40 ಇಂಚಿನ ಟಿವಿ ಖರೀದಿಸಬೇಕೆ? ಒನ್‌ಪ್ಲಸ್ ಕಂಪೆನಿಯ ಈ ಟಿವಿ ಇದೀಗ ಖರೀದಿಗೆ ಲಭ್ಯ!
ಇತ್ತೀಚಿಗೆ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದ್ದ ಒನ್‌ಪ್ಲಸ್ ಟಿವಿ 40 Y1S ಸ್ಮಾರ್ಟ್‌ಟಿವಿ ಇದೀಗ ಖರೀದಿಗೆ ಲಭ್ಯವಿದೆ. ಬಿಡುಗಡೆಯಾದ ದಿನದಿಂದ ಸಾಕಷ್ಟು ಸೌಂಡ್ ಮಾಡಿದ್ದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿದ್ದು, ಹೊಸ ಸಂಚಲನವನ್ನು ಸೃಷ್ಟಿಸಿದೆ. ಇನ್ನು ಈ ಸ್ಮಾರ್ಟ್‌ಟಿವಿ 40 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ.
ಹೌದು, ಒನ್‌ಪ್ಲಸ್ TV 40 Y1S ಏಪ್ರಿಲ್ 14 ರಿಂದ ಮಾರಾಟವಾಗ್ತಿದೆ. ಮಾರುಕಟ್ಟೆಯಲ್ಲಿ ಸೇಲ್‌ಗೆ ಬರ್ತಿದ್ದ ಹಾಗೇ ಧೂಳೆಬ್ಬಿಸುವ ಮೂಲಕ ಹೊಸ ದಾಖಲೆ ಬರೆಯುವ ಸೂಚನೆ ನೀಡಿದೆ. ಇನ್ನು ಈ ಸ್ಮಾರ್ಟ್‌ಟಿವಿ 20W ಸ್ಟೀರಿಯೋ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು? ಇದರ ಬೆಲೆ ಎಷ್ಟಿದೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ TV 40 Y1S ಫೀಚರ್ಸ್ ಹೇಗಿದೆ?
ಒನ್‌ಪ್ಲಸ್ TV 40 Y1S ಸ್ಮಾರ್ಟ್‌ಟಿವಿ 40 ಇಂಚಿನ ಫುಲ್ HD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1920 x 1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಮಾರ್ಟ್‌ಟಿವಿ HDR 10, HDR10+ ಮತ್ತು HLG ಫಾರ್ಮ್ಯಾಟ್ ಅನ್ನು ಬೆಂಬಲಿಸಲಿದೆ. ಇದು ಗಾಮಾ ಎಂಜಿನ್ ಅನ್ನು ಹೊಂದಿದ್ದು, ಡಿಸ್‌ಪ್ಲೇ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಜೊತೆಗೆ ಅಲ್ಟ್ರಾ-ಕ್ಲಿ ಯರ್ ಕಂಟೆಂಟ್‌ಗಾಗಿ ಇಂಟೆಲಿಜೆಂಟ್ ಟ್ಯೂನ್ ಹೊಂದಿದೆ.
ಇನ್ನು ಈ ಸ್ಮಾರ್ಟ್‌ಟಿವಿ ಮೀಡಿಯಾಟೆಕ್ MT9216 ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಮಾಲಿ G32 MP2 GPU ಸಪೊರ್ಟ್ ಅನ್ನು ಪಡೆದುಕೊಂಡಿದೆ. ಹಾಗೆಯೇ 1GB RAM ಮತ್ತು 8GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯು ಪ್ರಮುಖ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯ ಪಾಲುದಾರರಿಂದ ಕಂಟೆಂಟ್ ಅನ್ನು ಪ್ರವೇಶಿಸುವುದಕ್ಕೆ ಬಳಕೆದಾರರಿಗೆ ಅನುವು ಮಾಡಿಕೊಡಲಿದೆ. ಜೊತೆಗೆ ಸ್ಮಾರ್ಟ್‌ಟಿವಿ ಒನ್‌ಪ್ಲಸ್ ಕನೆಕ್ಟ್ 2.0 ಅನ್ನು ಸಹ ಹೊಂದಿದೆ.

ಸ್ಮಾರ್ಟ್‌ಟಿವಿಯು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ Wi-Fi, ಡೇಟಾ ಸೇವರ್, ಇನ್‌ಬಿಲ್ಟ್ ಕ್ರೋಮಾಕಾಸ್ಟ್, Miracast, ಎರಡು HDMI 2.0 ಪೋರ್ಟ್, ಎರಡು USB ಟೈಪ್-C ಪೋರ್ಟ್‌ಗಳು, RJ45 ಕನೆಕ್ಟರ್ ಪೋರ್ಟ್ ಮತ್ತು ಬ್ಲೂಟೂತ್ v5.0 ಅನ್ನು ಬೆಂಬಲಿಸಲಿದೆ. ಇದಲ್ಲದೆ ಬಳಕೆದಾರರು ಸ್ಮಾರ್ಟ್‌ಟಿವಿಯ ರಿಮೋಟ್‌ನಲ್ಲಿರುವ ಹಾಟ್‌ಕೀಗಳೊಂದಿಗೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಗೂಗಲ್ ಅಸಿಸ್ಟೆಂಟ್ ಅನ್ನು ಪ್ರವೇಶಿಸುವುದಕ್ಕೆ ಸಾದ್ಯವಾಗಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯು ಡಾಲ್ಬಿ ಆಡಿಯೊವನ್ನು ಬೆಂಬಲಿಸುವ 20W ಸ್ಟೀರಿಯೋ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.
ಒನ್‌ಪ್ಲಸ್ TV 40 Y1S ಸ್ಮಾರ್ಟ್‌ಟಿವಿ ಯಾಕೆ ಟ್ರೆಂಡ್ ಸೃಷ್ಟಿಸಿದೆ?
40-ಇಂಚಿನ ಸ್ಮಾರ್ಟ್‌ಟಿವಿ ಹುಡುಕುತ್ತಿರುವವರಿಗೆ ಒನ್‌ಪ್ಲಸ್‌ನ ಈ ಸ್ಮಾರ್ಟ್‌ಟಿವಿಯು ಸೂಕ್ತ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಟಿವಿ HDR 10, HDR10+ ಮತ್ತು HLG ಸ್ವರೂಪದ ಬೆಂಬಲವನ್ನು ಹೊಂದಿರುವುದು ಇದರ ಮೇನ್ ಹೈಲೈಟ್ ಆಗಿದೆ. ಜೊತೆಗೆ ಸ್ಮಾರ್ಟ್‌ಟಿವಿ 20W ಸ್ಟಿರಿಯೊ ಸ್ಪೀಕರ್ ಸೆಟಪ್ ಒಳಗೊಂಡಿರುವುದರಿಂದ ಬಳಕೆದಾರರ ಅನುಭವವನ್ನು ಇನ್ನಷ್ಟು ಸುಧಾರಿಸುವ ಸೂಚನೆ ನೀಡಿದೆ.

ಭಾರತದಲ್ಲಿ ಒನ್‌ಪ್ಲಸ್ TV 40 Y1S ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಒನ್‌ಪ್ಲಸ್ TV 40 Y1S ಸ್ಮಾರ್ಟ್‌ಟಿವಿ 21,999ರೂ. ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಟಿವಿ ಒನ್‌ಪ್ಲಸ್.ಕಾಮ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಪ್ರಮುಖ ಆಫ್‌ಲೈನ್ ಪಾಲುದಾರ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದಲ್ಲದೆ ಹೆಚ್ಚುವರಿಯಾಗಿ ಈ ಸ್ಮಾರ್ಟ್‌ಟಿವಿಯನ್ನು ICICI ಬ್ಯಾಂಕ್ ಗ್ರಾಹಕರು ICICI ಬ್ಯಾಂಕ್ ಡೆಬಿಟ್ ಕಾರ್ಡ್‌ಗಳು, EMI ಮತ್ತು ನೆಟ್ ಬ್ಯಾಂಕಿಂಗ್‌ನಲ್ಲಿ ಖರೀದಿಸಿದರೆ 1500 ರೂ.ವರೆಗೂ ಬ್ಯಾಂಕ್ ಆಫರ್ ಲಭ್ಯವಾಗಲಿದೆ.


Click it and Unblock the Notifications








