ಭಾರತದಲ್ಲಿ ಒನ್‌ಪ್ಲಸ್ ಟಿವಿ Y1S ಮತ್ತು ಟಿವಿ Y1S ಎಡ್ಜ್ ಬಿಡುಗಡೆ!
ಭಾರತದ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಕಂಪೆನಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ಟಿವಿಒನ್‌ಪ್ಲಸ್ ನಾರ್ಡ್ CE ಎಡ್ಜ್ 2 5G ಜೊತೆಗೆ ಎರಡೂ ಹೊಸ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ಒನ್‌ಪ್ಲಸ್ ಟಿವಿ Y1S ಮತ್ತು ಒನ್‌ಪ್ಲಸ್ ಟಿವಿ Y1S ಎಡ್ಜ್ ಯನ್ನು ಲಾಂಚ್ ಮಾಡಿದೆ. ಈ ಎರಡೂ ಹೊಸ ಸ್ಮಾರ್ಟ್ ಟಿವಿಗಳನ್ನು ಎರಡು ಡಿಸ್‌ಪ್ಲೇ ಗಾತ್ರಗಳಲ್ಲಿ ಪರಿಚಯಿಸಿದೆ.

ಹೌದು, ಒನ್‌ಪ್ಲಸ್ ಕಂಪೆನಿ ಭಾರತದಲ್ಲಿ ಒನ್‌ಪ್ಲಸ್ ಟಿವಿ Y1S ಮತ್ತು ಒನ್‌ಪ್ಲಸ್ ಟಿವಿ Y1S ಎಡ್ಜ್ ಅನ್ನು ಪರಿಚಯಿಸಿದೆ. ಈ ಎರಡೂ ಸ್ಮಾರ್ಟ್‌ಟಿವಿಗಳು HDR10+, HDR10 ಮತ್ತು HLG ಫಾರ್ಮ್ಯಾಟ್ ಬೆಂಬಲವನ್ನು ಪಡೆದುಕೊಂಡಿವೆ. ಜೊತೆಗೆ ಈ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್ ಟಿವಿ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಲಿವೆ. ಅಲ್ಲದೆ ಡಾಲ್ಬಿ ಆಡಿಯೊ ಬೆಂಬಲವನ್ನು ಸಹ ಒಳಗೊಂಡಿವೆ. ಇನ್ನು ಈ ಸ್ಮಾರ್ಟ್ ಟಿವಿಗಳು ಆಟೋ ಲೋ ಲೇಟೆನ್ಸಿ ಮೋಡ್ ಅನ್ನು ಪಡೆದುಕೊಂಡಿವೆ. ಇನ್ನುಳಿದಂತೆ ಈ ಎರಡೂ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ ಟಿವಿ Y1S ಮತ್ತು ಒನ್‌ಪ್ಲಸ್ ಟಿವಿ Y1S ಎಡ್ಜ್
ಒನ್‌ಪ್ಲಸ್ ಟಿವಿ Y1S ಮತ್ತು ಒನ್‌ಪ್ಲಸ್ ಟಿವಿ Y1S ಎಡ್ಜ್ ಎರಡೂ ಸ್ಮಾರ್ಟ್‌ಟಿವಿಗಳು 32-ಇಂಚಿನ ಮತ್ತು 43-ಇಂಚಿನ ಡಿಸ್‌ಪ್ಲೇ ಗಾತ್ರವನ್ನು ಹೊಂದಿವೆ. ಇದರಲ್ಲಿ 32-ಇಂಚಿನ ಟಿವಿ ಮಾದರಿ HD ರೆಸಲ್ಯೂಶನ್ ಹೊಂದಿದ್ದರೆ, 43-ಇಂಚಿನ ಸ್ಮಾರ್ಟ್‌ಟಿವಿ ಮಾದರಿ HD ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಈ ಎರಡೂ ಸ್ಮಾರ್ಟ್ ಟಿವಿಗಳು HDR10, HDR10+, HLG ಫಾರ್ಮ್ಯಾಟ್ ಬೆಂಬಲವನ್ನು ಪಡೆದುಕೊಂಡಿವೆ. ಇದಲ್ಲದೆ ಲೋ ಬ್ಲೂ ಲೈಟ್ ಹೊರಸೂಸುವಿಕೆಗಾಗಿ TUV ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಪಡೆದಿವೆ.

ಇನ್ನು ಈ ಎರಡೂ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್ ಟಿವಿ 11 ಔಟ್-ಆಫ್-ದಿ-ಬಾಕ್ಸ್ ಅನ್ನು ರನ್ ಮಾಡುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಗಳು ಬಳಕೆದಾರರಿಗೆ ಅತ್ಯುತ್ತಮವಾದ ಗೇಮಿಂಗ್ ಅನುಭವವನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್ ಟಿವಿಗಳು ಗೂಗಲ್ ಅಸಿಸ್ಟೆಂಟ್ ಬೆಂಬಲವನ್ನು ಸಹ ಪಡೆದಿವೆ. ಅಲ್ಲದೆ ಸ್ಮಾರ್ಟ್ ಮ್ಯಾನೇಜರ್ ಅನ್ನು ಬಳಸಿಕೊಂಡು, ಬಳಕೆದಾರರು ಅನೇಕ ಸ್ಮಾರ್ಟ್ ಟಿವಿಗಳ ಕಾರ್ಯಗಳನ್ನು ನಿಯಂತ್ರಿಸಬಹುದು. ಇದಲ್ಲದೆ ಒನ್‌ಪ್ಲಸ್ ಕನೆಕ್ಟ್ 2.0 ಅಪ್ಲಿಕೇಶನ್ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಟಿವಿಗಳಿಗೆ ಸಂಪರ್ಕಿಸಲು ಮತ್ತು ರಿಮೋಟ್ ಕಂಟ್ರೋಲ್ ಆಗಿ ಬಳಸಲು ಸಾಧ್ಯವಾಗುತ್ತದೆ.

ಈ ಸ್ಮಾರ್ಟ್ ಟಿವಿಗಳು ಡಾಲ್ಬಿ ಆಡಿಯೊ ಬೆಂಬಲವನ್ನು ಪಡೆದುಕೊಂಡಿವೆ. ಇದರಲ್ಲಿ ಒನ್‌ಪ್ಲಸ್ TV Y1S ಮಾದರಿ 20W ಫುಲ್ ರೇಂಜ್ ಸ್ಟಿರಿಯೊ ಸ್ಪೀಕರ್‌ಗಳನ್ನು ಪಡೆದಿದೆ. ಆದರೆ ಒನ್‌ಪ್ಲಸ್ ಟಿವಿ Y1S ಎಡ್ಜ್ ಮಾದರಿ 24W ಫುಲ್ ರೇಂಜ್ ಸ್ಟಿರಿಯೊ ಸ್ಪೀಕರ್‌ಗಳನ್ನು ಪಡೆದುಕೊಂಡಿದೆ. ಇನ್ನು ಈ ಎರಡೂ ಸ್ಮಾರ್ಟ್ ಟಿವಿಗಳು ಆಕ್ಸಿಜನ್ ಪ್ಲೇ 2.0 ಅನ್ನು ಪಡೆದಿವೆ. ಇವುಗಳು 230 ಲೈವ್ ಚಾನಲ್‌ಗಳಿಗೆ ಸೇವೆ ಸಲ್ಲಿಸುತ್ತದೆ. ಇದಲ್ಲದೆ ಕಿಡ್ಸ್ ಮೋಡ್ ಡಿಜಿಟಲ್ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುವ ಐ ಕಂಫರ್ಟ್ ಮೋಡ್ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಒನ್‌ಪ್ಲಸ್ ಟಿವಿ Y1S 32 ಇಂಚಿನ ಬೆಲೆ 16,499ರೂ.ಆಗಿದೆ. ಆದರೆ 43-ಇಂಚಿನ ರೂಪಾಂತರದ ಬೆಲೆ 26,999ರೂ.ಹೊಂದಿದೆ. ಇನ್ನು ಒನ್‌ಪ್ಲಸ್ ಟಿವಿ Y1S ಎಡ್ಜ್ 32 ಇಂಚಿನ ಬೆಲೆ 16,999ರೂ.ಆಗಿದೆ. ಹಾಗೆಯೇ 43 ಇಂಚಿನ ರೂಪಾಂತರದ ಬೆಲೆ 27,999ರೂ.ಆಗಿದೆ. ಇದರಲ್ಲಿ ಒನ್‌ಪ್ಲಸ್ ಟಿವಿ Y1S ಅಧಿಕೃತ ವೆಬ್‌ಸೈಟ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಒನ್‌ಪ್ಲಸ್ ಟಿವಿ Y1S ಎಡ್ಜ್ ಅಧಿಕೃತ ಒನ್‌ಪ್ಲಸ್ ಸ್ಟೋರ್‌ಗಳು ಮತ್ತು ಪ್ರಮುಖ ಚಿಲ್ಲರೆ ವ್ಯಾಪಾರಿಗಳ ಮೂಲಕ ಆಫ್‌ಲೈನ್‌ನಲ್ಲಿ ಖರೀದಿಸಲು ಮಾತ್ರ ಲಭ್ಯವಿರುತ್ತದೆ. ಈ ಎರಡೂ ಸ್ಮಾರ್ಟ್ ಟಿವಿಗಳು ಫೆಬ್ರವರಿ 21 ರಂದು ಮಾರಾಟವಾಗಲಿದೆ.


Click it and Unblock the Notifications








