Home
ಸುದ್ದಿಜಾಲ

ಒನ್‌ಪ್ಲಸ್‌ ವಾಚ್‌ 2 ಸ್ಮಾರ್ಟ್‌ವಾಚ್‌ ಬಿಡುಗಡೆ: 12 ದಿನಗಳ ಬ್ಯಾಟರಿ ಬ್ಯಾಕಪ್‌ ವಿಶೇಷ

ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ OnePlus Watch 2 ಟೆಕ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ನಲ್ಲಿ ಈ ಸ್ಮಾರ್ಟ್‌ವಾಚ್‌ ಅನಾವರಣಗೊಳಿಸಲಾಗಿದೆ. ಇದು ಸ್ಮಾರ್ಟ್ ಮೋಡ್‌ನಲ್ಲಿ 100 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಹೌದು, OnePlus Watch 2 ಪವರ್ ಸೇವಿಂಗ್ ಮೋಡ್‌ನಲ್ಲಿ 12 ದಿನಗಳವರೆಗೆ ವಿಸ್ತರಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ ಎರಡು ಆಪರೇಟಿಂಗ್ ಸಿಸ್ಟಮ್‌ಗಳನ್ನು ಚಲಾಯಿಸಲು ಡ್ಯುಯಲ್-ಎಂಜಿನ್ ಆರ್ಕಿಟೆಕ್ಚರ್ ಅನ್ನು ಬಳಸಲಿದೆ. ಜೊತೆಗೆ ಇದು ಡ್ಯುಯಲ್-ಫ್ರೀಕ್ವೆನ್ಸಿ ಜಿಪಿಎಸ್ ಸಂಪರ್ಕದೊಂದಿಗೆ ಬರುತ್ತದೆ. ಹಾಗಾದ್ರೆ OnePlus Watch 2 ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌ ವಾಚ್‌ 2 ವಾಚ್‌  ಬಿಡುಗಡೆ: 12 ದಿನಗಳ ಬ್ಯಾಟರಿ ಬ್ಯಾಕಪ್‌ ವಿಶೇಷ

OnePlus Watch 2 ಫೀಚರ್ಸ್‌ ಹೇಗಿದೆ?
OnePlus ವಾಚ್ 2 1.43 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 466 x 466 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇ 60Hz ಫ್ಲ್ಯಾಶ್ ರೇಟ್‌, 1,000 ಪೀಕ್ ಬ್ರೈಟ್‌ನೆಸ್ ಮಟ್ಟವನ್ನು ಹೊಂದಿದ್ದು, 2.5D ಸಪೈರ್‌ ಕ್ರಿಸ್ಟಲ್ ಸ್ಕ್ರೀನ್ ಹೊಂದಿದೆ. ಈ ಮೂಲಕ ಬಳಕೆದಾರರು ಸ್ಮಾರ್ಟ್‌ವಾಚ್‌ ಧರಿಸಿದಾಗ ಅತ್ಯಾಕರ್ಷಕವಾಗಿ ಕಾಣಲಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ ಸ್ನಾಪ್‌ಡ್ರಾಗನ್ W5 SoC ಮತ್ತು BES2700 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದರಲ್ಲಿ ಸ್ನಾಪ್‌ಡ್ರಾಗನ್ W5 SoC ಪ್ರೊಸೆಸರ್‌ Wear OS ಅಪ್ಲಿಕೇಶನ್‌ಗಳನ್ನು ರನ್ ಮಾಡಲು ಸಹಾಯ ಮಾಡುತ್ತದೆ. ಆದರೆ BES2700 ಚಿಪ್‌ಸೆಟ್‌ RTOS ಮೂಲಕ ರನ್‌ ಆಗಲಿದ್ದು, ಬ್ಯಾಕ್‌ಗ್ರೌಂಡ್‌ ಆಕ್ಟಿವಿಟಿಗೆ ಕಾರಣವಾಗಿದೆ. ಇದಲ್ಲದೆ OnePlus ವಾಚ್ 2 ಅನ್ನು ಬಳಕೆದಾರರು Wear OS 4 ಮತ್ತು RTOS OS ಗಳ ನಡುವೆ ಬದಲಾಯಿಸುವುದಕ್ಕೆ ಅವಕಾಶ ನೀಡಲಾಗಿದೆ.

OnePlus Watch 2 ಸ್ಮಾರ್ಟ್‌ವಾಚ್‌ 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ನೊಂದಿಗೆ ಬರಲಿದೆ. ಮಿಲಿಟರಿ ದರ್ಜೆಯ MIL-STD-810H ನಿರ್ಮಾಣದ ಜೊತೆಗೆ, ಧರಿಸಬಹುದಾದ ಸ್ಟೇನ್‌ಲೆಸ್ ಸ್ಟೀಲ್ ಚಾಸಿಸ್ 5ATM ಮತ್ತು IP68 ರೇಟಿಂಗ್‌ನೊಂದಿಗೆ ಬರುತ್ತದೆ. ಇನ್ನು ಕಂಪನಿಯು 500mAh ಸಾಮರ್ಥ್ಯದ ಬಿಗ್‌ ಬ್ಯಾಟರಿಯನ್ನು ಹೊಂದಿದ್ದು, 7.5W VOOC ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಇದು ವಾಚ್ ಅನ್ನು 60 ನಿಮಿಷಗಳಲ್ಲಿ 0 ದಿಂದ 100ಕ್ಕೆ ಚಾರ್ಜ್ ಮಾಡಲಿದೆ ಎಂದು ಹೇಳಲಾಗುತ್ತದೆ.

ಒನ್‌ಪ್ಲಸ್‌ ವಾಚ್‌ 2 ವಾಚ್‌  ಬಿಡುಗಡೆ: 12 ದಿನಗಳ ಬ್ಯಾಟರಿ ಬ್ಯಾಕಪ್‌ ವಿಶೇಷ

OnePlus Watch 2 ಸ್ಮಾರ್ಟ್‌ವಾಚ್‌ ಭಾರೀ ಬಳಕೆಯೊಂದಿಗೆ 48 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಈ ಸ್ಮಾರ್ಟ್ ಮೋಡ್‌ನಲ್ಲಿ 100 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದ್ದು, ಪವರ್ ಸೇವರ್ ಮೋಡ್‌ನಲ್ಲಿ 12 ದಿನಗಳವರೆಗೆ ಬ್ಯಾಟರಿ ಬಾಳಿಕೆ ನೀಡುತ್ತದೆ. ಈ ಸ್ಮಾರ್ಟ್ ವಾಚ್ ಆಪ್ಟಿಕಲ್ ಹೃದಯ ಬಡಿತ ಮಾನಿಟರ್, ಪಲ್ಸ್ ಆಕ್ಸಿಮೀಟರ್ ಸೆನ್ಸಾರ್‌ ಅನ್ನು ಸಹ ಹೊಂದಿದೆ. ಸ್ಲಿಪಿಂಗ್‌ ಸರ್ಕಲ್‌ ಮತ್ತು ಬಳಕೆದಾರರ ಒತ್ತಡದ ಮಟ್ಟವನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಇದು 11 ಕ್ಕೂ ಹೆಚ್ಚು ವೃತ್ತಿಪರ ಮತ್ತು 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಬೆಂಬಲಿಸುತ್ತದೆ. OnePlus ವಾಚ್ 2 L1+L5 GPS, ಬ್ಲೂಟೂತ್, Wi-Fi ಮತ್ತು USB ಟೈಪ್-C ಸಂಪರ್ಕವನ್ನು ಹೊಂದಿದೆ.

OnePlus ವಾಚ್ 2 ಬೆಲೆ ಮತ್ತು ಲಭ್ಯತೆ
OnePlus ವಾಚ್ 2 ಸ್ಮಾರ್ಟ್‌ವಾಚ್‌ ಆರಂಭಿಕ ಬೆಲೆ 24,999ರೂ ಅನ್ನು ಹೊಂದಿದೆ. ಇದು ಮಾರ್ಚ್ 4 ರಿಂದ Amazon, Flipkart, Myntra, OnePlus ಆನ್‌ಲೈನ್ ಸ್ಟೋರ್, ರಿಲಯನ್ಸ್ ಡಿಜಿಟಲ್, ಕ್ರೋಮಾ ಮತ್ತು ಇತರ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ. ಇದನ್ನು ಬ್ಲ್ಯಾಕ್ ಸ್ಟೀಲ್ ಮತ್ತು ರೇಡಿಯಂಟ್ ಸ್ಟೀಲ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ.

Best Mobiles in India

English summary
OnePlus Watch 2 With Up to 12 Days Battery Life Unveiled at MCW 2024: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+