Home
ಸುದ್ದಿಜಾಲ

ಎಂಟ್ರಿ ಕೊಟ್ಟೆ ಬಿಡ್ತು ಒಪ್ಪೋ A1 5G! ಹೇಗಿದೆ ಗೊತ್ತಾ ಫೀಚರ್ಸ್‌!

ಒಪ್ಪೋ ಕಂಪೆನಿಯ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದೆ. ಇದಕ್ಕೆ ಅನುಗುಣವಾಗಿ ಒಪ್ಪೋ ಕಂಪೆನಿ ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸ ಒಪ್ಪೋ A1 5G ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಒಪ್ಪೋ A1 5G ಸ್ಮಾರ್ಟ್‌ಫೋನ್‌ ಟೆಕ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್-ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಹಾಗಾದ್ರೆ ಒಪ್ಪೋ A1 5G ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಂಟ್ರಿ ಕೊಟ್ಟೆ ಬಿಡ್ತು ಒಪ್ಪೋ A1 5G! ಹೇಗಿದೆ ಗೊತ್ತಾ ಫೀಚರ್ಸ್‌!

ಒಪ್ಪೋ A1 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿನ್ಯಾಸ

ಒಪ್ಪೋ A1 5G ಸ್ಮಾರ್ಟ್‌ಫೋನ್‌ 6.71 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 391ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿದೆ. ಇನ್ನು ಡಿಸ್‌ಪ್ಲೇ 680ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ.

ಒಪ್ಪೋ A1 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಯಾವುದು?

ಒಪ್ಪೋ A1 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಗಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಎಂಟ್ರಿ ಕೊಟ್ಟೆ ಬಿಡ್ತು ಒಪ್ಪೋ A1 5G! ಹೇಗಿದೆ ಗೊತ್ತಾ ಫೀಚರ್ಸ್‌!

ಒಪ್ಪೋ A1 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಒಪ್ಪೋ A1 5G ಸ್ಮಾರ್ಟ್‌ಫೋನ್‌ ಡ್ಯುಯಲ್-ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮೊನೊ ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ ರಿಯರ್‌ ಕ್ಯಾಮೆರಾ ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಬರಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಒಪ್ಪೋ A1 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಏನಿದೆ?

ಒಪ್ಪೋ A1 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 67W ಸೂಪರ್‌ವೂಕ್‌ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 5G, ವೈಫೈ 802.11a/b/g/n, ಬ್ಲೂಟೂತ್ 5.1, GPS, Glonass, ಮತ್ತು BeiDou ಅನ್ನು ಹೊಂದಿದೆ. ಜೊತೆಗೆ 3.5mm ಆಡಿಯೊ ಜಾಕ್ ಅನ್ನು ಬೆಂಬಲಿಸಲಿದೆ.

ಎಂಟ್ರಿ ಕೊಟ್ಟೆ ಬಿಡ್ತು ಒಪ್ಪೋ A1 5G! ಹೇಗಿದೆ ಗೊತ್ತಾ ಫೀಚರ್ಸ್‌!

ಒಪ್ಪೋ A1 5G ಸ್ಮಾರ್ಟ್‌ಫೋನ್‌ ಬೆಲೆ ಮತ್ತು ಲಭ್ಯತೆ

ಒಪ್ಪೋ A1 5G ಸ್ಮಾರ್ಟ್‌ಫೋನ್‌ ಸದ್ಯ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರಿಂದ ಈ ಸ್ಮಾರ್ಟ್‌ಫೋನ್‌ 12GB + 256GB ಆಯ್ಕೆಯ ಬೆಲೆ RMB 1999 (ಅಂದಾಜು 23,900ರೂ)ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಓಷನ್ ಬ್ಲೂ, ಸ್ಯಾಂಡ್‌ಸ್ಟೋನ್ ಬ್ಲಾಕ್ ಮತ್ತು ಕ್ಯಾಬೇರಿಯಾ ಆರೆಂಜ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಒಪ್ಪೋ A1 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಸದ್ಯದಲ್ಲೇ ಭಾರತಕ್ಕೂ ಕೂಡ ಈ ಸ್ಮಾರ್ಟ್‌ಫೋನ್‌ ಎಂಟ್ರಿ ನೀಡುವ ನಿರೀಕ್ಷೆಯಿದೆ.

Best Mobiles in India

English summary
OPPO A1 5G with 50MP Camera Launched: Price and Specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+