌ಗಳ 8 ಸ್ಪೀಕರ್‌

ಇನ್ನು, ಟ್ವಿಟರ್‌ನಲ್ಲಿ ಟಿವಿಯ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಲಾ, ಹೊಸ ಟಿವಿ 50 ವ್ಯಾಟ್‌ಗಳ ಸಾಮರ್ಥ್ಯದಲ್ಲಿ ಡಾಲ್ಬಿ ಅಟ್ಮೋಸ್ ಬೆಂಬಲಿತ 8 ಸ್ಪೀಕರ್‌ಗಳೊಂದಿಗೆ ಬರಲಿದೆ ಎಂದು ಹೇಳಿದ್ದಾರೆ.

ಪಿಕ್ಚರ್ ಪ್ರೊಸೆಸರ್, ಗಾಮಾ ಕಲರ್ ಮ್ಯಾಜಿಕ್ ಪ್ರೊಸೆಸರ್ ಬೆಂಬಲದೊಂದಿಗೆ ಬರುತ್ತಿರುವ ಟಿವಿ ವ್ಯಾಪಕ ಬಣ್ಣದ ಹರವನ್ನು ನೀಡುತ್ತದೆ ಎನ್ನಲಾಗಿದೆ.

Best Mobiles in India

Read more about:
English summary
OnePlus TV To Launch Around The Amazon Great Indian Festival

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X