Home
ಸುದ್ದಿಜಾಲ

OpenAI ನಿಂದ ಹೊಸ GPT-5.1 ಬಿಡುಗಡೆ: AI ನಲ್ಲಿ ಮತ್ತೊಂದು ಕ್ರಾಂತಿ?!

ಸ್ಯಾನ್ ಫ್ರಾನ್ಸಿಸ್ಕೋ ಮೂಲದ AI ದೈತ್ಯ ಕಂಪೆನಿ OpenAI ಬುಧವಾರದಂದು ತನ್ನ ಮುಂದಿನ Thinking AI ಮಾದರಿ GPT-5.1 ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆಧುನಿಕ ಕೃತಕ ಬುದ್ಧಿಮತ್ತೆಯ ಲೋಕದಲ್ಲಿ ಸಂಚಲನ ಮುಡಿಸುತ್ತಿರುವ OpenAI ಈ ಬಾರಿ GPT-5.1 ಕೃತಕ ಬುದ್ಧಿಮತ್ತೆ (ಎಐ) ಮಾದರಿಗಳ ಗುಂಪನ್ನು ಪರಿಚಯಿಸಿದೆ. ಇದರಲ್ಲಿ GPT-5.1 Instant ಮತ್ತು GPT-5.1 ಥಿಂಕಿಂಗ್ ಎಂಬ ಎರಡು ಪ್ರಮುಖ ಪ್ರತ್ಯೇಕ ಮಾದರಿಗಳಿವೆ. ಇವುಗಳ ಸಹಾಯದಿಂದ ಈ ಹೊಸ GPT-5.1 ಆವೃತ್ತಿಯು ಹಿಂದಿನ GPT-5 ಕ್ಕಿಂತ ಹೆಚ್ಚು ಬುದ್ಧಿವಂತ, ವೇಗದ, ಮತ್ತು ಬಳಕೆದಾರರೊಂದಿಗೆ ಹೆಚ್ಚು ಮಾನವೀಯ ಸಂವಾದ ನೀಡುವಂತೆ ವಿನ್ಯಾಸಗೊಂದಿದೆ ಎಂದು ತಿಳಿಸಿಲಾಗಿದೆ. ಹಾಗಾದರೆ, ಹೊಸ AI ಮಾದರಿ GPT-5.1 ಮಾದರಿಯು ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

GPT-5.1: ಎರಡು ಪ್ರತ್ಯೇಕ ಮಾದರಿಗಳು
ಮೊದಲೇ ಹೇಳಿದಂತೆ, GPT-5.1 ಈಗ ಎರಡು ಮಾದರಿಗಳನ್ನು ಒಳಗೊಂಡಿದ್ದು, ಇವುಗಳಲ್ಲಿ

  • GPT-5.1 Instant: ವೇಗ ಮತ್ತು ಸಂವಾದದ ಸರಳತೆಗೆ ಒತ್ತು ನೀಡುತ್ತದೆ. ಇದು ಹೆಚ್ಚು ಸ್ನೇಹಪೂರ್ಣ ಮತ್ತು ನೈಸರ್ಗಿಕ ಮಾತುಗಳಲ್ಲಿ ಉತ್ತರಿಸುತ್ತದೆ.
  • GPT-5.1 Thinking: ಹೆಚ್ಚು ಆಳವಾದ ವಿಶ್ಲೇಷಣೆ ಹಾಗೂ ತರ್ಕಬದ್ಧ ಉತ್ತರಗಳನ್ನು ನೀಡುತ್ತದೆ. ಈ ಮಾದರಿ ಕಠಿಣ ಅಥವಾ ತಾಂತ್ರಿಕ ವಿಷಯಗಳಲ್ಲಿ ಹೆಚ್ಚು ಸ್ಪಷ್ಟ ವಿವರಣೆ ಒದಗಿಸುತ್ತದೆ.

ಈ ಎರಡೂ ಮಾದರಿಗಳು ಕೆಲಸದ ಕಠಿಣತೆಯ ಆಧಾರದ ಮೇಲೆ ತಮ್ಮ "thinking time" ಅನ್ನು ಸ್ವಯಂ ಹೊಂದಿಸಿಕೊಳ್ಳುತ್ತವೆ . ಅಂದರೆ, ಸರಳ ಪ್ರಶ್ನೆಗಳಿಗೆ ಕ್ಷಣಾರ್ಧದಲ್ಲಿ ಉತ್ತರ ದೊರೆಯಲಿದೆ. ಆದರೆ, ಕಠಿಣ ವಿಶ್ಲೇಷಣೆಗಳಿಗೆ ಆಳವಾದ ತರ್ಕವನ್ನು ಮಾಡಲಿದೆ.

OpenAI ನಿಂದ ಹೊಸ GPT-5.1 ಬಿಡುಗಡೆ: AI ನಲ್ಲಿ ಮತ್ತೊಂದು ಕ್ರಾಂತಿ?!

ಹೊಸ GPT-5.1 ಈಗ ಹೆಚ್ಚು ವೈಯಕ್ತಿಕ ಮತ್ತು ನಿಯಂತ್ರಣ ಹೊಂದಿದ ಅನುಭವ ನೀಡಲಿದೆ. OpenAI ಈಗ ChatGPT ಯನ್ನು ಬಳಕೆದಾರರ ಶೈಲಿಗೆ ಹೊಂದಿಕೊಳ್ಳುವಂತೆ ಬದಲಾಯಿಸಿದ್ದು, ಹೊಸ ಟೋನ್ ಮತ್ತು ಶೈಲಿ ನಿಯಂತ್ರಣಗಳು ಬಳಕೆದಾರರಿಗೆ ತಮ್ಮ ಸಂವಾದದ ಧಾಟಿಯನ್ನು ತಕ್ಷಣ ಬದಲಾಯಿಸಲು ಅವಕಾಶ ನೀಡುತ್ತವೆ. ಇದಕ್ಕಾಗಿ, Default, Professional, Friendly, Candid, Quirky, Efficient, Nerdy, ಮತ್ತು Cynical ಎಂಬ ಹೊಸ ಶೈಲಿ ಆಯ್ಕೆಗಳಿವೆ. ChatGPT ಕೂಡ ಬಳಕೆದಾರರ ವರ್ತನೆಯ ಆಧಾರದ ಮೇಲೆ ಸ್ವಯಂ ಶೈಲಿ ಬದಲಾವಣೆಯನ್ನು ಶಿಫಾರಸು ಮಾಡಬಹುದು.

GPT-5.1 ನಲ್ಲಿ ತಂದಿರುವ ಸುಧಾರಣೆಗಳು ಹೊಂದಾಣಿಕೆಯ ತಾರ್ಕಿಕತೆಯನ್ನು ಒಳಗೊಂಡಿವೆ. ಈ ಹೊಸ ಮಾದರಿಯಲ್ಲಿ ಸೇರಿಸಲಾದ Adaptive Reasoning ತಂತ್ರಜ್ಞಾನವು OpenAI ಯ ಅತ್ಯಾಧುನಿಕ ಪ್ರಯೋಗಗಳಲ್ಲಿ ಒಂದಾಗಿದೆ. ಇದು ಮಾದರಿಯನ್ನು ಕೆಲಸದ ಕಠಿಣತೆಗೆ ಅನುಗುಣವಾಗಿ ಹೆಚ್ಚು ಅಥವಾ ಕಡಿಮೆ "ಆಂತರಿಕ ತರ್ಕ" ಬಳಸಿ ಉತ್ತರಿಸಲು ಸಾಧ್ಯವಾಗಿಸುತ್ತದೆ. OpenAI ಪ್ರಕಾರ, GPT-5.1 Thinking ಸರಳ ಕೆಲಸಗಳಲ್ಲಿ GPT-5 ಕ್ಕಿಂತ ಎರಡು ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸಂಕೀರ್ಣ ಕೆಲಸಗಳಲ್ಲಿ ಎರಡು ಪಟ್ಟು ನಿಧಾನವಾಗಿಯೇ ಹೆಚ್ಚು ನಿಖರವಾಗಿ ವಿಶ್ಲೇಷಿಸುತ್ತದೆ.

ಈ ಹೊಸ ಮಾದರಿಗಳು ಈ ವಾರದದಲ್ಲಿ API ನಲ್ಲಿ ಲಭ್ಯವಿರುತ್ತವೆ. ಬಳಕೆದಾರರು ಹೋಲಿಕೆ ಮಾಡಲು ಅವಕಾಶವಿರುವಂತೆ, ಹಳೆಯ GPT-5 ಮಾದರಿ ಮೂರು ತಿಂಗಳವರೆಗೆ ಲೆಗಸಿ ವಿಭಾಗದಲ್ಲಿ ಲಭ್ಯವಿರಲಿದೆ. GPT-5.1 Instant gpt-5.1-chat-latest ಆಗಿ ಕಾಣಿಸಿಕೊಳ್ಳುತ್ತದೆ, ಆದರೆ GPT-5.1 Thinking GPT-5.1 ಎಂಡ್‌ಪಾಯಿಂಟ್ ಅಡಿಯಲ್ಲಿ ಹೊಂದಾಣಿಕೆಯ ತಾರ್ಕಿಕತೆಯನ್ನು ಸಕ್ರಿಯಗೊಳಿಸಿ ಬಿಡುಗಡೆಯಾಗುತ್ತದೆ. OpenAI ಈ ಬಿಡುಗಡೆಯನ್ನು "ಬಳಕೆದಾರ ಸ್ನೇಹಿ ಮತ್ತು ಸಾಮರ್ಥ್ಯದಲ್ಲಿ ದೊಡ್ಡ ಹಾದಿ" ಎಂದು ವರ್ಣಿಸಿದ್ದು, ಕೃತಕ ಬುದ್ಧಿಮತ್ತೆಯ ಮತ್ತೊಂದು ಹೆಜ್ಜೆ ಇಟ್ಟಿದೆ.

Best Mobiles in India

English summary
The new GPT-5.1 now offers a more personalized and controlled experience. OpenAI has now changed ChatGPT to adapt to the user's style, with new tone and style controls allowing users to instantly change the tone of their conversation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+