Home
ಸುದ್ದಿಜಾಲ

ಭರ್ಜರಿ ಸಿಹಿಸುದ್ದಿ: ಆಂಡ್ರಾಯ್ಡ್ ಬಳಕೆದಾರರಿಗೆ OpenAI Sora ಆ್ಯಪ್ ಬಿಡುಗಡೆ!

ಆಧುನಿಕ ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನ ಲೋಕದಲ್ಲಿ ಹೊಸ ಕ್ರಾಂತಿಯನ್ನು ತಂದಿರುವ OpenAI ಇದೀಗ ತನ್ನ ಅತ್ಯಂತ ನಿರೀಕ್ಷಿತ Sora ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗೂ ಬಿಡುಗಡೆ ಮಾಡಿದೆ. ಈ ಅಪ್ ಈಗ Google Play Store ನಲ್ಲಿ ಆಯ್ದ ದೇಶಗಳಲ್ಲಿ ಡೌನ್‌ಲೋಡ್‌ ಮಾಡಲು ಲಭ್ಯವಿದ್ದು, Android 6.0 ಅಥವಾ ನಂತರದ ಆವೃತ್ತಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

iOS ಬಳಿಕ ಈಗ Android ಬಳಕೆದಾರರಿಗೂ Sora ಲಭ್ಯ
ಈ ಮೊದಲು iOS ಬಳಕೆದಾರರಿಗಾಗಿ ಮಾತ್ರ ಲಭ್ಯವಿದ್ದ Sora ಅಪ್ ಈಗ ಆಂಡ್ರಾಯ್ಡ್‌ನಲ್ಲಿಯೂ ಪ್ರಾರಂಭವಾಗಿದೆ. ಆರಂಭದಲ್ಲಿ ಇದು ಕೇವಲ ಅಮೆರಿಕಾ ಮತ್ತು ಕೆನಡಾದಲ್ಲಿ ಆಮಂತ್ರಣ ಆಧಾರಿತ (invite-only) ರೀತಿಯಲ್ಲಿ ಮಾತ್ರ ಲಭ್ಯವಿತ್ತು. ಈಗ OpenAI ಸಂಸ್ಥೆ ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳಲ್ಲಿಯೂ Sora ಅಪ್ ಬಿಡುಗಡೆ ಮಾಡಿದೆ ಮತ್ತು invite-only ನಿಯಮವನ್ನು ತೆಗೆದುಹಾಕಿದೆ.

ಹೇಗೆ ಕೆಲಸ ಮಾಡುತ್ತದೆ Sora ಅಪ್?
Sora ಅಪ್‌ನಲ್ಲಿ ಬಳಕೆದಾರರು ಟೆಕ್ಸ್ಟ್ ಪ್ರಾಂಪ್ಟ್‌ಗಳು, ಚಿತ್ರಗಳು ಅಥವಾ ಸಣ್ಣ ವಿಡಿಯೋ ಕ್ಲಿಪ್‌ಗಳು ಅಪ್‌ಲೋಡ್ ಮಾಡಬಹುದು. OpenAI ಯ Sora 2 AI ಮಾದರಿ ಆ ಡೇಟಾವನ್ನು ವಿಶ್ಲೇಷಿಸಿ, ನೈಜತೆಯಂತೆ ಕಾಣುವ "ಹೈಪರ್‌ರಿಯಲ್" ವಿಡಿಯೋಗಳನ್ನು ಧ್ವನಿಯೊಡನೆ ಸೃಷ್ಟಿಸುತ್ತದೆ. ಈ ತಂತ್ರಜ್ಞಾನದಿಂದ, ಸ್ಟಿಲ್ ಚಿತ್ರಗಳಿಂದಲೂ ಜೀವಂತ ದೃಶ್ಯಗಳನ್ನು ನಿರ್ಮಿಸುವ ಸಾಮರ್ಥ್ಯ ಲಭ್ಯವಾಗಿದೆ.

ಭರ್ಜರಿ ಸಿಹಿಸುದ್ದಿ: ಆಂಡ್ರಾಯ್ಡ್ ಬಳಕೆದಾರರಿಗೆ OpenAI Sora ಆ್ಯಪ್ ಬಿಡುಗಡೆ!

YouTube Shorts ಇಂಟರ್ಫೇಸ್
OpenAI ಪರಿಚಯಿಸಿರುವ Sora ಅಪ್ಲಿಕೇಶನ್‌ನ ಇಂಟರ್ಫೇಸ್ (UI) ನೋಡಲು YouTube Shorts‌, TikTok ಮತ್ತು Instagram Reels ಗಳಂತೆಯೇ ವಿನ್ಯಾಸಗೊಳಿಸಲಾಗಿದೆ. ಆದರೆ ಪ್ರಮುಖ ವ್ಯತ್ಯಾಸವೆಂದರೆ, ಈ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಸ್ವಯಂ ಚಿತ್ರೀಕರಿಸುವುದಿಲ್ಲ, ಬದಲಿಗೆ AI ಮಾದರಿಯಿಂದ ನಿರ್ಮಿತ ವಿಡಿಯೋಗಳನ್ನು ರಚಿಸಿ ಹಂಚಿಕೊಳ್ಳುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಅವಕಾಶ
Sora ಅಪ್ಲಿಕೇಶನ್‌ನಲ್ಲ ಕ್ರಿಯೇಟ್ ಮಾಡಿದ AI ವಿಡಿಯೋಗಳನ್ನು Sora ಫೀಡ್‌ನಲ್ಲಿ ಪೋಸ್ಟ್ ಮಾಡಬಹುದು. ಇತರರು ಆ ವಿಡಿಯೋಗಳನ್ನು ಲೈಕ್, ಶೇರ್ ಮತ್ತು ಕಾಮೆಂಟ್ ಮಾಡುವ ಮೂಲಕ ಸಂವಹನ ಮಾಡಬಹುದು. ಈ ರೀತಿಯಲ್ಲಿ, Sora ಒಂದು ಸಾಮಾಜಿಕ ಮಾಧ್ಯಮ ವೇದಿಕೆಯಂತೆಯೇ ಕೆಲಸ ಮಾಡುತ್ತದೆ. ಆದರೆ ಇದು AI ಸೃಷ್ಟಿಸಿದ ವಿಡಿಯೋಗಳಿಗೆ ಲಭ್ಯ.

ಭಾರತದಲ್ಲಿ ಲಭ್ಯವಿದೆಯೇ?
ಪ್ರಸ್ತುತ ಭಾರತದಲ್ಲಿ Sora ಅಪ್ ಲಭ್ಯವಿಲ್ಲ. ಇದನ್ನು OpenAI ಸ್ಪಷ್ಟಪಡಿಸಿದೆ. ಆದರೆ ತಜ್ಞರ ಪ್ರಕಾರ, OpenAI ಮುಂದಿನ ಹಂತದಲ್ಲಿ ಭಾರತ, ಯುರೋಪ್ ಮತ್ತು ದಕ್ಷಿಣ ಏಷ್ಯಾ ಮಾರುಕಟ್ಟೆಗಳಲ್ಲಿ ಅಪ್ ವಿಸ್ತರಿಸುವ ಯೋಜನೆ ಹೊಂದಿದೆ. ಒಟ್ಟಾರೆಯಾಗಿ, OpenAI ಹೊಸ ತಲೆಮಾರಿನ ಕ್ರಿಯೇಟರ್‌ಗಳಿಗೆ AI ಆಧಾರಿತ ವಿಡಿಯೋ ನಿರ್ಮಾಣದ ನೂತನ ದಾರಿ ತೆರೆಯುತ್ತಿದೆ. . ಭಾರತದಲ್ಲಿ ಬಿಡುಗಡೆಯಾದಾಗ, ಇದು ಎಐ ವಿಡಿಯೋ ಕ್ರಿಯೇಷನ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದೆಂಬ ನಿರೀಕ್ಷೆ ಹೆಚ್ಚಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?. ನೀವು ಕೂಡ ಇಂತಹದೊಂದು ಅಪ್ಲಿಕೇಶನ್‌ ಬರುವುದನ್ನು ಕಾಯುತ್ತೀದ್ದೀರಾ?. ಮತ್ತು ಈ ಅಪ್ಲಿಕೇಶನ್ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
OpenAI has now released its highly anticipated Sora app for Android users. The app is now available for download on the Google Play Store in select countries and works on smartphones with Android 6.0 or later.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+