ಇಂದಿನಿಂದ ಆನ್‌ಲೈನ್ ಗೇಮಿಂಗ್ ಆಪ್‌ನಲ್ಲಿ ಕರ್ನಾಟಕದವರಿಗಿಲ್ಲ ಪ್ರವೇಶ!

|

ಆನ್‌ಲೈನ್‌ ಗ್ಯಾಬ್ಲಿಂಗ್‌ ಗೇಮ್‌ಗಳಲ್ಲಿ ಮೈ ಮರೆಯುತ್ತಿದ್ದ ಮಂದಿಗೆ ಇದೀಗ ಶಾಕ್‌ ಎದುರಾಗಿದೆ. ಅದರಲ್ಲೂ ಗ್ಯಾಬ್ಲಿಂಗ್‌ ಬೆಂಬಲಿಸುವ ಆನ್‌ಲೈನ್‌ ಗೇಮ್‌ಗಳು ಇಂದಿನಿಂದ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಟಾಪ್‌ ಮಾಡಿವೆ. ಆನ್‌ಲೈನ್‌ ಜೂಜಾಟ ತಡೆಯುವುದಕ್ಕೆ ಮುಂದಾಗಿರುವ ಕರ್ನಾಟಕ ರಾಜ್ಯ ಸರ್ಕಾರ ಕಳೆದ ತಿಂಗಳು ಆನ್‌ಲೈನ್‌ ಗ್ಯಾಬ್ಲಿಂಗ್‌ ಗೇಮ್‌ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡುವ ನಿರ್ಣಯ ಕೈಗೊಂಡಿತ್ತು. ಅದರಂತೆ ಆನ್‌ಲೈನ್‌ ಗ್ಯಾಬ್ಲಿಂಗ್‌ ನಿಷೇದ ಮಸೂದೆಯನ್ನು ಕೂಡ ಜಾರಿಗೊಳಿಸಿದೆ. ಈ ಮಸೂದೆಯ ನಿಯಮದಂತೆ ಇಂದಿನಿಂದ ಎಂಪಿಎಲ್‌ ಅಪ್ಲಿಕೇಶನ್‌ ಕರ್ನಾಟಕದಲ್ಲಿ ಬಳಕೆದಾರಿಗೆ ಪ್ರವೇಶ ನಿರಾಕರಣೆ ಮಾಡಿದೆ.

ಆನ್‌ಲೈನ್‌

ಹೌದು, ಕರ್ನಾಟಕದಲ್ಲಿ ಇಂದಿನಿಂದ ಆನ್‌ಲೈನ್‌ ಗ್ಯಾಬ್ಲಿಂಗ್‌ ಗೇಮ್‌ ಅಪ್ಲಿಕೇಶನ್‌ಗಳು ಬ್ಲಾಕ್‌ ಆಗಿವೆ. ಇದರಲ್ಲಿ ಕ್ರಿಕೆಟ್‌ ಪ್ರಿಯರ ಗಮನ ಸೆಳೆದಿದ್ದ, ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಆನ್‌ಲೈನ್ ಗೇಮಿಂಗ್ ಬ್ಲಾಕ್‌ ಆಗಿದೆ. ಇಂದಿನಿಂದ ಕರ್ನಾಟಕ ರಾಜ್ಯದಲ್ಲಿ ಬಳಕೆದಾರರಿಗೆ ಪ್ರವೇಶವನ್ನು ನಿರ್ಬಂಧಿಸಿದೆ. ಕಾನೂನು ಉಲ್ಲಂಘಿಸುವವರಿಗೆ ಭಾರಿ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸುತ್ತದೆ ಮತ್ತು ಜೂಜಾಟದಂತಹ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ವ್ಯಸನಕಾರಿ ಮತ್ತು ಆರ್ಥಿಕ ಹಾನಿಯನ್ನು ಉಂಟುಮಾಡಬಹುದು ಎಂಬ ಆತಂಕದ ನಡುವೆ ಇದನ್ನು ಜಾರಿಗೊಳಿಸಲಾಗಿದೆ. ಹಾಗಾದ್ರೆ ಕರ್ನಾಟಕ ರಾಜ್ಯದಲ್ಲಿ ಯಾವೆಲ್ಲಾ ಆನ್‌ಲೈನ್‌ ಗ್ಯಾಬ್ಲಿಂಗ್‌ ಅಪ್ಲಿಕೇಶನ್‌ ಬ್ಲಾಕ್‌ ಆಗಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್‌

ಮೊಬೈಲ್‌ ಪ್ರೀಮಿಯರ್‌ ಲೀಗ್‌ ಅಪ್ಲಿಕೇಶನ್‌ ಕರ್ನಾಟಕದ ಬಳಕೆದಾರರಿಗೆ "ಕ್ಷಮಿಸಿ! ನಿಮ್ಮ ರಾಜ್ಯದ ಕಾನೂನು ನಿಮಗೆ ಫ್ಯಾಂಟಸಿ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ," "ಫ್ಯಾಂಟಸಿ ಗೇಮ್‌ಗಳನ್ನು ಲಾಕ್ ಮಾಡಲಾಗಿದೆ" ಮತ್ತು " ಮನಿ ಗೇಮ್‌ಗಳನ್ನು ಲಾಕ್ ಮಾಡಲಾಗಿದೆ." ಎಂಬ ಸಂದೇಶವನ್ನು ತೋರಿಸಿದೆ. ಇನ್ನು ಈ ಗೇಮಿಂಗ್ ಅಪ್ಲಿಕೇಶನ್ ಫ್ಯಾಂಟಸಿ ಕ್ರಿಕೆಟ್ ಮತ್ತು ಫುಟ್ಬಾಲ್ ಆಟಗಳನ್ನು ಆಡುವುದಕ್ಕೆ ಅವಕಾಶ ನೀಡಲಿದೆ. ಈ ಗೇಮ್‌ ಬೆಟ್ಟಿಂಗ್‌ ಕಟ್ಟುವುದಕ್ಕೆ ಕೂಡ ಅವಕಾಶ ನೀಡುತ್ತಿತ್ತು ಅನ್ನೊದನ್ನ ಗಮನಿಸಬೇಕಿದೆ.

ಮೊಬೈಲ್‌

ಸದ್ಯ ಕ್ರಿಕೆಟ್‌ ಪ್ರಿಯರನ್ನು ಸೆಳೆದಿರುವ ಮೊಬೈಲ್‌ ಪ್ರೀಮಿಯರ್‌ ಲೀಗ್‌ ಅಪ್ಲಿಕೇಶನ್‌ ಕರ್ನಾಟಕದ ಬಳಕೆದಾರರಿಗೆ ಪ್ರವೇಶವನ್ನು ಬ್ಲಾಕ್‌ ಮಾಡಿದೆ. ಕರ್ನಾಟಕದಲ್ಲಿ ಆನ್‌ಲೈನ್‌ ಗೇಮ್‌ ಗಳ ಮೇಲಿರುವ ನಿಷೇದ ಕ್ರಮದಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ. ಜೊತೆಗೆ ಭಾರತದಲ್ಲಿ ಆನ್‌ಲೈನ್‌ ಗೇಮ್‌ಗಳನ್ನು ಬ್ಲಾಕ್‌ ಮಾಡುತ್ತಿರುವ ಕ್ರಮ ಪ್ರವರ್ಧಮಾನಕ್ಕೆ ಬರುತ್ತಿರುವ ಗೇಮಿಂಗ್ ವಲಯವನ್ನು ಆತಂಕಕ್ಕೆ ದೂಡಬಹುದು ಎಂಬ ಮಾತು ಕೂಡ ಕೇಳಿ ಬಂದಿದೆ.

ಗೇಮಿಂಗ್

ಆದರೆ ಟೈಗರ್ ಗ್ಲೋಬಲ್ ಬೆಂಬಲಿತ ಭಾರತದ ಅತ್ಯಂತ ಜನಪ್ರಿಯ ಗೇಮಿಂಗ್ ಆಪ್‌ಗಳಲ್ಲಿ ಒಂದಾದ ಡ್ರೀಮ್ 11 ಇನ್ನೂ ಕಾರ್ಯನಿರ್ವಹಿಸುತ್ತಿದೆ. ಆದರೆ ಪೇಟಿಎಂ ಫಸ್ಟ್‌ ಗೇಮ್‌ ಕಾಣಿಸಿಲ್ಲ ಎಂದು ಹೇಳಲಾಗಿದೆ. ಸದ್ಯ ಕರ್ನಾಟಕದಲ್ಲಿ ಆನ್‌ಲೈನ್‌ ಗೇಮ್‌ ಬ್ಯಾನ್‌ ಮಸೂದೆ ವಿರುದ್ದ ನ್ಯಾಯಾಲಯದ ಮೆಟ್ಟಿಲು ಏರುವ ಸಾಧ್ಯತೆಯನ್ನು ಆನ್‌ಲೈನ್‌ ಅಪ್ಲಿಕೇಶನ್‌ಗಳು ಸ್ಪಷ್ಟ ಪಡಿಸಿವೆ. ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್‌ನ ಮುಖ್ಯ ಕಾರ್ಯನಿರ್ವಾಹಕ ರೋಲ್ಯಾಂಡ್ ಲ್ಯಾಂಡರ್ಸ್, ಈ ಮಸೂದೆ ವಿರುದ್ದವಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಮತ್ತು ಕಾನೂನಿನ ಸಹಾಯವನ್ನು ಪಡೆಯುತ್ತೇವೆ ಎಂದು ಹೇಳಿದ್ದಾರೆ. ಗೇಮರುಗಳು ಮತ್ತು ಕೆಲವು ಕಂಪನಿಗಳು ಕರ್ನಾಟಕ ರಾಜ್ಯದ ಹೊಸ ಕಾನೂನಿನ ವಿರುದ್ಧ ನ್ಯಾಯಾಲಯದ ಸವಾಲುಗಳನ್ನು ಸಲ್ಲಿಸಲು ಯೋಜಿಸುತ್ತಿವೆ ಎಂದು ಹೇಳಲಾಗಿದೆ.

ಆನ್‌ಲೈನ್

ಇನ್ನು ಆನ್‌ಲೈನ್ ಗ್ಯಾಬ್ಲಿಂಗ್‌ ಬ್ಯಾನ್‌ ಮಸೂದೆಯಲ್ಲಿ ಎಲ್ಲಾ ರೀತಿಯ ವೇಜಿಂಗ್ ಅಥವಾ ಬೆಟ್ಟಿಂಗ್‌ಗಳನ್ನು ಒಳಗೊಂಡಿರುವ ಆಟಗಳು ಸೇರಿವೆ. ಟೋಕನ್‌ಗಳ ರೂಪದಲ್ಲಿ ಅಥವಾ ಇಲೆಕ್ಟ್ರಾನಿಕ್ ವಿಧಾನಗಳು ಮತ್ತು ವರ್ಚುವಲ್ ಕರೆನ್ಸಿ ರೂಪದ ಎಲ್ಲಾ ಗೇಮ್‌ಗಳು ಕೂಡ ಬ್ಯಾನ್‌ ಆಗಲಿವೆ. ಆದರೆ ಇದು ರಾಜ್ಯದ ಒಳಗೆ ಅಥವಾ ಹೊರಗಿನ ಯಾವುದೇ ರೇಸ್ ಕೋರ್ಸ್‌ನಲ್ಲಿ ನಡೆಯುವ ಲಾಟರಿಗಳು ಅಥವಾ ಬೆಟ್ಟಿಂಗ್ ಅಥವಾ ಕುದುರೆ ರೇಸ್‌ಗಳಿಗೆ ಬೆಟ್ಟಿಂಗ್ ಒಳಗೊಂಡಿಲ್ಲ ಅನ್ನೊದನ್ನ ಸರ್ಕಾರ ಸ್ಪಷ್ಟಪಡಿಸಿದೆ. ಆನ್‌ಲೈನ್‌ ಜೂಜಾಟ ಬ್ಯಾನ್‌ ನಿರ್ಧಾರ ಮಾಡಿರುವ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲೇನಲ್ಲ. ಈಗಾಗಲೇ ಕಳೆದ ವರ್ಷ ನವೆಂಬರ್‌ನಲ್ಲಿ ತಮಿಳುನಾಡು ಸರ್ಕಾರ ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಸುಗ್ರೀವಾಜ್ಞೆಯನ್ನು ಪ್ರಕಟಿಸಿತ್ತು. ಅಲ್ಲದೆ ಈ ವರ್ಷದ ಆರಂಭದಲ್ಲಿಯೇ ಕೇರಳ ರಾಜ್ಯ ಕೂಡ ಆನ್‌ಲೈನ್ ರಮ್ಮಿ ಆಟಗಳ ಮೇಲೆ ಬ್ಯಾನ್‌ ಆದೇಶ ಹೇರಿದೆ.

Best Mobiles in India

English summary
The latest ban has intensified concerns that growing state regulations could hit the nascent but booming gaming sector in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X