ಒಪೆರಾ ಸಂಸ್ಥೆಯಿಂದ ವಿಶ್ವದ ಮೊದಲ ಗೇಮಿಂಗ್ ಬ್ರೌಸರ್ ಬಿಡುಗಡೆ!
ಜನಪ್ರಿಯ ವೆಬ್ ಬ್ರೌಸರ್ ಒಪೇರಾ ಈಗಾಗಲೇ ಬಳಕೆದಾರರಿಗೆ ಹಲವು ಮಾದರಿಯ ಸೇವೆಗಳನ್ನು ಪರಿಚಯಿಸಿದೆ. ತನ್ನ ಬಳಕೆದಾರರ ಹಿತಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಒಪೆರಾ ವೆಬ್‌ಬ್ರೌಸರ್ ಹೊಸ ಒಪೆರಾ ಜಿಎಕ್ಸ್ ಮೊಬೈಲ್ ಅನ್ನು ಲಾಂಚ್ ಮಾಡಿದೆ. ಇದು ಅದರ ಗೇಮಿಂಗ್ ಕೇಂದ್ರಿತ ಮೊಬೈಲ್ ಬ್ರೌಸಿಂಗ್ ಆರ್ಮ್ ಆಗಿದೆ. ಗೇಮಿಂಗ್ ಬ್ರೌಸರ್ ವಿಸ್ತರಣೆಯ ಡೆಸ್ಕ್‌ಟಾಪ್ ಆವೃತ್ತಿಯಾಗಿದೆ.

ಹೌದು, ಒಪೆರಾ ವೆಬ್ ಬ್ರೌಸರ್ ಹೊಸ ಒಪೆರಾ ಜಿಎಕ್ಸ್ ಮೊಬೈಲ್ ಅನ್ನು ಪರಿಚಯಿಸಿದೆ. ಇದು ಗೇಮಿಂಗ್ ಪ್ರಿಯರನ್ನು ಗುರಿಯಾಗಿಸಿಕೊಂಡು ಪರಿಚಯಿಸಿರುವ ಬ್ರೌಸಿಂಗ್ ಆರ್ಮ್ ಆಗಿದೆ. ಈ ಬ್ರೌಸರ್‌ನಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನು ಸೇರಿಸಲಾಗಿದ್ದು, ಜನರು ಸುಲಭವಾಗಿ ಗೇಮಿಂಗ್-ಸಂಬಂಧಿತ ಸರ್ಚಿಂಗ್ ಮಾಡಲು ಈ ಹೊಸ ಸರ್ಚ್ ಎಂಜಿನ್ ಅನುಮತಿಸುತ್ತದೆ. ಹಾಗಾದ್ರೆ ಈ ಹೊಸ ಒಪೇರಾ ಜಿಎಕ್ಸ್ ಮೊಬೈಲ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಪೆರಾ ಬ್ರೌಸರ್ ಪರಿಚಯಿಸಿರುವ ಹೊಸ ಒಪೆರಾ ಜಿಎಕ್ಸ್ ಮೊಬೈಲ್ ಹೊಸತನದ ಫೀಚರ್ಸ್‌ಗಳಿಂದ ಕೂಡಿದೆ. ಇನ್ನು ಬ್ರೌಸಿಂಗ್ ಸ್ಪೇಸ್ ಜಿಎಕ್ಸ್ ಕಾರ್ನರ್ ಅನ್ನು ಒಳಗೊಂಡಿದೆ. ಈ ಬ್ರೌಸರ್ ಅತ್ಯಾಸಕ್ತಿಯ ಗೇಮರುಗಳಿಗಾಗಿ ಇತ್ತೀಚಿನ ಗೇಮಿಂಗ್ ಸುದ್ದಿ ಮತ್ತು ಅಪ್ಡೇಟ್‌ಗಳನ್ನು ಸಂಗ್ರಹಿಸುತ್ತದೆ. ಇದರಿಂದ ಬಳಕೆದಾರರು ಇಷ್ಟ ಪಡುವ ಗೇಂ್‌ಗಳ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸುವುದು ಸುಲಭವಾಗಲಿದೆ. ಜೊತೆಗೆ, ಲಭ್ಯವಿರುವ ಡೀಲ್ ಅಗ್ರಿಗೇಟರ್‌ಗಳ ಲಿಂಕ್‌ಗಳ ಮೂಲಕ ಪಾವತಿಸಿದ ಆಟಗಳಲ್ಲಿ ಡೀಲ್‌ಗಳನ್ನು ಪಡೆಯಲು ಒಂದು ಆಯ್ಕೆಯನ್ನು ಸಹ ಇದು ಒಳಗೊಂಡಿದೆ.

ಇನ್ನು ಒಪೇರಾ ಜಿಎಕ್ಸ್ ಮೊಬೈಲ್ ಗೇಮಿಂಗ್ ಹಲವು ಅಂಶಗಳೊಂದಿಗೆ ಕನಿಷ್ಠ ವಿನ್ಯಾಸವನ್ನು ಪಡೆದುಕೊಂಡಿದೆ. ಇದರಲ್ಲಿ ಗೇಮಿಂಗ್ ಗೇರ್ ಅನ್ನು ನೀಡಲಾಗಿದೆ. ಇದನ್ನು ಆಯ್ಕೆ ಮಾಡಲು ಮುಖ್ಯವಾಗಿ ನಾಲ್ಕು ವಿಷಯಗಳಿವೆ. ಜಿಎಕ್ಸ್ ಕ್ಲಾಸಿಕ್, ಅಲ್ಟ್ರಾ ವೈಲೆಟ್, ಪರ್ಪಲ್ ಹೇಸ್ ಮತ್ತು ವೈಟ್ ವುಲ್ಫ್. ಇವುಗಳಲ್ಲಿ ಗೇಮಿಂಗ್ ಭಾವನೆಗಳಿಗಾಗಿ, ಬ್ರೌಸಿಂಗ್ ಅನುಭವವು ಫಾಸ್ಟ್ ಆಕ್ಷನ್ ಬಟನ್ (ಎಫ್‌ಎಬಿ) ಅನ್ನು ಒಳಗೊಂಡಿರುತ್ತದೆ. ಇದು ಕಂಪನಗಳು ಮತ್ತು ಸಂವಾದಾತ್ಮಕ ಬಳಕೆಗಾಗಿ ಹ್ಯಾಪ್ಟಿಕ್ ಪ್ರತಿಕ್ರಿಯೆಯನ್ನು ಬಳಸುತ್ತದೆ. ಮೋಡ್ ಸುಲಭ ಪ್ರವೇಶವನ್ನು ಸಹ ಖಚಿತಪಡಿಸುತ್ತದೆ. ಇದರ ಜೊತೆಗೆ, ಪ್ರಮಾಣಿತ ನ್ಯಾವಿಗೇಷನ್ ಮೋಡ್ ಅನ್ನು ಸಹ ನೀಡಲಾಗಿದೆ.

ಇದಲ್ಲದೆ ಒಪೆರಾ ಜಿಎಕ್ಸ್ ಮೊಬೈಲ್ ಗೇಮಿಂಗ್ ಫ್ಲೋ ಫೀಚರ್ಸ್ ಅನ್ನು ಸಹ ಹೊಂದಿದೆ. ಇದು ಬಳಕೆದಾರರಿಗೆ ಸುಲಭವಾದ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ಬ್ರೌಸರ್ ಅನ್ನು ಅದರ ವೆಬ್ ಪ್ರತಿರೂಪಕ್ಕೆ ಸಿಂಕ್ ಮಾಡಲು ಅನುಮತಿಸುತ್ತದೆ. ಈ ಫೀಚರ್ಸ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ಅಲ್ಲದೆ ಫೈಲ್‌ಗಳು, ಲಿಂಕ್‌ಗಳು, ಯೂಟ್ಯೂಬ್ ವೀಡಿಯೊಗಳು, ಫೋಟೋಗಳು ಮತ್ತು ವೈಯಕ್ತಿಕ ಟಿಪ್ಪಣಿಗಳು ಮತ್ತು ಹೆಚ್ಚಿನದನ್ನು ವರ್ಗಾಯಿಸಲು ಜನರಿಗೆ ಅನುಮತಿಸುವ "ಚಾಟ್ ತರಹದ ಸ್ಥಳ".ವನ್ನು ಸಹ ಇದು ಒಳಗೊಂಡಿದೆ.


Click it and Unblock the Notifications








