ಒಪ್ಪೋ A12 ಮತ್ತು A12 E ಸ್ಮಾರ್ಟ್‌ಫೋನ್ ಫೀಚರ್ಸ್ ಬಹಿರಂಗ!
ಚೀನಾ ಮೂಲದ ಒಪ್ಪೋ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಟೆಕ್‌ವಲಯದಲ್ಲಿ ಗುರುತಿಸಿಕೊಂಡಿದೆ. ಪ್ರತಿಭಾರಿಯೂ ಹೊಸತನದ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿರುವ ಒಪ್ಪೋ ಕಂಪೆನಿ ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಇನ್ನು ಈಗಾಗಲೇ ಹಲವಾರು ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸಮಚಲನ ಸೃಷ್ಟಿಸಿರುವ ಒಪ್ಪೋ ಇದೀಗ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಲು ಸಿದ್ದತೆ ನಡೆಸುತ್ತಿದೆ.

ಹೌದು, ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಒಪ್ಪೋ ತನ್ನ ಜನಪ್ರಿಯ A ಆವೃತ್ತಿಯಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಲು ಪ್ಲ್ಯಾನ್ ಮಾಡಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ಗಳನ್ನ ಒಪ್ಪೋ A12 ಮತ್ತು ಒಪ್ಪೋ A12 E ಎಂದು ಹೆಸರಿಸಲಾಗಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಸಿದ್ದವಾಗಿದ್ದು, ಬಿಡುಗಡೆಗೂ ಮುನ್ನವೇ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಏನು ಅನ್ನೊದು ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.

ಸದ್ಯ ಲೀಕ್ ಮಾಹಿತಿ ಪ್ರಕಾರ ಒಪ್ಪೋ A12 ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ. ಇದು ಮೀಡಿಯಾ ಟೆಕ್ ಹಿಲಿಯೊ ಪಿ 35 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 3GB RAM ಮತ್ತು 64GB ಇಂಟರ್‌ಸ್ಟೋರೇಜ್ ಹೊಂದಿರಲಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 2 ಪೈ ಕಲರ್ಓಎಸ್ 6 ಅನ್ನು ಹೊಂದಿರುವ ಸಾಧ್ಯತೆ ಇದೆ ಎನ್ನಲಾಗ್ತಿದ್ದು, ಅದಾಗ್ಯೂ ಇದನ್ನು ಕಲರ್ಓಎಸ್ 7 ಮತ್ತು ಆಂಡ್ರಾಯ್ಡ್ 10 ಗೆ ನವೀಕರಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನು A12 E ಸ್ಮಾರ್ಟ್‌ಫೋನ್ ಲೀಕ್ ಮಾಹಿತಿ ಪ್ರಕಾರ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 450 ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 3GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಮುಖ್ಯ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗ್ತಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 6.2 ಇಂಚಿನ ಎಚ್‌ಡಿ + ಪರದೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಅಲ್ಲದೆ ಈ ಸ್ಮಾರ್ಟ್‌ಫೋನಬ್‌ಗಳು ವೇಗದ ಚಾರ್ಜಿಂಗ್ ಬೆಂಬಲವಿಲವನ್ನು ಹೊಂದಿರುವ ಸಾಧ್ಯತೆ ಇಲ್ಲ ಎನ್ನಲಾಗಿದ್ದು. ಇವು 4,230mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದ್ದು ಭಾರತದಲ್ಲಿ ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದೆ. ಎಕೆಂದರೆ ಒಪ್ಪೋ ತನ್ನ ಎ ಸರಣಿಯ ಯಾವುದೇ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ರಿಫ್ರೇಶ್ ಮಾಡಿಲ್ಲ. ಆದರೂ ಕೊನೆಯ ಕ್ಷಣದಲ್ಲಿ ಬಿಡುಗಡೆ ಆದರೂ ಅಚ್ಚರಿಯಿಲ್ಲ. ಸದ್ಯ ಈ ಸ್ಮಾರ್ಟ್‌ಫೋನ್ ಚೀನಾದಲ್ಲಿ ಮೊದಲಿಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.


Click it and Unblock the Notifications




