ಮುಖ್ಯಮಂತ್ರಿ ಪತ್ನಿಗೆ 23 ಲಕ್ಷ ರೂ. ವಂಚಿಸಿದರು ಆನ್‌ಲೈನ್ ಖದೀಮರು!

|

ಆನ್‌ಲೈನ್ ವಂಚಕರ ಕರಾಮತ್ತಿಗೆ ಸಿಲುಕುವ ಸಾಮಾನ್ಯರ ಕಥೆ ಒಂದೆಡೆಯಾದರೆ, ಮುಖ್ಯಮಂತ್ರಿ ಪತ್ನಿ ಹಾಗೂ ಸಂಸದೆಯೋರ್ವರಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿರುವ ಘಟನೆ ದೇಶದಲ್ಲಿ ನಡೆಸಿದೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಪತ್ನಿ ಹಾಗೂ ಸಂಸದೆಯಾಗಿರುವ ಪ್ರಣೀತ್ ಕೌರ್ ಅವರು ಸೈಬರ್ ವಂಚನೆಗೆ ಒಳಗಾಗಿದ್ದು, ಬರೋಬ್ಬರಿ 23 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಪತ್ನಿಗೆ 23 ಲಕ್ಷ ರೂ. ವಂಚಿಸಿದರು ಆನ್‌ಲೈನ್ ಖದೀಮರು!

ಹೌದು, ನಾನು ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಮಾತನಾಡುತ್ತಿದ್ದೇನೆ. ನಿಮ್ಮ ಬ್ಯಾಂಕ್ ಖಾತೆ ವಿವರ ಕೊಡಿ, ಸಂಬಳ ಡೆಪಾಸಿಟ್ ಮಾಡಬೇಕಾಗಿದೆ ಎಂದು ವಂಚಕ ಹೇಳಿದ್ದನ್ನು ಸಂಸದೆ ಪ್ರಣೀತ್ ಕೌರ್ ಅವರು ನಂಬಿದ್ದಾರೆ. ನಂತರ ಪ್ರಣೀತ್ ಕೌರ್ ಅವರ ಬ್ಯಾಂಕ್ ಖಾತೆ ವಿವರ, ATM ಪಿನ್, ಸಿವಿಸಿ ನಂಬರ್ ಜೊತೆಗೆ ಒಟಿಪಿಯನ್ನು ಸಹ ಪಡೆದಿರುವ ವಂಚಕರು ಅವರ ಖಾತೆಯಿಂದ 23 ಲಕ್ಷ ರೂ. ಹಣ ದೋಚಿದ್ದಾರೆ.

ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲೀಸರು ವಂಚಿಸಿದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ವಿವಿಐಪಿ ಪ್ರಕರಣದಲ್ಲಿ ಆರೋಪಿಯನ್ನು ಬಹುಬೇಗ ಹಿಡಿದಿರುವುದು ಇಲ್ಲಿ ಸ್ಪಷ್ಟ. ಆದರೆ, ಹೀಗೆ ವಂಚನೆಯಾದರೆ ನಮ್ಮಂತಹ ಸಾಮನ್ಯರ ಕಥೆ ಏನು? ಹಾಗಾಗಿ, ಆನ್‌ಲೈನ್ ವಂಚಕರಿಂದ ನಿಮ್ಮ ಖಾತೆಯ ಹಣವನ್ನು ಸೇಫ್ ಆಗಿ ಇಟ್ಟುಕೊಳ್ಳಲು ಈ ಮುಂದಿನ ಭದ್ರತಾ ಕ್ರಮಗಳನ್ನು ಅನುಸರಿಸಿ.

 ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ

ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಳಾಗಿದ್ದು ಅವುಗಳನ್ನು ಬಹಲಿಸಬೇಕಿದೆ ಅಥವಾ ನಿಮ್ಮ ಕಾರ್ಡ್ ಸೆಕ್ಯುರಿಟಿ ಚೆಕ್ ಮಾಡಬೆಕಿದೆ ಎನ್ನುವ ಕಾಲ್‌ಗಳನ್ನು ಸೈಬರ್ ಕ್ರಿಮಿನಲ್‌ಗಳು ಮಾಡಿರುತ್ತಾರೆ. ಅಂತವರಿಗೆ ನಿಮ್ಮ ಯಾವುದೇ ಡೀಟೆಲ್ಸ್ ಅನ್ನು ನಿಡಬೇಡಿ. ಯಾವುದೇ ಬ್ಯಾಂಕ್‌ನಲ್ಲಿಯೂ ಸಹ ಫೋನ್ ಮೂಲಕ ವ್ಯವಹರಿಸುವುದಿಲ್ಲ ಎಂಬುದನ್ನು ನೀವು ತಿಳಿದಿರಿ.

ಪಿನ್‌ ಮತ್ತು ಒಟಿಪಿಯನ್ನು ನೀಡಲೇಬೇಡಿ!

ಪಿನ್‌ ಮತ್ತು ಒಟಿಪಿಯನ್ನು ನೀಡಲೇಬೇಡಿ!

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಅಥವಾ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಯಾರಿಗೂ ನಿಮ್ಮ ಪಿನ್ ಮತ್ತು ಒಟಿಪಿಯನ್ನು ನೀಡಲೇಬೇಡಿ. ಸೈಬರ್‌ಗಳಿಗೆ ನಿಮ್ಮ ಪಿನ್ ಸಂಖ್ಯೆ ಅಥವಾ ಒಟಿಪಿ ಸಂಖ್ಯೆ ಸಿಕ್ಕರೆ ಸಾಕು ನಿಮ್ಮ ಹಣಕ್ಕೆ ಪಂಗನಾಮ ಹಾಕುತ್ತಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ನಿಮ್ಮ ಒಟಿಪಿ ಸಂಖ್ಯೆ ನಿಮ್ಮನ್ನು ಬಿಟ್ಟು ಅನ್ಯರಿಗೆ ತಿಳಿಯಲೇಬಾರದು.

ಗೂಗಲ್ ಅನ್ನು ಸಹ ನಂಬಬೇಡಿ!

ಗೂಗಲ್ ಅನ್ನು ಸಹ ನಂಬಬೇಡಿ!

ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಸಿಗುವ ಎಲ್ಲಾ ವಿಷಯಗಳು ಸಹ ನಿಜ ಎಂದು ನಂಬಬೇಡಿ. ಗೂಗಲ್‌ನಲ್ಲಿ ಖಾಸಾಗಿ ಜನರು ಸಹ ಮಾಹಿತಿಯನ್ನು ಎಡಿಟ್ ಮಾಡುವ ಆಯ್ಕೆ ಇದೆ. ಕೆಲವು ವೆಬ್‌ಸೈಟ್‌ಗಳು ನಂಬಿಕೆ ಬರುವಂತಹ ಬರಗಳಿಂದ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತವೆ. ಹೀಗೆ ಮಾಡಿ ನಿಮ್ಮಿಂದ ಖಾಸಾಗಿ ಮಾಹಿತಿಯನ್ನು ಸಂಗ್ರಹಿಸುತ್ತವೆ ಎಂಬುದು ಗೊತ್ತಿರಲಿ.

ನಕಲಿ ಫೋನ್, ಇ-ಮೇಲ್‌ಗಳ ಬಗ್ಗೆ ಎಚ್ಚರ

ನಕಲಿ ಫೋನ್, ಇ-ಮೇಲ್‌ಗಳ ಬಗ್ಗೆ ಎಚ್ಚರ

ನಿಮ್ಮ ಮೊಬೈಲ್ ನಂಬರ್‌ಗೆ ಗಿಫ್ಟ್ ಬಂದಿದೆ. ನಿಮಗೆ ಫಾರಿನ್ ಟ್ರಿಪ್ ಟಿಕೆಟ್ ಉಚಿತವಾಗಿ ಸಿಕ್ಕಿದೆ. ಉತ್ತಮ ಕೆಲಸ ಕೊಡಿಸುತ್ತೇನೆ ಎಂದು ಫೋನ್ ಅಥವಾ ಇಮೇಲ್‌ಗಳ ಮೂಲಕ ಸಂಪರ್ಕಿಸುವವರ ಬಗ್ಗೆ ಎಚ್ಚರವಾಗಿ. ಅವರೆಲ್ಲರೂ ನಿಮ್ಮ ಬಳಿ ಹಣವನ್ನು ದೂಚುವ ಸಲುವಾಗಿಯೇ ನಾಟಕ ಮಾಡುತ್ತಿರುತ್ತಾರೆ. ಇಂತಹ ಮೇಲ್‌ಗಳಿಗೆ ತಲೆಕೆಡಿಸಿಕೊಳ್ಳಲೇಬೇಡಿ.

ಪಾಸ್‌ವರ್ಡ್ ಬದಲಿಸುತ್ತಿರಿ.

ಪಾಸ್‌ವರ್ಡ್ ಬದಲಿಸುತ್ತಿರಿ.

ಬ್ಯಾಂಕಿಂಗ್ ಮತ್ತು ಆನ್‌ಲೈನ್ ಪ್ರಪಂಚದಲ್ಲಿ ಈಗ ಸುರಕ್ಷಿತ ಪಾಸ್‌ವರ್ಡ್‌ಗಳೇ ಮುಖ್ಯ. ಹಾಗಾಗಿ, ಯಾವಾಗಲೂ ಆನ್‌ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗೆ ನೀಡಿರುವ ಪಿನ್ ಸಂಖ್ಯೆಯನ್ನು ಬದಲಿಸುತ್ತಿರಿ. ಹೀಗೆ ಮಾಡುವುದರಿಂದ ಸೈಬರ್ ಕಳ್ಳರಿಗೆ ನಿಮ್ಮ ಪಾಸ್‌ವರ್ಡ್ ಕದಿಯಲು ಸುಲಭ ಸಾಧ್ಯವಾಗುವುದಿಲ್ಲ ಎಂಬುದನ್ನು ತಿಳಿದಿರಿ.

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ನೀವು ಹೆಚ್ಚು ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚು ಮಾಡುತ್ತಿದ್ದರೆ ಅವುಗಳ ಸೆಕ್ಯುರಿಟಿ ಬಗ್ಗೆ ಎಚ್ಚರವಾಗಿರಿ. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಉತ್ತಮ ಗುಣಮಟ್ಟದ ಆಂಟಿವೈರೆಸ್ ಸಾಫ್ಟ್‌ವೇರ್ ಬಳಸಿದರೆ ಒಳ್ಳೆಯದು. ಇದರಿಂದ ಸೈಬರ್ ಫೈಲ್‌ಗಳು ನಿಮ್ಮ ಡಿವೈಸ್ ಅನ್ನು ಕ್ರಾಕ್ ಮಾಡಲು ಸಾಧ್ಯವಿಲ್ಲ.

Best Mobiles in India

English summary
Punjab Chief Minister Amarinder Singh’s wife Preneet Kaur lost ₹23 lakh to a scammer who duped her through a mobile phone call, posing as a bank manager, said the police. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X