ಕೇರಳ ಸಿಎಂ ಉಮ್ಮನ್‌ ಚಾಂಡಿ ಮೊಬೈಲ್‌ ತಗೋತಾರಂತೆ!

Posted By:

ಕೇರಳ ಮುಖ್ಯಮಂತ್ರಿ ಕೊನೆಗೂ ಸ್ವಂತ ಮೊಬೈಲ್‌ ಫೋನ್‌ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ. ಇಲ್ಲಿಯವರೆಗೆ ಸಿಎಂ ಬಳಿ ಸ್ವಂತ ಮೊಬೈಲ್‌ ಇರಲಿಲ್ಲ. ಆಪ್ತ ಕಾರ್ಯ‌ದರ್ಶಿ ಮೂಲಕ ಚಾಂಡಿ ಅವರನ್ನು ಸಂಪರ್ಕಿ‌ಸಬೇಕಿತ್ತು.

ಆದರೆ ಇನ್ನೂ ಮುಂದೆ ಸ್ವಂತ ಮೊಬೈಲ್‌ ಹೊಂದುವುದಾಗಿ ಉಮ್ಮನ್‌ ಚಾಂಡಿ ಪ್ರಕಟಿಸಿದ್ದಾರೆ. ಈ ಸಂಬಂಧ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಮುಖ್ಯಮಂತ್ರಿ ಚಾಂಡಿ, ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಶೀಘ್ರದಲ್ಲಿ ನಾನು ಸ್ವಂತದ ಮೊಬೈಲ್ ಕೊಂಡುಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.

ಕೇರಳ ಸಿಎಂ ಉಮ್ಮನ್‌ ಚಾಂಡಿ ಮೊಬೈಲ್‌ ತಗೋತಾರಂತೆ!

ಟೀಂ ಸೋಲಾರ್ ಕಂಪೆನಿ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣ ಕೇರಳ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದು, ವಂಚನೆ ಎಸಗಿರುವ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಸರಿತಾ.ಎಸ್ ನಾಯರ್ ಅವರ ದೂರವಾಣಿ ಕರೆಗಳ ಮಾಹಿತಿಗಳನ್ನು ಮಾಧ್ಯಮ ಪ್ರಕಟಿಸಿದೆ.

ಚಾಂಡಿ ಅವರ ಆಪ್ತ ಕಾರ್ಯದರ್ಶಿ ಟೆನಿ ಜೊಪನ್ ಮತ್ತು ಭದ್ರತಾ ಸಿಬ್ಬಂದಿ ಸಲೀಂ ರಾಜ್ ಕೂಡ ಸರಿತಾ ಜತೆ ನಿರಂತರ ಆಪ್ತ ಸಂಭಾಷಣೆ ನಡೆಸಿರುವ ಮಾಹಿತಿ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಚಾಂಡಿ ಕೆಲಸದಿಂದ ವಜಾಗೊಳಿಸಿದ್ದಾರೆ. ಮುಂದೆ ಇಂಥ ಪ್ರಸಂಗಳಿಗೆ ಅವಕಾಶವಾಗಬಾರದು ಎಂಬ ನಿಟ್ಟಿನಲ್ಲಿ ಚಾಂಡಿ ಸ್ವಂತ ಮೊಬೈಲ್ ಹೊಂದುವ ನಿರ್ಧಾರ ಪ್ರಕಟಿಸಿದ್ದಾರೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot