ಆನ್‌ಲೈನ್ ಹಣ ವಹಿವಾಟು ನಡೆಸುವವರಿಗೆ ಭರ್ಜರಿ ಸಿಹಿಸುದ್ದಿ!
ಆನ್‌ಲೈನ್ ಮೂಲಕ ಹಣದ ವಹಿವಾಟು ನಡೆಸುವವರಿಗೆ ಭರ್ಜರಿ ಸಿಹಿಸುದ್ದಿ ಇದಾಗಿದ್ದು, ಹೆಚ್ಚು ಹಣ ವರ್ಗಾವಣೆಗಾಗಿ ಇರುವ ಸೇವೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡುವ ಸಮಯವನ್ನು ಸಂಜೆ 4.30ರಿಂದ 6 ಗಂಟೆವರೆಗೆ ವಿಸ್ತರಿಸಲಾಗಿದೆ. ನೂತನ ಕಾಲಾವಧಿ ಜೂನ್ ಒಂದರಿಂದ ಜಾರಿಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.
ಹೌದು, ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಶಾಖೆಗೆ ತಕ್ಷ ಣವೇ ಹಣ ವರ್ಗಾವಣೆ ಮಾಡುವಂತಹ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಆರ್‌ಬಿಐ ಮುಂದಾಗಿದೆ. ಹಾಗಾಗಿ, ಈಗ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡುವ ಸಮಯವನ್ನು ವಿಸ್ತರಿಸಲಾಗಿದೆ. ಆದರೆ, ಈ ಅವಧಿಯಲ್ಲಿ ಹಣವರ್ಗಾವಣೆಗೆ ಶುಲ್ಕ ವಿಧಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

ಜೂನ್ ರಿಂದ ಅನ್ವಯವಾಗುವಂತೆ ಇನ್ಮುಂದೆ ಆರ್‌ಟಿಜಿಎಸ್‌ಸೇವಾವಧಿ ಸಮಯವನ್ನು ಬೆಳಗ್ಗೆ 8ರಿಂದ 11 ಗಂಟೆ, 11 ಗಂಟೆಯಿಂದ ಮಧ್ಯಾಹ್ನ 1, ಮಧ್ಯಾಹ್ನ 1 ಗಂಟೆಯಿಂದ ಸಂಜೆ 6ತನಕ ವಿಸ್ತರಣೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆವರೆಗಿನ ಅವಧಿಯಲ್ಲಿ ಪ್ರತಿ ಹಣ ವರ್ಗಾವಣೆಗೆ 5 ರೂಪಾಯಿ ಸೇವಾವಧಿ ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಆರ್‌ಟಿಜಿಎಸ್ ಬ್ಯಾಕಿಂಗ್ ವಲಯದಲ್ಲಿ ತ್ವರಿತಗತಿಯಲ್ಲಿ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಕಳುಹಿಸುವ ವ್ಯವಸ್ಥೆಯಾಗಿದ್ದು, ಈ ಮುನ್ನ ಸಂಜೆ 4.30 ಗಂಟೆಯ ವರೆಗೂ ಮಾತ್ರ ಆರ್‌ಟಿಜಿಎಸ್ ಮಾಡಲಾಗುತಿತ್ತು. ಇದರಿಂದ ಚೆಕ್ ಹೊರತು ಪಡಿಸಿದರೆ ಬಹುತೇಕ ಮಂದಿ ಈ ವ್ಯವಸ್ಥೆಯಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದರಿಂದ ಗ್ರಾಹಕರಿಗೆ ಸಮಸ್ಯೆಯಾಗಿತ್ತು.

ಇದೀಗ ಸಮಯ ವಿಸ್ತರಣೆ ಮಾಡಿರುವುದರಿಂದ ಆರ್‌ಟಿಜಿಎಸ್ ವ್ಯವಸ್ಥೆಯಲ್ಲಿ 6 ಲಕ್ಷ ರೂಪಾಯಿಗಿಂತ ಮೇಲ್ಪಟ್ಟು ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ತಕ್ಷಣವೇ ಹಣ ವರ್ಗಾವಣೆ ಮಾಡಬಹುದಾಗಿದೆ. ಆರ್‌ಟಿಜಿಎಸ್ ಮೂಲಕ ಹಣ ಕಳುಹಿಸಲು ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ ಕೋಡ್ ಮತ್ತು ಫಲಾನುಭವಿಯ ಖಚಿತ ಖಾತೆಯ ಸಂಖ್ಯೆ ಮುಖ್ಯವಾಗಿದೆ.
ಓದಿರಿ: ಯೂರೋಪ್‌ನಲ್ಲಿ ಪವಾಡವನ್ನೇ ಮಾಡಿದ ಒಂದು ಚೆಡ್ಡಿಯ ಕಥೆ ಓದಿ!


Click it and Unblock the Notifications




