Home
ಸುದ್ದಿಜಾಲ

ಒಪ್ಪೋ A33(2020) ಸ್ಮಾರ್ಟ್‌ಫೋನ್‌ ಬಿಡುಗಡೆ!..ಬೆಲೆ ಎಷ್ಟು?

ಒಪ್ಪೋ ಕಂಪೆನಿ ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಹೊಸ ಮಾದರಿಯ ಕ್ಯಾಮೆರಾ ಫೀಚರ್ಸ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೊನ್‌ ಪರಿಚಯಿಸುವಲ್ಲಿ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿರುವ ಒಪ್ಪೋ ಸಂಸ್ಥೆ ಇದೀಗ ತನ್ನ ಹೊಸ ಒಪ್ಪೊ A33 (2020) ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು 5,000 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 460SoC ಪ್ರೊಸೆಸರ್ ಒಳಗೊಂಡಿದೆ.

ಒಪ್ಪೊ

ಹೌದು, ಒಪ್ಪೊ ಸಂಸ್ಥೆ ತನ್ನ ಹೊಸ ಒಪ್ಪೊ A33 (2020)ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿರುವ ಪಂಚ್-ಹೋಲ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಈಗಾಗಲೇ ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಲಭ್ಯವಿದೆ ಎಂದು ಕಂಪನಿ ಪ್ರಕಟಿಸಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಒಪ್ಪೋ A33 (2020) ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 460 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ ಕಲರ್ಓಎಸ್ 7.2 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 3GB RAM+32GB ಇಂಟರ್‌ ಸ್ಟೊರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಒಪ್ಪೊ A33 (2020) ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ V5, ಯುಎಸ್‌ಬಿ ಟೈಪ್-ಸಿ ಪೋರ್ಟ್, ವೈ-ಫೈ ಅನ್ನು ಬೆಂಬಲಿಸಲಿದೆ. ಇದಲ್ಲದೆ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಅನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೋ A33 (2020) ಸ್ಮಾರ್ಟ್‌ಫೋನ್‌ ಬೆಲೆ 11,990 ರೂ. ಆಗಿದೆ. ಇದು ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಲಭ್ಯವಿದೆ.

Best Mobiles in India

English summary
Oppo A33 (2020) has been launched in India, featuring a large 5,000mAh battery, a a Qualcomm Snapdragon 460 SoC, and a hole-punch display with a 90Hz refresh rate.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+