ನೈಜ AI ವಿಡಿಯೋ ಅನುಭವ ನೀಡುವ ಹೊಸ Sora 2 ಮಾದರಿ ಬಿಡುಗಡೆ!
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿರುವ OpenAI, ತನ್ನ ಹೊಸ ವೀಡಿಯೋ ಎಡಿಟಿಂಗ್ ಕೃತಕ ಬುದ್ದಿಮತ್ತೆ ಮಾದರಿ Sora 2 ಮಾದರಿಯನ್ನು ಅನಾವರಣಗೊಳಿಸಿದೆ. ಕಂಪನಿಯ ಪ್ರಕಾರ, ಈ ಹೊಸ Sora 2 ತಂತ್ರಜ್ಞಾನವು ಹಿಂದಿನ ಮಾದರಿಗಳಿಗಿಂತ ಹೆಚ್ಚು ನಿಖರತೆ, ವಾಸ್ತವಿಕತೆ ಮತ್ತು ನಿಯಂತ್ರಣ ಶಕ್ತಿ ಹೊಂದಿದ್ದು, ಇದು ಕೇವಲ ದೃಶ್ಯ ರಚನೆಗೆ ಸೀಮಿತವಾಗಿಲ್ಲ. ಬದಲಾಗಿ, ಇದರಲ್ಲಿ ಆಡಿಯೋ, ಧ್ವನಿ ಮತ್ತು ಶಬ್ದ ಪರಿಣಾಮಗಳನ್ನು ಸೇರಿಸುವ ಸಾಮರ್ಥ್ಯವು ಸಹ ಇದೆ ಸಹ ಎಂದು ತಿಳಿಸಲಾಗಿದೆ.!
ಈ ಹಿಂದಿನ ವೀಡಿಯೊ ಮಾದರಿಗಳು ಪ್ರಾಂಪ್ಟ್ ಅನ್ನು ಪೂರೈಸಲು ವಾಸ್ತವವನ್ನು ಹೆಚ್ಚಾಗಿ ಸ್ವೀಕರಿಸುವಂತೆ ತೋರಿಸುತ್ತಿರಲಿಲ್ಲ. ಆದರೆ, ಇದೀಗ Sora 2 ಒಲಿಂಪಿಕ್ ಮಟ್ಟದ ಜಿಮ್ನಾಸ್ಟಿಕ್ಸ್ ಚಲನೆಗಳು, ಪ್ಯಾಡಲ್‌ಬೋರ್ಡ್ ತಂತ್ರಗಳು ಅಥವಾ ಸ್ಕೇಟಿಂಗ್ ಕಸರತ್ತುಗಳನ್ನು ಸಹ ಈ ಮಾದರಿ ನೈಜತೆಯಿಂದ ಪುನರಾವರ್ತಿಸಬಲ್ಲದು. ಮುಖ್ಯವಾಗಿ, ಇವು ಭೌತಿಕ ನಿಯಮಗಳನ್ನು ಪಾಲಿಸುತ್ತವೆ, ಅಂದರೆ ಮಾನವನ ಕಣ್ಣುಗಳಿಗೆ ಸಹಜವಾಗಿ ಕಾಣುತ್ತವೆ. ಜೊತೆಗೆ ಈ Sora 2 ಕೇವಲ ದೃಶ್ಯ ರಚನೆಗೆ ಸೀಮಿತವಾಗಿಲ್ಲ ಎಂದು OpenAI ತಿಳಿಸಿದೆ.
OpenAI ಪ್ರಕಾರ, ಈ ಮಾದರಿ ಮನರಂಜನೆಗೆ ಮಾತ್ರವಲ್ಲ, ವಿವಿಧ ಕ್ಷೇತ್ರಗಳಿಗೆ ಸಹ ಉಪಯುಕ್ತ.
ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಹಾಗೂ ಕ್ರೀಡೆಗೆ ಸಂಬಂಧಿಸಿದ ನೈಜ ದೃಶ್ಯ ಮಾದರಿಗಳನ್ನು ತೋರಿಸಲು ಸಹಕಾರಿಯಾಗಬಹುದು.
ಕ್ರೀಡಾಪಟುಗಳು ತಮ್ಮ ಅಭ್ಯಾಸವನ್ನು ವಿಶ್ಲೇಷಿಸಲು ಬಳಸಬಹುದು.
ಕಲಾವಿದರು ತಮ್ಮ ಕಲ್ಪನೆಗಳನ್ನು ದೃಶ್ಯ ರೂಪದಲ್ಲಿ ಸೃಷ್ಟಿಸಲು ಈ ಮಾದರಿ ನೆರವಾಗಬಹುದು.

OpenAI ಬ್ಲಾಗ್‌ಪ್ರಕಾರ: "ಈ Sora 2 ಮಾದರಿಯು ನಿಯಂತ್ರಣದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ಇದು ಜಟಿಲ ಸೂಚನೆಗಳನ್ನು ಅನುಸರಿಸಿ, ಒಂದಕ್ಕಿಂತ ಹೆಚ್ಚು ಶಾಟ್‌ಗಳಲ್ಲಿ ನಿಖರವಾಗಿ ಕೆಲಸ ಮಾಡಬಹುದು. ವಾಸ್ತವ, ಸಿನಿಮಾ ಮತ್ತು ಅನಿಮೆ ಶೈಲಿಗಳಲ್ಲಿ ಉತ್ತಮವಾಗಿದೆ." ಇದೇ ರೀತಿ, ಇದು ನೈಜ ಜಗತ್ತಿನ ಅಂಶಗಳನ್ನು ಸೇರಿಸಲು ಸಹ ಸಾಧ್ಯ. ಉದಾಹರಣೆಗೆ, ವ್ಯಕ್ತಿಯ ವೀಡಿಯೊ ನೋಡಿದ ಮೇಲೆ, ಮಾದರಿಯು ಆ ವ್ಯಕ್ತಿಯ ಮುಖ, ಧ್ವನಿ ಸೇರಿದಂತೆ ಲಕ್ಷಣಗಳನ್ನು ದೃಶ್ಯದಲ್ಲಿ ಸೇರಿಸಬಹುದು.
iOS ಆಧಾರಿತ ಹೊಸ ಆಪ್ ಬಿಡುಗಡೆ
Sora 2 ಜತೆಗೆ, OpenAI ಹೊಸ iOS ಆಧಾರಿತ ಸಾಮಾಜಿಕ ವಿಡಿಯೋ ಆಪ್‌ನ್ನು ಸಹ ಪರಿಚಯಿಸಿದೆ. ಇದರಲ್ಲಿ ಬಳಕೆದಾರರು ಕಿರು ವಿಡಿಯೋಗಳನ್ನು ಸೃಷ್ಟಿಸಿ ಹಂಚಿಕೊಳ್ಳಬಹುದು. Cameo ಎಂಬ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ ಸ್ವಂತ ಅವತಾರವನ್ನು (digital avatar) ಸೇರಿಸಿಕೊಳ್ಳಬಹುದು. ಆದರೆ, ಈ ವೈಶಿಷ್ಟ್ಯವನ್ನು ಬಳಸಲು ವ್ಯಕ್ತಿಯ ಸಮ್ಮತಿ ಅಗತ್ಯ. ಆಪ್ ಪ್ರಸ್ತುತ ಅಮೇರಿಕಾ ಮತ್ತು ಕೆನಡಾದಲ್ಲಿ ಮಾತ್ರ ಲಭ್ಯವಿದ್ದು, ಆಮಂತ್ರಣ ಆಧಾರದಲ್ಲಿ ನಿಧಾನವಾಗಿ ವಿಸ್ತರಿಸಲಾಗುತ್ತಿದೆ. ಇದರಲ್ಲಿನ ಎಲ್ಲಾ ವಿಡಿಯೋಗಳಿಗೆ "AI-generated" ಎಂಬ ಗುರುತು ಸೇರಿಸಲಾಗಿದ್ದು, ಪಾರದರ್ಶಕತೆ ಕಾಪಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
Sora 2 ಮೂಲಕ OpenAI ಮತ್ತೊಮ್ಮೆ AI ಕ್ಷೇತ್ರದಲ್ಲಿ ತನ್ನ ಮುನ್ನಡೆಯನ್ನು ತೋರಿಸಿದೆ. ದೃಶ್ಯ-ಶಬ್ದ ಸಮನ್ವಯ, ನಿಯಂತ್ರಣ ಶಕ್ತಿ ಮತ್ತು ನೈಜತೆಯೊಂದಿಗೆ, ಇದು ಶಿಕ್ಷಣ, ಕ್ರೀಡೆ ಹಾಗೂ ಕಲಾ ಕ್ಷೇತ್ರಗಳಿಗೆ ಹೊಸ ದಾರಿಗಳನ್ನು ತೆರೆದುಕೊಡಬಹುದು. ಆದರೆ, ಇದರ ನೈತಿಕ ಬಳಕೆಯೇ ಇದರ ನಿಜವಾದ ಮೌಲ್ಯವನ್ನು ನಿರ್ಧರಿಸುವುದು. ಏಕೆಂದರೆ, ಇಂತಹ ಶಕ್ತಿಶಾಲಿ ತಂತ್ರಜ್ಞಾನವು ತಪ್ಪುಮಾಹಿತಿ, deepfake ಮತ್ತು ಅಸತ್ಯ ಪ್ರಚಾರ ಮಾಡುವ ಅಪಾಯವಿದೆ. ಆದ್ದರಿಂದ OpenAI, ಈ ಮಾದರಿಯನ್ನು ಸಮಾಜದ ಹಿತಕ್ಕಾಗಿ ಮಾತ್ರ ಬಳಕೆ ಮಾಡಬೇಕು.
ನೈಜ AI ವಿಡಿಯೋ ಅನುಭವ ನೀಡುವ ಹೊಸ Sora 2 ಮಾದರಿ ಕುರಿತು ನಿಮ್ಮ ಅನಿಸಿಕೆಗಳೇನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








