ಒಪ್ಪೋ A1 ವಿಟಾಲಿಟಿ ಎಡಿಷನ್ ಬಿಡುಗಡೆ! ಫೀಚರ್ಸ್ ಹೇಗಿದೆ?
ಒಪ್ಪೋ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಒಪ್ಪೋ A1 ವಿಟಾಲಿಟಿ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಇದು ಬಜೆಟ್ ಸ್ನೇಹಿಯಾಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ನೀಡಲಿದೆ.
ಹೌದು, ಒಪ್ಪೋ A1 ವಿಟಾಲಿಟಿ ಎಡಿಷನ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಇದು ಮಿಡಿಯಾಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್ ಬೆಂಬಲಿಸುವ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಪ್ಪೋ A1 ವಿಟಾಲಿಟಿ ಎಡಿಷನ್ ಡಿಸ್‌ಪ್ಲೇ ರಚನೆ
ಒಪ್ಪೋ A1 ವಿಟಾಲಿಟಿ ಎಡಿಷನ್ ಸ್ಮಾರ್ಟ್‌ಫೋನ್ 6.56 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1612×720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಇದು 100% DCI-P3 ವೈಡ್ ಕಲರ್ ಗ್ಯಾಮಟ್ ಅನ್ನು ಆವರಿಸುತ್ತದೆ. ಜೊತೆಗೆ 89.8% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ.
ಒಪ್ಪೋ A1 ವಿಟಾಲಿಟಿ ಎಡಿಷನ್ ಪ್ರೊಸೆಸರ್
ಒಪ್ಪೋ A1 ವಿಟಾಲಿಟಿ ಎಡಿಷನ್ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6020SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಮಾಲಿ-G57 GPU ಸಪೋರ್ಟ್ ಅನ್ನು ಪಡೆದುಕೊಂಡಿದೆ. ಹಾಗೆಯೇ 12GB RAM + 8GB ವಿಸ್ತರಿಸಬಹುದಾದ RAM ಜೊತೆಗೆ ಗರಿಷ್ಠ 20GB ಸಾಮರ್ಥ್ಯವನ್ನು ನೀಡುತ್ತದೆ.
ಒಪ್ಪೋ A1 ವಿಟಾಲಿಟಿ ಎಡಿಷನ್ ಕ್ಯಾಮೆರಾ ಸೆಟ್‌ಅಪ್
ಒಪ್ಪೋ A1 ವಿಟಾಲಿಟಿ ಎಡಿಷನ್ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪೋರ್ಟ್ರೇಟ್ ಮೋಡ್, AI ದೃಶ್ಯ ವರ್ಧನೆ, RGB ಧಾರಣ ವೀಡಿಯೊ ಮತ್ತು ಸೂಪರ್ ನೈಟ್ ವಿಶ್ಯುಯಲ್ ಮೋಡ್ ಅನ್ನು ಹೊಂದಿದೆ.

ಒಪ್ಪೋ A1 ವಿಟಾಲಿಟಿ ಎಡಿಷನ್ ಬ್ಯಾಟರಿ
ಒಪ್ಪೋ A1 ವಿಟಾಲಿಟಿ ಎಡಿಷನ್ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಡ್ಯುಯಲ್ ಸ್ಟ್ಯಾಂಡ್‌ಬೈ, ಡ್ಯುಯಲ್-ಮೋಡ್ 5G, 360-ಡಿಗ್ರಿ ಸರೌಂಡ್ ಆಂಟೆನಾ ಮತ್ತು 5G+WiFi ಡ್ಯುಯಲ್-ಚಾನೆಲ್ ವೇಗವರ್ಧನೆ ಸೇರಿವೆ. ಜೊತೆಗೆ ಮ್ಯೂಸಿಕ್, ಸಿನಿಮಾ, ಗೇಮಿಂಗ್ ಮತ್ತು ಶಾರ್ಟ್ ವೀಡಿಯೊಗಳಿಗಾಗಿ ಆಪ್ಟಿಮೈಸ್ಡ್ ಸೌಂಡ್ ಸಿಸ್ಟಂ ಅನ್ನು ನೀಡಲಿದೆ.
ಒಪ್ಪೋ A1 ವಿಟಾಲಿಟಿ ಎಡಿಷನ್ ಬೆಲೆ ಮತ್ತು ಲಭ್ಯತೆ
ಒಪ್ಪೋ A1 ವಿಟಾಲಿಟಿ ಎಡಿಷನ್ ಸ್ಮಾರ್ಟ್‌ಫೋನ್ ಪ್ರಸ್ತುತ ಚೀನಾದಲ್ಲಿ ಮಾತ್ರ ಲಾಂಚ್ ಆಗಿದೆ. ಈ ಸ್ಮಾರ್ಟ್‌ಫೋನ್ ಚೀನಾದಲ್ಲಿ 1799 ಯುವಾನ್ (ಅಂದಾಜು 21,283ರೂ)ಬೆಲೆಯನ್ನು ಪಡೆದುಕೊಂಡಿದೆ. ಇದು ಕ್ವೈಟ್ ಸೀ ಬ್ಲೂ, ಸ್ಟಾರ್ರಿ ಬ್ಲ್ಯಾಕ್ ಮತ್ತು ಫ್ರೆಶ್ ವಿಂಡ್ ಪರ್ಪಲ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಒಪ್ಪೋ ಕಂಪೆನಿ ತನ್ನ F ಸರಣಿಯಲ್ಲಿ ಹೊಸ ಒಪ್ಪೋ F23 5G ಫೋನ್ ಪರಿಚಯಿಸಿದೆ. ಒಪ್ಪೋ F23 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ಹೊಂದಿದ್ದು, 67W ಸೂಪರ್‌ವೂಕ್‌ಟಿಎಂ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್, 120Hz ಡಿಸ್‌ಪ್ಲೇ, 64 MP ಟ್ರಿಪಲ್- AI ಕ್ಯಾಮೆರಾ ಸೆಟಪ್, ಡ್ಯುಯಲ್-ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 13 ಸಾಫ್ಟ್‌ವೇರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅದರ ಪ್ರಭಾವಶಾಲಿ ಅಂಕಿಅಂಶಗಳ ಜೊತೆಗೆ, ಇದು ಬ್ಯಾಟರಿ ಬೀಸ್ಟ್ ಆಗಿದ್ದು ಅನೇಕ ಫ್ಲ್ಯಾಗ್‌ಶಿಪ್‌ಗಳನ್ನು ಮೀರಿಸುತ್ತದೆ.


Click it and Unblock the Notifications








