OpenAI ನಿಂದ ಸರ್ಪ್ರೈಸ್ ಆಫರ್: ChatGPT Go ಒಂದು ವರ್ಷ ಉಚಿತ!
ಸ್ಯಾಮ್ ಆಲ್ಟ್ಮನ್ ನೇತೃತ್ವದ OpenAI ಕಂಪೆನಿಯು ಭಾರತದಲ್ಲಿ ತನ್ನ AI ಸೇವೆಗಳನ್ನು ಜನಪ್ರಿಯಗೊಳಿಸಲು ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಕಂಪನಿಯು ChatGPT Go ಸೇವೆಯನ್ನು ಒಂದು ವರ್ಷದವರೆಗೆ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.! ಹೌದು, ಇತ್ತೀಚಿಗಷ್ಟೇ OpenAI ತನ್ನ ChatGPT Go ಸೇವೆಯನ್ನು ಆರಂಭಿಸಿತ್ತು. ಇದಕ್ಕಾಗಿ ಪ್ರತಿ ತಿಂಗಳು 399 ರೂ. ಚಂದಾದಾರಕೆಯನ್ನು ವಿಧಿಸಿತ್ತು. ಇದೀಗ ಈ ChatGPT Go ಸೇವೆಯು ಭಾರತೀಯರಿಗೆ ಒಂದು ವರ್ಷದ ವರೆಗೆ ಸಂಪೂರ್ಣ ಉಚಿತವಾಗಿ ದೊರೆಯಲಿದೆ.!
ನವೆಂಬರ್ 4 ರಂದು OpenAI ತನ್ನ ಮೊದಲ DevDay Exchange ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ. ಈ ಸೀಮಿತ ಅವಧಿಯ ಪ್ರಚಾರದಲ್ಲಿ ನೋಂದಾಯಿಸುವ ಭಾರತೀಯ ಬಳಕೆದಾರರಿಗೆ ಒಂದು ವರ್ಷದವರೆಗೆ ಉಚಿತವಾಗಿ ChatGPT Go ಸೇವೆ ಲಭ್ಯವಾಗಲಿದೆ. ಈ ಯೋಜನೆಯು ಹೊಸ ಬಳಕೆದಾರರಿಗೂ, ಈಗಾಗಲೇ ChatGPT Go ಬಳಸುತ್ತಿರುವವರಿಗೂ ಅನ್ವಯಿಸುತ್ತದೆ. ಹಾಗೆಯೇ ಈಗಿನ ಚಂದಾದಾರರಿಗೆ ಸ್ವಯಂಚಾಲಿತವಾಗಿ 12 ತಿಂಗಳ ಉಚಿತ ವಿಸ್ತರಣೆಯನ್ನು ನೀಡುವುದಾಗಿ ಕಂಪೆನಿ ತಿಳಿಸಿದೆ.
ChatGPT Go ಎಂದರೆ ಏನು?
ChatGPT Go ಚಂದಾದಾರಿಕೆಯನ್ನು OpenAI ಕಳೆದ ಆಗಸ್ಟ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದು ಮಾಸಿಕ 399 ರೂ.ಗಳ ಕಡಿಮೆ ದರದ ಪ್ಲಾನ್ ಆಗಿ ಪರಿಚಯಿಸಲಾಗಿತ್ತು. ಈ ಯೋಜನೆಯಲ್ಲಿ ಬಳಕೆದಾರರಿಗೆ ಹೆಚ್ಚಿನ AI ಸೌಲಭ್ಯಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸಲಾಗಿತ್ತು. ಅಂದರೆ, ಈ ಯೋಜನೆಗೆ ಚಂದಾದಾರರಾದ ಗ್ರಾಹಕರು ಹೆಚ್ಚಿನ ಪ್ರಶ್ನೆಗಳನ್ನು ಕೇಳಬಹುದಾದ, ಹೆಚ್ಚಿನ ಚಿತ್ರಗಳನ್ನು ಜೆನರೇಟ್ ಮಾಡಬಹುದಾದ ಹಾಗೂ ಫೈಲ್ ಅಪ್‌ಲೋಡ್ ಮಾಡಬಹುದಾ ಮುಂತಾದ ವೈಶಿಷ್ಟ್ಯಗಳು ಲಭ್ಯವಾಗುತ್ತಿದ್ದವು.

ಭಾರತವು OpenAIಗೆ ಪ್ರಮುಖ ಮಾರುಕಟ್ಟೆ
OpenAI ಪ್ರಕಾರ, ಭಾರತ ಈಗ ChatGPT ಬಳಕೆದಾರರ ದೃಷ್ಟಿಯಿಂದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಲಕ್ಷಾಂತರ ಭಾರತೀಯರು ವಿದ್ಯಾರ್ಥಿಗಳು, ಡೆವಲಪರ್‌ಗಳು ಹಾಗೂ ಉದ್ಯೋಗಿಗಳು ಪ್ರತಿದಿನ ChatGPT ಬಳಸಿ ತಮ್ಮ ಕಲಿಕೆ ಮತ್ತು ಕೆಲಸದ ಕ್ಷಮತೆಯನ್ನು ಹೆಚ್ಚಿಸುತ್ತಿದ್ದಾರೆ. ಈ ಉಚಿತ ChatGPT Go ಆಫರ್ ಕಂಪನಿಯ 'India-first' ದೃಷ್ಟಿಕೋನದ ಭಾಗವಾಗಿದೆ. ಇದು ಭಾರತದ IndiaAI Mission ಗುರಿಗಳನ್ನು ಬೆಂಬಲಿಸುವುದರ ಜೊತೆಗೆ ಮುಂದಿನ AI Impact Summit 2026ಗೆ ಮುನ್ನ AI ಚಟುವಟಿಕೆಗಳಿಗೆ ವೇಗ ನೀಡುತ್ತದೆ ಎಂದು ಕಂಪೆನಿ ಹೇಳಿದೆ.
ಈ ಕುರಿತು ಮಾತನಾಡಿರುವ OpenAI ಉಪಾಧ್ಯಕ್ಷ ನಿಕ್ ಟರ್ಲಿ ಅವರು, "ಭಾರತದಲ್ಲಿ ChatGPT Go ಬಿಡುಗಡೆ ಮಾಡಿದ ನಂತರ ಕಂಡ ಉತ್ಸಾಹ ಮತ್ತು ಸೃಜನಶೀಲತೆಯು ನಮಗೆ ಪ್ರೇರಣೆಯಾಗಿದೆ. DevDay Exchange ಕಾರ್ಯಕ್ರಮಕ್ಕೂ ಮುನ್ನ ನಾವು ಹೆಚ್ಚು ಭಾರತೀಯರಿಗೆ ಉಚಿತ ಪ್ರವೇಶ ನೀಡಿ AI ಉಪಯೋಗವನ್ನು ವಿಸ್ತರಿಸಲು ಬಯಸುತ್ತೇವೆ," ಎಂದು ಹೇಳಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು, ವೃತ್ತಿಪರರು, ಕ್ರಿಯೇಟರ್‌ಗಳು ಹಾಗೂ ದಿನನಿತ್ಯದ ಬಳಕೆದಾರರು ಹೆಚ್ಚು ಸುಗಮವಾಗಿ ChatGPT ಉಪಯೋಗಿಸಲು ಸಾಧ್ಯವಾಗಲಿದೆ. ಏನಂತಿರಾ?..ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.
ಗಮನಿಸಿ: ಭಾರತೀಯರಿಗೆ ಒಂದು ವರ್ಷದವರೆಗೆ ChatGPT Go ಸೇವೆಯನ್ನು ಪಡೆಯಲು ನವೆಂಬರ್ 4 ರಿಂದ ನೊಂದಾಯಿಸಿಕೊಳ್ಳಲು ಹೇಳಲಾಗಿದೆ. ಆದರೆ, ಈ ಸೀಮಿತ ಅವಧಿಯ ಇದನ್ನು ಹೇಗೆ ನೋಂದಾಯಿಸಬೇಕು ಎಂಬ ಬಗ್ಗೆ ಪ್ರಸ್ತುತ ಮಾಹಿತಿ ಲಭ್ಯವಾಗಿಲ್ಲ. ಮತ್ತು ಈಗಾಗಲೇ ಈ ಚಂದಾದಾರಿಕೆ ಪಡೆದವರಿಗೆ ಈ ಕೊಡುಗೆಯಿಂದ ಆಗುವ ಬದಲಾವಣೆ ಏನು ಎಂಬುದನ್ನು ಸಹ ನಿರೀಕ್ಷಿಸಲಾಗಿದೆ. ಈ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ನಾವು ಅಪ್‌ಡೇಟ್ ಮಾಡುತ್ತೇವೆ. ಇದಕ್ಕಾಗಿ, ಕನ್ನಡ ಗಿಜ್‌ಬಾಟ್‌ನಲ್ಲಿ ಯಾವಾಗಲೂ ಲೈವ್ ಆಗಿರಿ.


Click it and Unblock the Notifications








