Home
ಸುದ್ದಿಜಾಲ

ChatGPT ಗೆ ಹೊಸ ‘ಗ್ರೂಪ್ ಚಾಟ್’ ವೈಶಿಷ್ಟ್ಯ: ಇಲ್ಲಿದೆ ಸಂಪೂರ್ಣ ಮಾಹಿತಿ!

ಸ್ಯಾನ್‌ ಫ್ರಾನ್ಸಿಸ್ಕೊ ಮೂಲದ ಕೃತಕ ಬುದ್ದಿಮತ್ತೆ ಕಂಪೆನಿ OpenAI ತನ್ನ ಜನಪ್ರಿಯ AI ಚಾಟ್‌ಬಾಟ್ ChatGPTಗೆ ಶುಕ್ತವಾರದಂದು 'ಗ್ರೂಪ್ ಚಾಟ್‌' ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಒಂದೇ ಚಾಟ್‌ನಲ್ಲಿ ಹಲವರು ಸೇರಿ ಯೋಜನೆ ರೂಪಿಸುವುದು, ಚರ್ಚೆಗಳು ನಡೆಸುವುದು ಹಾಗೂ ಕೆಲಸಗಳನ್ನು ಒಟ್ಟಿಗೆ ನಿರ್ವಹಿಸಲು ಅನುವು ಮಾಡಿಕೊಡಲಿದೆ. ಅಂದರೆ, ನೀವು ಈಗ ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರು, ವಿದ್ಯಾರ್ಥಿಗಳು ಅಥವಾ ಸಹೋದ್ಯೋಗಿಗಳೊಂದಿಗೆ ಒಂದೇ ಒಂದು ಜಾಗದಲ್ಲಿ ಸೇರಿ ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬಹುದು.!

'ಗ್ರೂಪ್ ಚಾಟ್‌' ಎಂದರೇನು?..ಹೇಗೆ ಬಳಸಬಹುದು?
OpenAI ಪ್ರಕಾರ, ChatGPT ಆಪ್‌ನಲ್ಲಿ ಮೇಲ್ಭಾಗದಲ್ಲಿರುವ ಹೊಸ 'People' ಐಕಾನ್ ಕ್ಲಿಕ್ ಮಾಡಿದರೆ ಒಂದು ವಿಶೇಷ URL ರಚನೆಗೊಳ್ಳುತ್ತದೆ. ಅದನ್ನು ಇತರ ChatGPT ಬಳಕೆದಾರರಿಗೆ ಹಂಚಿದರೆ, ಈ ಲಿಂಕ್ ಮೂಲಕ ಯಾರಾದರೂ ಗ್ರೂಪ್‌ಗೆ ಸೇರಬಹುದು. ಪ್ರತಿಯೊಂದು ಗ್ರೂಪ್ ಚಾಟ್‌ಗೆ ಗರಿಷ್ಠ 20 ಮಂದಿ ಸೇರಿಸಬಹುದು ಎಂದು ತಿಳಿಸಲಾಗಿದೆ. ಈ ವೈಶಿಷ್ಟ್ಯದ ಆಕರ್ಷಕ ಸಂಗತಿ ಎಂದರೆ, ಹಳೆಯ ಸಂಭಾಷಣೆಯನ್ನು ಕೂಡ ಗ್ರೂಪ್ ಆಗಿ ಪರಿವರ್ತಿಸಬಹುದು. ಆದರೆ ಮೂಲ ಸಂಭಾಷಣೆ ಬದಲಾಗದೆ ಉಳಿಯುತ್ತದೆ, ಏಕೆಂದರೆ ಪ್ಲಾಟ್‌ಫಾರ್ಮ್ ನಕಲಿ ಪ್ರತಿಯನ್ನು ಗ್ರೂಪ್‌ಗೆ ಬಳಸುತ್ತದೆ.

ಹೀಗೆ ಗ್ರೂಪ್‌ಗೆ ಸೇರ್ಪಡೆಯಾಗುವಾಗ ಬಳಕೆದಾರರು ಹೆಸರು, ಫೋಟೋ ಮತ್ತು ಯೂಸರ್‌ನೇಮ್ ಸೇರಿಸಬೇಕು. ಇದರಿಂದ ಚಾಟ್‌ನಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಸುಲಭವಾಗಿ ತಿಳಿದುಬರುವುದು. ರಚಿಸಿದ ಗ್ರೂಪ್‌ಗಳು ಸೈಡ್ಬಾರ್‌ನಲ್ಲಿ ಪ್ರತ್ಯೇಕ ವಿಭಾಗದಲ್ಲಿ ತೋರಿಸಲಾಗುತ್ತವೆ.ಗ್ರೂಪ್ ರಚಿಸಿದ ವ್ಯಕ್ತಿಗೆ ಸದಸ್ಯರನ್ನು ಸೇರಿಸುವ ಮತ್ತು ತೆಗೆದುಹಾಕುವ ಅಧಿಕಾರವಿದೆ. ಇತರ ಸದಸ್ಯರು ಚಾಟ್‌ ಹೆಸರನ್ನು ಬದಲಾಯಿಸುವುದು ಮತ್ತು ಅಧಿಸೂಚನೆಯನ್ನು ಮ್ಯೂಟ್ ಮಾಡುವುದೂ ಮಾಡಬಹುದು. ಇದು ಒಂದು ರೀತಿಯಲ್ಲಿ ಗೂಗಲ್‌ ಮೀಟ್‌ನಲ್ಲಿನ ಅಧಿಕಾರ ವ್ಯಾಪ್ತಿಯಂತಿದೆ.

ChatGPT ಗೆ ಹೊಸ ‘ಗ್ರೂಪ್ ಚಾಟ್’ ವೈಶಿಷ್ಟ್ಯ: ಇಲ್ಲಿದೆ ಸಂಪೂರ್ಣ ಮಾಹಿತಿ!
Photo credit : OpenAI

ಇನ್ನು ಈ ವೈಶಿಷ್ಟ್ಯದಲ್ಲಿ ChatGPT ಸಂಭಾಷಣೆಯ ವೇಗ ಮತ್ತು ವಿಷಯವನ್ನು ಗಮನಿಸಿ ಯಾವಾಗ ಪ್ರತಿಕ್ರಿಯಿಸಬೇಕು ಎಂಬುದನ್ನು ತಾನೇ ನಿರ್ಧರಿಸುತ್ತದೆ. ಬಳಕೆದಾರರು @ChatGPT ಎಂದು ಮೆನ್ಷನ್ ಮಾಡಿದರೆ ಅದು ತಕ್ಷಣ ಉತ್ತರಿಸುತ್ತದೆ. ಹೊಸ ಅಪ್ಡೇಟ್‌ನಲ್ಲಿ ChatGPT ಸಂದೇಶಗಳಿಗೆ ಇಮೋಜಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವೂ ಸೇರಿಸಲಾಗಿದೆ. ಪ್ರತಿ ಗ್ರೂಪ್‌ಗಾಗಿ ಪ್ರತ್ಯೇಕ ಕಸ್ಟಮ್ ಸೂಚನೆಗಳನ್ನೂ ಸೆಟ್ ಮಾಡಬಹುದು. ಇದು ನಿಮ್ಮ ನೈಜ (primary) ChatGPT ಅನುಭವಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಜೊತೆಗೆ ಇಲ್ಲಿ ಗೌಪ್ಯತೆ ಮತ್ತು ಭದ್ರತೆಗೂ ಕೂಡ ಒತ್ತು ನೀಡಲಾಗಿದೆ.

ಗ್ರೂಪ್ ಚಾಟ್‌ಗಳಲ್ಲಿ ಯಾರದ್ದೇ ವೈಯಕ್ತಿಕ ChatGPT ಮೆಮೊರಿ ಬಳಸಲಾಗುವುದಿಲ್ಲ ಹಾಗೂ ಹಂಚಿಕೊಳ್ಳುವ ಸಂದೇಶಗಳಿಂದ ಹೊಸ ಮೆಮೊರಿ ರಚನೆಯಾಗುವುದಿಲ್ಲ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಗ್ರೂಪ್‌ಗೆ ಸೇರಿದರೆ, ವಿಷಯವು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತವೆ. ಪೋಷಕರು ಬಯಸಿದರೆ ಗ್ರೂಪ್ ಚಾಟ್ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಬಹುದು. ಈ ವೈಶಿಷ್ಟ್ಯವನ್ನು ಮೊದಲ ಹಂತದಲ್ಲಿ ಜಪಾನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ ಮತ್ತು ತೈವಾನ್ ದೇಶಗಳಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಜಾಗತಿಕವಾಗಿ ವಿಸ್ತರಿಸುವ ನಿರೀಕ್ಷೆಯಿದೆ ಮತ್ತು ಈ ಸೇವೆಯು ಸಂಪೂರ್ಣ ಉಚಿತವಾಗಿದೆ.

Best Mobiles in India

English summary
OpenAI on Friday launched a new feature called ‘Group Chat’ for its popular AI chatbot ChatGPT. The feature will allow multiple users to plan, discuss, and work together in a single chat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+