ಒಪ್ಪೋ A16 ಸ್ಮಾರ್ಟ್‌ಫೋನ್‌ ಬಿಡುಗಡೆ! ವಿಶೇಷತೆ ಏನು?

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಒಪ್ಪೋ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಒಪ್ಪೋ A16 ಸ್ಮಾರ್ಟ್‌ಫೋನ್‌ ಅನ್ನು ಇಂಡೋನೇಷ್ಯಾದಲ್ಲಿ ಬಜೆಟ್ ಸ್ನೇಹಿ ಕೊಡುಗೆಯಾಗಿ ಬಿಡುಗಡೆ ಮಾಡಿದೆ. ಇದು ನೋಚ್ಡ್‌ ಡಿಸ್‌ಪ್ಲೇ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ.

ಒಪ್ಪೋ

ಹೌದು, ಒಪ್ಪೋ ಕಪೆನಿ ಹೊಸ ಒಪ್ಪೋ A16 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದು 6.52-ಇಂಚಿನ HD + ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ G35SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದನ್ನು ಕ್ರಿಸ್ಟಲ್ ಬ್ಲ್ಯಾಕ್, ಪರ್ಲ್ ಬ್ಲೂ ಮತ್ತು ಸ್ಪೇಸ್ ಸಿಲ್ವರ್ ಬಣ್ಣಗಳಲ್ಲಿ ನೀಡಲಾಗುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಒಪ್ಪೋ A16 ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52-ಇಂಚಿನ HD + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌, 60Hz ಟಚ್ ಸ್ಯಾಂಪ್ಲಿಂಗ್ ರೇಟ್‌, 269ppi ಪಿಕ್ಸೆಲ್ ಸಾಂದ್ರತೆ ಮತ್ತು 480 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಇದು 88.7 ಶೇಕಡಾ ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 1,500: 1 ಕಾಂಟ್ರಾಸ್ಟ್ ರೇಷನ್ ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಒಪ್ಪೋ A16 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ G35SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಆಧಾರಿತ ಕಲರ್ಓಎಸ್ 11.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 3GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಮೂರನೆ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮೊನೊ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಒಪ್ಪೋ A16 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ವಿದ್ಯುತ್ ಬಳಕೆಯನ್ನು ಮತ್ತಷ್ಟು ಕಡಿಮೆ ಮಾಡಲು ಸೂಪರ್ ನೈಟ್‌ಟೈಮ್ ಸ್ಟ್ಯಾಂಡ್‌ಬೈ ಮೋಡ್ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೋ A16 ಸ್ಮಾರ್ಟ್‌ಫೋನ್‌ 3GB RAM + 32GB ಶೇಖರಣಾ ಮಾದರಿಗೆ ಐಡಿಆರ್ 1,999,000 (ಸರಿಸುಮಾರು ರೂ. 10,300) ಬೆಲೆ ಹೊಂದಿದೆ. ಇನ್ನು ಈ ಫೋನ್ ಇಂಡೋನೇಷ್ಯಾದಲ್ಲಿ ಮಾರಾಟದಲ್ಲಿದೆ ಮತ್ತು ಒಪ್ಪೊ ಇನ್ನೂ ಅಂತರರಾಷ್ಟ್ರೀಯ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

Best Mobiles in India

English summary
Oppo A16 is backed by a 5,000mAh battery and the company says it can deliver over 21 hours of YouTube entertainment.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X