Home
ಸುದ್ದಿಜಾಲ

AI ಆಧಾರಿತ ವೆಬ್ ಬ್ರೌಸರ್ ‘ChatGPT Atlas’ ಬಿಡುಗಡೆ: ಗೂಗಲ್ ಕಥೆ ಕ್ಲೋಸ್!?

ತಂತ್ರಜ್ಞಾನ ಜಗತ್ತು ಎಂದಿಗೂ ನಿಂತ ನೀರಲ್ಲ, ಅದು ನಿರಂತರವಾಗಿ ಬದಲಾಗುತ್ತಾ, ಹೊಸ ತಂತ್ರಜ್ಞಾನಗಳ ಮೂಲಕ ಮುಂದುವರಿಯುತ್ತಿದೆ. ಈ ಬದಲಾವಣೆಯ ಮಧ್ಯೆ, ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ಸ್ಪರ್ಧೆಗೆ ಹೊಸ ತಿರುವು ನೀಡುತ್ತಾ, OpenAI ಸಂಸ್ಥೆಯು Googleಗೆ ನೇರ ಸವಾಲು ನೀಡಿದೆ. ಸಂಸ್ಥೆಯು ತನ್ನ ಹೊಸ AI ಆಧಾರಿತ ವೆಬ್ ಬ್ರೌಸರ್ 'ChatGPT Atlas' ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಇದರ ವೈಶಿಷ್ಟ್ಯಗಳನ್ನು ಕಂಪನಿಯ CEO ಸ್ಯಾಮ್ ಆಲ್ಟ್‌ಮನ್ ಲೈವ್‌ಸ್ಟ್ರೀಮ್ ಮೂಲಕ ಅನಾವರಣಗೊಳಿಸಿದ್ದಾರೆ. ಈ ಘೋಷಣೆ ಇಂಟರ್‌ನೆಟ್ ಜಗತ್ತಿನಲ್ಲಿ ಹೊಸ ಯುಗದ ಪ್ರಾರಂಭಕ್ಕೆ ನಾಂದಿಯಾಗುವ ಸೂಚನೆ ನೀಡಿದೆ.!

ChatGPT Atlas: ಹೊಸ AI ಆಧಾರಿತ ವೆಬ್ ಬ್ರೌಸರ್
OpenAI ಪರಿಚಯಿಸಿರುವ ಹೊಸ AI ಆಧಾರಿತ ವೆಬ್ ಬ್ರೌಸರ್ 'ChatGPT Atlas' ಈಗ ಬಳಕೆದಾರರಿಗೆ ಲಭ್ಯವಾಗಿದೆ. ಪ್ರಾರಂಭದಲ್ಲಿ macOS ಬಳಕೆದಾರರಿಗೆ ಲಭ್ಯವಿದ್ದು, ಶೀಘ್ರದಲ್ಲೇ Windows, iOS ಮತ್ತು Android ಆವೃತ್ತಿಗಳಿಗೂ ಬಿಡುಗಡೆ ಮಾಡಲು ಕಂಪನಿ ಯೋಜಿಸಿದೆ. ಈ ಬ್ರೌಸರ್‌ನಲ್ಲಿರುವ ಪ್ರಮುಖ ವೈಶಿಷ್ಟ್ಯವೆಂದರೆ "Agent Mode", ಇದು ಪ್ರಸ್ತುತ ChatGPT Plus ಮತ್ತು Pro ಬಳಕೆದಾರರಿಗೆ ಮಾತ್ರ ಲಭ್ಯ. ಈ ಮೋಡ್ ಮೂಲಕ AI ಬಳಕೆದಾರರ ಪರವಾಗಿ ಕಾರ್ಯಗಳನ್ನು ನೇರವಾಗಿ ನಿರ್ವಹಿಸಬಹುದು. ಉದಾಹರಣೆಗೆ ವಿಮಾನ ಟಿಕೆಟ್ ಕಾಯ್ದಿರಿಸುವಂತಹ ಕಾರ್ಯಗಳು.

ವೈಯಕ್ತಿಕ ಅನುಭವಕ್ಕಾಗಿ ಮೆಮೊರಿ ಫೀಚರ್
Theverge ಮಾಧ್ಯಮಕ್ಕೆ OpenAI ತಂಡದ ಸದಸ್ಯರು ತಿಳಿಸಿದಂತೆ, Atlas ಬ್ರೌಸರ್‌ನಲ್ಲಿ 'ಮೆಮೊರಿ' ವ್ಯವಸ್ಥೆ ಅಳವಡಿಸಲಾಗಿದೆ. ಇದರ ಮೂಲಕ ಬ್ರೌಸರ್ ನಿಮ್ಮ ಹಿಂದಿನ ಸಂಭಾಷಣೆ ಮತ್ತು ಅಭಿರುಚಿಗಳನ್ನು ನೆನಪಿಟ್ಟುಕೊಂಡು, ಮುಂದೆ ಹೆಚ್ಚು ವೈಯಕ್ತಿಕ ಹಾಗೂ ಉಪಯುಕ್ತ ಸಲಹೆಗಳನ್ನು ನೀಡುತ್ತದೆ. ಜೊತೆಗೆ, ಬಳಕೆದಾರರು ಈ ಮೆಮೊರಿಗಳನ್ನು ಸೆಟ್ಟಿಂಗ್ಸ್‌ನಲ್ಲಿ ನಿಗ್ರಹಿಸಬಹುದು ಅಥವಾ ಇನ್‌ಕಾಗ್ನಿಟೋ ವಿಂಡೋ ಮೂಲಕ ಖಾಸಗಿ ಬ್ರೌಸಿಂಗ್ ಮಾಡಬಹುದು. ಇಷ್ಟೇ ಅಲ್ಲದೆ, ಸಮಗ್ರ ಬ್ರೌಸಿಂಗ್ ಅನುಭವವನ್ನು ಒದಗಿಸುವಂತಹ ಹಲವಾರು ವೈಶಿಷ್ಟ್ಯಗಳನ್ನು ಸಹ ಪರಿಚಯಿಸಲಾಗಿದೆ.

AI ಆಧಾರಿತ ವೆಬ್ ಬ್ರೌಸರ್ ‘ChatGPT Atlas’ ಬಿಡುಗಡೆ: ಗೂಗಲ್ ಕಥೆ ಕ್ಲೋಸ್!?

ChatGPT Atlas ಬಳಕೆದಾರರು ಹುಡುಕಾಟ ಫಲಿತಾಂಶದ (ಸರ್ಚ್ ರಿಸಲ್ಟ್) ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಸ್ಪ್ಲಿಟ್-ಸ್ಕ್ರೀನ್ ದೃಶ್ಯದಲ್ಲಿ ವೆಬ್‌ಪೇಜ್ ಮತ್ತು ChatGPT ಸಂಭಾಷಣೆ ಒಂದೇ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಲಾಗಿದೆ. ಇದರಿಂದ ಬಳಕೆದಾರರು ಓದುವ ಅಥವಾ ಹುಡುಕುವ ವಿಷಯದ ಜೊತೆಗೆ ChatGPT ಸಲಹೆಗಳನ್ನು ಕೂಡ ಕಾಣಬಹುದು. ಈ ವಿನ್ಯಾಸವನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯೂ ಲಭ್ಯ. ಜೊತೆಗೆ, ವೆಬ್‌ಪೇಜ್ ಸಂಗ್ರಹ ಮತ್ತು ಇಮೇಲ್ ಪಠ್ಯವನ್ನು ಸರಿಪಡಿಸುವ "ಕರ್ಸರ್ ಚಾಟ್" ವೈಶಿಷ್ಟ್ಯವೂ ಇದೆ ಎಂದು ಹೇಳಲಾಗಿದೆ. .

AI ಬ್ರೌಸರ್ ಸ್ಪರ್ಧೆಗೆ ಹೊಸ ಸದಸ್ಯ. ಆದರೆ, ದೈತ್ಯ!
ಬಹುತೇಕ ನೀವು ಕೂಡ ಗಮನಿಸಿರಬಹುದು. ಇತ್ತೀಚಿಗೆ AI ಆಧಾರಿತ ಬ್ರೌಸರ್‌ಗಳ ಪೈಪೋಟಿ ಈಗ ತೀವ್ರವಾಗಿದೆ. OpenAIಯ Atlas ಜೊತೆಗೆ, Perplexity ಕಂಪನಿಯ Comet ಬ್ರೌಸರ್ ಮತ್ತು Googleನ Gemini ಸಹಾಯಕ Chrome ಇಂಟಿಗ್ರೇಶನ್ ಕೂಡ ಈ ಪೈಪೋಟಿಯಲ್ಲಿ ಇವೆ. ಈ ಎಲ್ಲ ಪ್ರಯತ್ನಗಳ ಉದ್ದೇಶ ಒಂದೇಬ, ಳಕೆದಾರರಿಗೆ ವೇಗವಾದ, ಬುದ್ಧಿವಂತ ಮತ್ತು ಸಹಾಯಕ ಬ್ರೌಸಿಂಗ್ ಅನುಭವವನ್ನು ನೀಡುವುದು. ಆದರೆ, AI ಜಗತ್ತಿನಲ್ಲಿ ಮೊಟ್ಟಮೊದಲು ಸಂಚಲನ ಮೂಡಿಸಿದ OpenAI ಆಗಮನವು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ ಎಂದರೆ ತಪ್ಪೇನಿಲ್ಲ.!

ನನ್ನ ಅಭಿಪ್ರಾಯದಂತೆ, 'ChatGPT Atlas' ಬಿಡುಗಡೆ OpenAIಗೆ ಒಂದು ಮಹತ್ವದ ಹೆಜ್ಜೆ. ಇದು ಕೇವಲ ಹೊಸ ಬ್ರೌಸರ್‌ವಲ್ಲ, ಇಂಟರ್‌ನೆಟ್ ಬಳಸುವ ರೀತಿಯನ್ನು ಸಂಪೂರ್ಣವಾಗಿ ಬದಲಾಯಿಸುವ ಹೊಸ ಕಾಲದ ಆರಂಭವಾಗಿರಬಹುದು. ಮುಂದಿನ ದಿನಗಳಲ್ಲಿ ಇದು ಭಾರತದ ಬಳಕೆದಾರರಿಗೂ ಹೊಸ ಅನುಭವ ನೀಡುವ ಸಾಧ್ಯತೆ ಹೆಚ್ಚು. ಆದರೆ, ಗೂಗಲ್‌ಗೆ ನಿಜವಾದ ಪ್ರತಿಸ್ಪರ್ಥಿ ಆಗಬಹುದೇ?. ಖಂಡಿತವಾಗಿಯೂ ಕುತೂಹಲ ವಿಷಯ. ನಾವು ಇದನ್ನೂ ಊಹಿಸಲು ಸಾಧ್ಯವಿಲ್ಲ. ಮತ್ತೊಮ್ಮೆ ಹೇಳಬಹುದು. ತಂತ್ರಜ್ಞಾನ ಜಗತ್ತು ಎಂದಿಗೂ ನಿಂತ ನೀರಲ್ಲ.!

Best Mobiles in India

English summary
AI-enhanced web browser 'ChatGPT Atlas' from OpenAI has been launched for users, beginning with those on macOS. The company intends to extend this availability to Windows, iOS, and Android platforms shortly. The browser's notable feature is "Agent Mode," exclusively accessible to ChatGPT Plus and Pro subscribers. This mode enables the AI to carry out tasks directly on the user's behalf. ChatGPT Atlas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+