Home
ಸುದ್ದಿಜಾಲ

ವಿದೇಶಿಗ ಹೇಳಿದ ಬಹುಮಾನದ ಆಸೆಗೆ 32 ಲಕ್ಷ ಕಳೆದುಕೊಂಡ ಮಂಗಳೂರು ಮಹಿಳೆ!!

ನಿಮಗೆ ಬಹುಮಾನ ಬಂದಿದೆ, ಲಾಟರಿ ಹೊಡೆದಿದೆ, ಡಿಸ್ಕೌಂಟ್ಸ್ ನೀಡುತ್ತಿದ್ದೇವೆ ಎಂದೆಲ್ಲಾ ಸುಳ್ಳು ಹೇಳಿಕೊಂಡು ಮುಗ್ದಜನರನ್ನು ಮೋಸ ಮಾಡುವ ದೊಡ್ಡ ಖದೀಮರ ತಂಡ ಆನ್‌ಲೈನ್ ಪ್ರಪಂಚದಲ್ಲಿದೆ.!

By Bhaskar N J

ನಿಮಗೆ ಬಹುಮಾನ ಬಂದಿದೆ, ಲಾಟರಿ ಹೊಡೆದಿದೆ, ಡಿಸ್ಕೌಂಟ್ಸ್ ನೀಡುತ್ತಿದ್ದೇವೆ ಎಂದೆಲ್ಲಾ ಸುಳ್ಳು ಹೇಳಿಕೊಂಡು ಮುಗ್ದಜನರನ್ನು ಮೋಸ ಮಾಡುವ ದೊಡ್ಡ ಖದೀಮರ ತಂಡ ಆನ್‌ಲೈನ್ ಪ್ರಪಂಚದಲ್ಲಿದೆ.! ಇವರು ವಿವಿಧ ರೀತಿಯಲ್ಲಿ ಜನರನ್ನು ನಂಬಿಸಿ ಅವರಿಂದ ಹಣವನ್ನು ದೋಚುತ್ತಿದ್ದು, ಇದಕ್ಕೆ ಸೂಕ್ತಪರಿಹಾರ ಇನ್ನೂ ದೊರಕಿಲ್ಲ.!!

ಇದೇ ರೀತಿಯ ಮತ್ತೊಂದು ಪ್ರಕರಣ ಮಂಗಳೂರು ನಗರ ಸೈಬರ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರತಿಷ್ಠಿತ ಕಂಪನಿಯಿಂದ ನಿಮಗೆ ಬಹುಮಾನ ಬಂದಿದೆ. ಆ ಬಹುಮಾನ ನಿಮಗೆ ತಲುಪಿಸಬೇಕಾದರೆ ಟ್ಯಾಕ್ಸ್, ಅಕೌಂಟ್ ಫೀ ಎಲ್ಲವನ್ನು ತುಂಬುಬೇಕು ಎಂದು ನಂಬಿಸಿ ಆನ್‌ಲೈನ್‌ ಮುಖಾಂತರ ಮಹಿಳೇಯೋರ್ವರಿಗೆ 32,03,638ಲಕ್ಷ ರೂ. ವಂಚಿಸಿದ್ದಾರೆ.!! ಹಾಗಾದರೆ, ಏನಿದು ಪ್ರಕರಣ ಎಂಬುದನ್ನು ಮುಂದೆ ನೋಡಿ.!!

485000.00 ಡಾಲರ್‌ ಬಹುಮಾನ!!

485000.00 ಡಾಲರ್‌ ಬಹುಮಾನ!!

ಮಂಗಳೂರು ನಿವಾಸಿ ಮಹಿಳೆಯೋರ್ವರಿಗೆ [email protected] ಮೇಲ್ ಅಡ್ರೆಸ್‌ನಿಂದ ನಿಂದ ಒಂದು ಮೇಲ್‌ ಬಂದಿದ್ದು, ಆ ಮೇಲ್‌ನಲ್ಲಿ ಪ್ರತಿಷ್ಠಿತ ಕಂಪೆನಿಯಿಂದ 3ನೇ ಬಹುಮಾನ 485000.00 ಯುಎಸ್‌ಡಿ ಡಾಲರ್‌ ಬಂದಿದೆ. ನೀವು ಬಹುಮಾನದ ವಿಜೇತರು ಎಂದು ಮೇಲ್‌ನಲ್ಲಿ ತಿಳಿಸಿದ್ದಾರೆ.!!

ಕಸ್ಟಮ್ಸ್ ತೆರಿಗೆ ಕಟ್ಟಬೇಕು!!

ಕಸ್ಟಮ್ಸ್ ತೆರಿಗೆ ಕಟ್ಟಬೇಕು!!

485000.00 ಯುಎಸ್‌ಡಿ ಡಾಲರ್‌ ನಿಮಗೆ ಬಹುಮಾನವಾಗಿ ಬಂದಿದ್ದು, ಈ ಹಣವನ್ನು ನೀವು ಪಡೆಯಲು ತಗಲುವ ಇಂಡಿಯನ್‌ ಕಸ್ಟಮ್ಸ್ ತೆರಿಗೆ ಕಟ್ಟಬೇಕು ಎಂದು ಮತ್ತೆ ಸಂದೇಶ ಕಳುಹಿಸುಸಿದ್ದಾರೆ. ವಿಳಾಸವನ್ನು ಯುಎಸ್‌ನ ಜಾನ್‌ ಅಂಡ್ರೂ ಎಂಬವರ ಅಡ್ರಸ್ ನೀಡುತ್ತಾರೆ.!!

ವಿದೇಶಿಗ ಎಂದು ನಂಬಿದ ಮಹಿಳೆ!!

ವಿದೇಶಿಗ ಎಂದು ನಂಬಿದ ಮಹಿಳೆ!!

ಇಂತಹ ವಂಚನೆಗಳ ಬಗ್ಗೆ ಸ್ವಲ್ಪ ಅರಿವಿರುವ ಮಹಿಳೆ ಇವರಾಗಿದ್ದರೂ ಸಹ ಯುಎಸ್‌ನ ಜಾನ್‌ ಅಂಡ್ರೂ ಎಂಬವರ ಅಡ್ರಸ್ ಇದ್ದುದ್ದರಿಂದ ಈ ಬಹುಮಾನ ನಿಜವಾಗಿಯೂ ಬಂದಿರಬಹುದು ಎಂದು ನಂಬಿದ್ದಾರೆ. ಅವರಿಗೆ ಮರು ಸಂದೇಶ ಕಳುಹಿಸಿ ನಾನು ಹಣ ನೀಡಲು ಸಿದ್ಧ ಎಂದು ಹೇಳಿದ್ದಾರೆ.!!

ನಿಧಾನವಾಗಿ ಹಣ ಪೀಕಿದರು.!!

ನಿಧಾನವಾಗಿ ಹಣ ಪೀಕಿದರು.!!

ಈ ಮಹಿಳೆ ನಾನು ಹಣ ನೀಡಲು ಸಿದ್ದವಾದ ನಂತರ, ಹಿರಾ ಗುಪ್ತ ಎಂಬವರ ಖಾತೆಯೊಂದನ್ನು ಅವರಿಗೆ ನೀಡಿ ಮೊದಲು ರೂ.10,500 ನೀಡುವಂತೆ ತಿಳಿಸಿದ್ದಾರೆ. ನಂತರ ಆದಾಯ ತೆರಿಗೆ, ಆಂಟಿ ಟೆರರಿಸ್ಟ್ ಸರ್ಟಿಫಿಕೇಚ್, ಅಕೌಂಟ್ ತೆರಿಗೆ ಎಂಬೆಲ್ಲಾ ಸುಳ್ಳು ಹೇಳಿ, 10 ಸಾವಿರ, 20 ಸಾವಿರ, ಲಕ್ಷಗಳ ಲೆಕ್ಕದಲ್ಲಿ 32 ಲಕ್ಷ ಹಣವನ್ನು ದೋಚಿದ್ದಾರೆ.!!

ಪ್ರಕರಣದ ತನಿಖೆ ನಡೆಯುತ್ತಿದೆ.!!

ಪ್ರಕರಣದ ತನಿಖೆ ನಡೆಯುತ್ತಿದೆ.!!

32,03,638ರೂ. ಹಣವನ್ನು ಖದೀಮರಿಗೆ ತಲುಪಿಸಿದ ನಂತರೂ ಮಹಿಳೆಗೆ ಯಾವುದೇ ಬಹುಮಾನ ಬರದಿದ್ದಾಗ, ತಾನು ಮೋಸಹೋಗಿದ್ದೇನೆ ಎಂದು ತಿಳಿದು ನಗರದ ಸೈಬರ್‌ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಪೊಲೀಸರು ತನಿಖೆ ಆರಂಭಿಸಿದ್ದರೂ ಇಂತಹ ಖದೀಮರ ಜಾಡು ಹಿಡಿಯುವುದು ಕಷ್ಟ!!

Best Mobiles in India

English summary
Here's another online scam to stay away from.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+