ನಿವೃತ್ತ ಲೆಫ್ಟಿನೆಂಟ್​ ಜನರಲ್​ಗೆ ಟೋಪಿ ಹಾಕಿದ ಆನ್‌ಲೈನ್ ಖದೀಮ!..ಲಕ್ಷಾಂತರ ರೂ. ಗುಳುಂ!!

|

ನೂತನ ತಂತ್ರಜ್ಞಾನದ ಮಾಹಿತಿ ಕೊರತೆ ಎದುರಾದರೆ ಹೇಗೆಲ್ಲಾ ಮೋಸ ಹೋಗಬಹುದು ಎಂಬುದಕ್ಕೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಓರ್ವರು ಮೋಸ ಹೋಗಿರುವುದೇ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್​ ಓರ್ವರಿಗೆ ಆನ್​ಲೈನ್​ ವಂಚಕನೋರ್ವ ಬರೋಬ್ಬರಿ 1 ಲಕ್ಷದ 80 ಸಾವಿರ ರೂ. ವಂಚಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ನಗರದ ಜೆಪಿ ನಗರದಲ್ಲಿ ವಾಸವಾಗಿರುವ ನಿವೃತ್ತ ಲೆಫ್ಟಿನೆಂಟ್​ ಜನರಲ್​ ರಘುನಾಥ್​ ಎಂಬವವರು ಕಳೆದ ತಿಂಗಳು ನವೆಂಬರ್​ 5ರಂದು ವಂಚನೆಗೊಳಗಾಗಿದ್ದಾರೆ. ರಘುನಾಥ್ ಅವರಿಗೆ ಅಪರಿಚಿತ ವ್ಯಕ್ತಿಯೊರ್ವ ಕರೆ ಮಾಡಿ, ನಿಮ್ಮ ಎಟಿಎಂ ಕಾರ್ಡ್​​ಗೆ ವೈರಸ್ ಬಂದಿದೆ ಎಂದು ಅವರ ಬಳಿ ಕಾರ್ಡ್​ ಮಾಹಿತಿ ಮತ್ತು ಒಟಿಪಿ ಪಡೆದು ಕ್ಷಣಮಾತ್ರದಲ್ಲಿ 1 ಲಕ್ಷದ 80 ಸಾವಿರ ರೂ. ಹಣವನ್ನು ಎಗರಿಸಿದ್ದಾನೆ ಎಂದು ತಿಳಿದುಬಂದಿದೆ.

ನಿವೃತ್ತ ಲೆಫ್ಟಿನೆಂಟ್​ ಜನರಲ್​ಗೆ ಟೋಪಿ ಹಾಕಿದ ಆನ್‌ಲೈನ್ ಖದೀಮ!

ಎಟಿಎಂ ಕಾರ್ಡ್​​ಗೆ ವೈರಸ್ ಬಂದಿದೆ ಎಂದು ಹೇಳಿದ ವಂಚಕನ ಮಾತನ್ನು ನಂಬಿದ್ದ ರಘುನಾಥ್​ ಪೂರ್ವಪರ ಯೋಚಿಸದೆ ಎಟಿಎಂ ಕಾರ್ಡ್​ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಕೆಲವೇ ಕ್ಷಣಗಳಲ್ಲಿ ಅವರ ಖಾತೆಯಿಂದ 1 ಲಕ್ಷ 80 ಸಾವಿರ ರೂ. ಕಡಿತವಾಗಿದೆ. ಸದ್ಯ ಹಣ ಕಳೆದುಕೊಂಡಿರುವ ರಘುನಾಥ್ ಅವರು​ ಸೈಬರ್​ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ. ಹಾಗಾದರೆ, ಆನ್‌ಲೈನ್ ವಂಚಕರಿಂದ ಪಾರಾಗುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ನಕಲಿ ಇ-ಮೇಲ್ಗಳು (ಫಿಷಿಂಗ್)

ನಕಲಿ ಇ-ಮೇಲ್ಗಳು (ಫಿಷಿಂಗ್)

ಯಾವುದೇ ಕಾರಣಕ್ಕೂ ಬ್ಯಾಂಕಿನವರು ಗ್ರಾಹಕರೊಂದಿಗೆ ಇ-ಮೇಲ್ ವ್ಯವಹಾರ ನಡೆಸುವುದಿಲ್ಲ. ಹಾಗಾಗಿ, ಬ್ಯಾಂಗ್ ವಿವರಗಳಿಗೆ ಸಂಬಂಧಿಸಿದಂತೆ ಯಾವುದೇ ಇ-ಮೇಲ್ ಬಂದರೂ ಪ್ರತಿಕ್ರಿಯಿಸಬೇಡಿ. ಇದು ಸೈಬರ್ ಕ್ರಿಮಿನಲ್‌ಗಳು ಕೆಲಸವಾಗಿರುತ್ತದೆ. ಇಂತಹ ಇ ಮೇಲ್‌ಗಳಿಗೆ ನೀವು ಉತ್ತರಿಸಿದರೆ ನಿಮ್ಮ ಖಾತೆಯ ಮಾಹಿತಿ ಮತ್ತು ಹಣ ಸುಲಭವಾಗಿ ವಂಚಕರ ಪಾಲಾಗುತ್ತದೆ.

ಪಾಸ್‌ವರ್ಡ್ ಬಗ್ಗೆ ಜಾಗೃತ

ಪಾಸ್‌ವರ್ಡ್ ಬಗ್ಗೆ ಜಾಗೃತ

ನಿಮ್ಮ ಪಾಸ್‌ವರ್ಡ್ ಬಹಳ ಶಕ್ತಿಶಾಲಿಯಾಗಿರುವಂತೆ ನೋಡಿಕೊಳ್ಳಿ. ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಯಾವುದೇ ಕಾರಣಕ್ಕೂ ಹೆಚ್ಚು ನೆನಪಿರುವ ಮತ್ತು ಹೆಚ್ಚು ಬಳಕೆ ಮಾಡುತ್ತಿರುವ ಯೂಸರ್ ನೇಮ್/ಐಡಿ ಮತ್ತು ಪಾಸ್‌ವರ್ಡ್‌ ಕೊಡಬಾರದು. ನಮ್ಮ ಖಾತೆಯ ಮಾಹಿತಿ ಮತ್ತು ಹಣದ ರಕ್ಷಣೆಗೆ ಆನ್‌ಲೈನ್ ಬ್ಯಾಂಕಿಂಗ್ ಐಡಿ ಮತ್ತು ಪಾಸ್‌ವರ್ಡ್‌ ಹೆಚ್ಚು ಖಾಸಗಿಯಾಗಿರಬೇಕು.!

ಅಧಿಕೃತ ತಾಣವೇ ಪರೀಕ್ಷಿಸಿ

ಅಧಿಕೃತ ತಾಣವೇ ಪರೀಕ್ಷಿಸಿ

ಆನ್‌ಲೈನ್ ಬ್ಯಾಂಕಿಂಗ್ ಆರಂಭಿಸುವುದಕ್ಕೂ ಮುನ್ನ ನೀವು ಬಳಸುತ್ತಿರುವ ತಾಣ ಅಧಿಕೃತವಾದುದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಕೆಲವು ನಕಲಿ ಆನ್‌ಲೈನ್ ತಾಣಗಳು ನಮ್ಮ ಮಾಹಿತಿ ಪಡೆಯಲು ಲಾಗಿನ್ ಆಗಲು ಪ್ರೇರೇಪಿಸುತ್ತವೆ ಅವುಗಳಿಂದ ದೂರವಿರಿ. ಇಲ್ಲವಾದರೆ, ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿರುವ ಹಣ ಮಂಗಮಾಯವಾಗುತ್ತದೆ.

ಸ್ಮಾರ್ಟ್‌ಫೋನ್ ರಕ್ಷಣೆ

ಸ್ಮಾರ್ಟ್‌ಫೋನ್ ರಕ್ಷಣೆ

ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ ಅನ್ನು ವೈರಸ್‌ಗಳಿಂದ ರಕ್ಷಣೆ ಮಾಡುವುದು ಅತ್ಯಗತ್ಯ. ಹ್ಯಾಕರ್‌ಗಳಿಂದ ಹುಟ್ಟಿರುವ ಇಂತಹ ವೈರಸ್ ತಂತ್ರಾಂಶಗಳು ಬ್ಯಾಂಕ್ ಖಾತೆಯ ಮಾಹಿತಿ ಪಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ, ಆಂಟಿ ವೈರಸ್ ಉಪಯೋಗಿಸಬೇಕು ಜೊತೆಗೆ ಬ್ಯಾಂಕಿಂಗ್ ಹಿಸ್ಟರಿಯನ್ನು ಡಿಲೀಟ್ ಮಾಡಬೇಕು.

ಒನ್‌ಟೈಮ್ ಪಾಸ್ವರ್ಡ್

ಒನ್‌ಟೈಮ್ ಪಾಸ್ವರ್ಡ್

ಮೊಬೈಲ್ ನಂಬರನ್ನು ಬ್ಯಾಂಕಿನಲ್ಲಿ ನಮೂದಿಸಿದರೆ ನೋಂದಾಯಿತ ಫೋನ್ ನಂಬರಿಗೆ ಬರುವ ಕೋಡ್ ನಿಮ್ಮ ವ್ಯವಹಾರವನ್ನು ಸುರಕ್ಷಿತವಾಗಿಡುತ್ತದೆ. ಈ ಒನ್‌ಟೈಮ್ ಪಾಸ್ವರ್ಡ್ ಬಳಕೆಯಿಂದ ನಿಮ್ಮ ಹಣವನ್ನು ಅಷ್ಟು ಸುಲಭವಾಗಿ ಕದಿಯಲಾಗದು. ಈ ಎಲ್ಲಾ ಅಂಶಗಳು ಸುರಕ್ಷತಾ ಆನ್‌ಲೈನ್ ವ್ಯವಹಾರಕ್ಕೆ ಅತ್ಯಗತ್ಯವಾಗಿದೆ. ಹಾಗಾಗಿ, ಇದನ್ನು ಶೇರ್ ಮಾಡಿ ಇತರರಿಗೂ ಸಹಾಯ ಮಾಡಿ.

Best Mobiles in India

English summary
In the wake of the alleged identity thefts, the police cyberdome and bankers have urged people to be extra vigilant while making online transactions. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X