ಒಪ್ಪೋ A16K ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಇಳಿಕೆ!..ಹೊಸ ಬೆಲೆ ಎಷ್ಟು?

|

ಒಪ್ಪೋ ಕಂಪೆನಿಯ ಬಜೆಟ್‌ ಸ್ಮಾರ್ಟ್‌ಫೋನ್‌ಗಳ ಪೈಕಿ ಒಂದಾದ ಒಪ್ಪೋ A16K ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇದೀಗ ಭರ್ಜರಿ ಇಳಿಕೆ ಕಂಡು ಬಂದಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಹೆಲಿಯೊ G35 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಅದು ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ.

ಒಪ್ಪೋ A16K ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಇಳಿಕೆ!..ಹೊಸ ಬೆಲೆ ಎಷ್ಟು?

ಹೌದು, ಒಪ್ಪೋ ಕಂಪನಿಯ ಒಪ್ಪೋ A16K ಸ್ಮಾರ್ಟ್‌ಫೋನ್‌ 3GB + 32GB ಮತ್ತು 4GB + 64 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಇದೀಗ ಎರಡು ವೇರಿಯಂಟ್‌ಗಳ ಬೆಲೆಯಲ್ಲಿ ಕಡಿತ ಆಗಿದೆ. 3GB + 32 GB ವೇರಿಯಂಟ್‌ ಬೆಲೆಯಲ್ಲಿ 1000ರೂ. ಹಾಗೂ 4GB + 64 GB ವೇರಿಯಂಟ್ ಬೆಲೆಯಲ್ಲಿ 500 ರೂ. ಗಳ ಇಳಿಕೆ ಆಗಿದೆ. ಹೊಸ ದರಗಳ ಮಾಹಿತಿ ಅಧಿಕೃತ ಕಂಪನಿಯ ವೆಬ್‌ಸೈಟ್‌ ನಲ್ಲಿ ತೋರಿಸಲಾಗಿದೆ. ಹಾಗಾದರೇ ಈ ಒಪ್ಪೋ A16K ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ಪ್ರೊಸೆಸರ್‌
ಒಪ್ಪೋ A16K ಸ್ಮಾರ್ಟ್‌ಫೋನ್‌ 1,600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ HD + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ IPS LCD ಡಿಸ್‌ಪ್ಲೇ ಆಗಿದ್ದು, 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು 269 ಪಿಕ್ಸೆಲ್‌ ಸಾಂದ್ರೆತಯನ್ನು ಒಳಗೊಂಡಿದೆ. ಹಾಗೆಯೇ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್ ಬಲ ವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 11 ನಲ್ಲಿ Color OS 11.1 Lite ಜೊತೆಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 3GB RAM ಮತ್ತು 32GB ಸ್ಟೋರೇಜ್‌ ಸಾಮರ್ಥ್ಯ ವನ್ನು ಪಡೆದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್‌ ಬೆಂಬಲದೊಂದಿಗೆ 256 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಒಪ್ಪೋ A16K ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಇಳಿಕೆ!..ಹೊಸ ಬೆಲೆ ಎಷ್ಟು?

ಕ್ಯಾಮೆರಾ ಸೆನ್ಸಾರ್ ವಿಶೇಷ
ಒಪ್ಪೋ A16K ಸ್ಮಾರ್ಟ್‌ಫೋನ್‌ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಅಲ್ಲದೆ ಇದು 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಒಪ್ಪೋ A16K ಸ್ಮಾರ್ಟ್‌ಫೋನ್‌ 4,230 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಇದು 5V/ 2A ಚಾರ್ಜಿಂಗ್‌ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ v5, 3.5 mm ಹೆಡ್‌ಫೋನ್ ಜ್ಯಾಕ್, GPS ಮತ್ತು USB ಟೈಪ್ ಸಿ ಪೋರ್ಟ್ ಸೇರಿವೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಸೂಪರ್ ಪವರ್ ಸೇವಿಂಗ್ ಮೋಡ್, ನೈಟ್ ಫಿಲ್ಟರ್‌ಗಳು ಮತ್ತು ಆಪ್ಟಿಮೈಸ್ಡ್ ನೈಟ್ ಚಾರ್ಜಿಂಗ್ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಒಪ್ಪೋ A16K ಸ್ಮಾರ್ಟ್‌ಫೋನ್‌ 3GB + 32GB ವೇರಿಯಂಟ್‌ ಬೆಲೆಯು 9,490ರೂ. ಆಗಿದೆ. ಹಾಗೆಯೇ 4GB + 64 GB ಸ್ಟೋರೇಜ್‌ ವೇರಿಯಂಟ್‌ ಹೊಸ ಬೆಲೆಯು 10,490ರೂ. ಗಳು ಆಗಿದೆ. ಹೊಸ ಬೆಲೆಗಳು ಅಧಿಕೃತ ಕಂಪನಿಯ ವೆಬ್‌ಸೈಟ್‌ ನಲ್ಲಿ ಕಾಣಿಸಿವೆ.

Best Mobiles in India

English summary
Oppo A16K receives a Price Cut: Check New Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X