ಭಾರತದಲ್ಲಿ ಒಪ್ಪೋ A16K ಸ್ಮಾರ್ಟ್‌ಫೋನ್ ಬೆಲೆ ಕಡಿತ!
ಭಾರತದ ಮಾರುಕಟ್ಟೆಯಲ್ಲಿ ಆಕರ್ಷಕ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳಿಗೆ ಒಪ್ಪೋ ಕಂಪೆನಿ ಹೆಸರುವಾಸಿಯಾಗಿದೆ. ತನ್ನ ಕ್ಯಾಮೆರಾ ಫೀಚರ್ಸ್‌ಗಳಿಂದಲೇ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿರುವ ಒಪ್ಪೋ ಕಂಪೆನಿ ತನ್ನ ಗ್ರಾಹಕರಿಗೆ ಗುಡ್‌ನ್ಯೂಸ್ ನೀಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಒಪ್ಪೋ A16K ಸ್ಮಾರ್ಟ್‌ಫೋನ್ ಬೆಲೆಯನ್ನು ಕಡಿತಗೊಳಿಸಿದೆ. ಇದರಿಂದ ಬಳಕೆದಾರರು ಇನ್ನಷ್ಟು ಕಡಿಮೆಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

ಹೌದು, ಒಪ್ಪೋ ಕಂಪೆನಿ ಭಾರತದಲ್ಲಿ ತನ್ನ ಒಪ್ಪೋ A16K ಸ್ಮಾರ್ಟ್‌ಫೋನ್ ಬೆಲೆಯಲ್ಲಿ 1,000ರೂ. ಕಡಿತ ಗೊಳಿಸಿದೆ. ಇದರಿಂದ ಈ ಸ್ಮಾರ್ಟ್‌ಫೋನ್ ತನ್ನ ಮೂಲಬೆಲೆಗಿಂತ 1,000ರೂ. ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಬೆಲೆ ಕಡಿತದ ನಂತರ ಈ ಸ್ಮಾರ್ಟ್‌ಫೋನಿನ 4GB RAM + 64GB ಸ್ಟೋರೇಜ್ ಆಯ್ಕೆಯು 10,990ರೂ ಬೆಲೆಗೆ ಲಭ್ಯವಾಗಲಿದೆ. ಇದು ಒಪ್ಪೋ ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಲೈವ್ ಆಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ
ಒಪ್ಪೋ A16K ಸ್ಮಾರ್ಟ್‌ಫೋನ್ 1,600x720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52-ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ IPS LCD ಡಿಸ್‌ಪ್ಲೇ ಆಗಿದ್ದು, 60Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇದು 269 ಪಿಕ್ಸೆಲ್ ಸಾಂದ್ರೆತಯನ್ನು ಒಳಗೊಂಡಿದೆ.

ಪ್ರೊಸೆಸರ್ ಹೇಗಿದೆ?
ಒಪ್ಪೋ A16K ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾಟೆಕ್ ಹೆಲಿಯೊ G35 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ ColorOS 11.1 Lite ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 3GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಬೆಂಬಲದೊಂದಿಗೆ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಕ್ಯಾಮೆರಾ ವಿಶೇಷ
ಒಪ್ಪೋ A16K ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಅಲ್ಲದೆ ಇದು 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಒಪ್ಪೋ A16K ಸ್ಮಾರ್ಟ್‌ಫೋನ್ 4,230mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಇದು 5V/ 2A ಚಾರ್ಜಿಂಗ್‌ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5, 3.5mm ಹೆಡ್‌ಫೋನ್ ಜ್ಯಾಕ್, GPS ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಸೂಪರ್ ಪವರ್ ಸೇವಿಂಗ್ ಮೋಡ್, ನೈಟ್ ಫಿಲ್ಟರ್‌ಗಳು ಮತ್ತು ಆಪ್ಟಿಮೈಸ್ಡ್ ನೈಟ್ ಚಾರ್ಜಿಂಗ್ ಅನ್ನು ಸಹ ಒಳಗೊಂಡಿದೆ.

ಬೆಲೆ
ಭಾರತದಲ್ಲಿ ಒಪ್ಪೋ A16K ಸ್ಮಾರ್ಟ್‌ಫೋನ್ 1,000ರೂ. ಬೆಲೆ ಕಡಿತ ಪಡದುಕೊಂಡ ನಂತರ 4GB RAM + 64GB ಸ್ಟೋರೇಜ್ ಆಯ್ಕೆಗೆ 10,990ರೂ,ಗೆ ಇಳಿಕೆಯಾಗಿದೆ. ಇದು ಕಂಪನಿಯ ವೆಬ್‌ಸೈಟ್‌ನಲ್ಲಿ ಮಾತ್ರ ಲೈವ್ ಆಗಿದೆ. ಆದರೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ ಇನ್ನು ಕೂಡ 11,990ರೂ. ಆಗಿದೆ.


Click it and Unblock the Notifications








