Home
ಸುದ್ದಿಜಾಲ

ಕೇವಲ 10,990ಕ್ಕೆ 4230mAh ಬ್ಯಾಟರಿ ಸಾಮರ್ಥ್ಯದ 'ಒಪ್ಪೊ A3s' ಸ್ಮಾರ್ಟ್‌ಫೋನ್ ಬಿಡುಗಡೆ!!

By Bhaskar N J

ಮೊಬೈಲ್ ಮಾರುಕಟ್ಟೆಯಲ್ಲಿ ಯಶಸ್ಸಿನ ಜೊತೆಗೆ ಸೋಲನ್ನು ಕಾಣುತ್ತಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೋ ಇದೀಗ ಭಾರತದ ಮೊಬೈಲ್ ಮಾರುಕಟ್ಟೆಗೆ ಶಾಕ್ ನೀಡಿದೆ. ಶಿಯೋಮಿ ಮತ್ತು ಸ್ಯಾಮ್‌ಸಂಗ್ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯುವಂತಹ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿ ಆಶ್ಚರ್ಯ ಮೂಡಿಸಿದೆ.

ಹೌದು, ಇದೆ ಮೊದಲ ಬಾರಿಗೆ ಅತ್ಯಂತ ಕಡಿಮೆ ಬೆಲೆಗೆ 'ಒಪ್ಪೋ' ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿದ್ದು, ಡ್ಯುಯಲ್ ಕ್ಯಾಮೆರಾಗಳು ಹಾಗೂ 4230mAh ಸಾಮರ್ಥ್ಯದ ಬ್ಯಾಟರಿಯ ಸ್ಮಾರ್ಟ್‌ಫೋನ್ 'OPPO A3s' ಜುಲೈ 15ರಿಂದ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವುದಾಗಿ ಕಂಪೆನಿ ತಿಳಿಸಿದೆ.

ಕೇವಲ 10,990ಕ್ಕೆ 4230mAh ಬ್ಯಾಟರಿ ಸಾಮರ್ಥ್ಯದ 'ಒಪ್ಪೊ A3s' ಸ್ಮಾರ್ಟ್‌ಫೋನ್!!

'OPPO A3s' ಸ್ಮಾರ್ಟ್‌ಫೋನ್ ಬೆಲೆ ಕೇವಲ 10,990 ರೂಪಾಯಿಗಳಾಗಿರಲಿದೆ ಎಂದು ಒಪ್ಪೊ ಕಂಪೆನಿ ಸ್ಪಷ್ಟಪಡಿರುವುದರಿಂದ ಸ್ಮಾರ್ಟ್‌ಫೋನ್ ಬಗೆಗೆ ಸಾಕಷ್ಟು ಕುತೋಹಲಗಳು ಗರಿಗೆದರಿವೆ. ಹಾಗಾದರೆ, ಶಿಯೋಮಿ ಮತ್ತು ಸ್ಯಾಮ್‌ಸಂಗ್ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುತ್ತಿರುವ 'OPPO A3s' ಸ್ಮಾರ್ಟ್‌ಫೋನ್ ಫೀಚರ್ಸ್ ಬಗ್ಗೆ ಮುಂದೆ ತಿಳಿಯಿರಿ.

6.2 ಇಂಚಿನ ಡಿಸ್‌ಪ್ಲೇ!

6.2 ಇಂಚಿನ ಡಿಸ್‌ಪ್ಲೇ!

ಒಪ್ಪೋ A3s ಸ್ಮಾರ್ಟ್‌ಫೋನ್ 88.8 ಶೇಕಡಾ ಸ್ಕ್ರೀನ್ ದೇಹದ ಅನುಪಾತದಲ್ಲಿ 6.2 ಇಂಚಿನ ಪೂರ್ಣ ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ರೆಡ್ ಮತ್ತು ಡಾರ್ಕ್ ಪರ್ಪಲ್ ಬಣ್ಣಗಳಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಪೋನ್ ವಿನ್ಯಾಸ ರೆಡ್‌ಮಿ ನೋಟ್ 5 ವಿನ್ಯಾಸವನ್ನು ಹೊಂದಿದೆ ಎಂದು ಪ್ರಮುಖ ಟೆಕ್ ಮಾಧ್ಯಮಗಳು ವರದಿಮಾಡಿವೆ.

ಡ್ಯುಯಲ್ ಕ್ಯಾಮೆರಾ!

ಡ್ಯುಯಲ್ ಕ್ಯಾಮೆರಾ!

ಒಪ್ಪೋ A3s ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿದ್ದರೂನ ಸಹ ಕ್ಯಾಮೆರಾ ವಿಭಾಗದಲ್ಲಿ ಹಿಂದೆ ಉಳಿದಿಲ್ಲ. ಹಿಂಭಾಗದಲ್ಲಿ ಡ್ಯುಯಲ್ ‌ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 13 MP + 2MP ಕ್ಯಾಮರಾ ಸೆಟಪ್ ಅನ್ನು ನೀಡಲಾಗಿದೆ. ಇನ್ನು ಕೃತಕ ಬುದ್ದಿಮತ್ತೆ ಆಧರಿತ 8MP ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಿರುವುದಾಗಿ ಒಪ್ಪೊ ತಿಳಿಸಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಬಜೆಟ್ ಸ್ಮಾರ್ಟ್‌ಫೋನ್ ಆಗಿರುವುದರಿಂದ ಒಪ್ಪೋ A3s ಸ್ಮಾರ್ಟ್‌ಫೋನಿನಲ್ಲಿ ಆಕ್ಟಕೋರ್ ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. 2GB RAM ಮತ್ತು 16 GB ಆಂತರಿಕ ಮೆಮೊರಿಯನ್ನು ಹೊಂದಿರುವ ಈ ಸ್ಮಾರ್ಟ್‌ಪೋನಿನ ಮೆಮೊರಿಯನ್ನು ಎಸ್‌ಡಿ ಕಾರ್ಡ್‌ ಮೂಲಕ ವಿಸ್ತರಿಸಲು ಅವಕಾಶವನ್ನು ಮಾಡಿಕೊಡಲಾಗಿದೆ.

4230mAh ಬ್ಯಾಟರಿ!!

4230mAh ಬ್ಯಾಟರಿ!!

ಒಪ್ಪೋ A3s ಸ್ಮಾರ್ಟ್‌ಫೋನಿನಲ್ಲಿ 4230mAh ಬ್ಯಾಟರಿ ಅಳವಡಿಸಿರುವುದು ಪ್ರಮುಖ ವಿಶೇಷತೆಯಾಗಿದೆ. ಇನ್ನು ಸಾಮಾನ್ಯ ಸ್ಮಾರ್ಟ್‌ಪೋನ್‌ಗಳು ಹೊಂದಿರುವಂತೆ ಇನ್ನಿತರ ಫೀಚರ್ಸ್‌ಗಳ ಜೊತೆಗೆ ಮ್ಯೀಸಿಕ್ ಪಾರ್ಟಿ ಸಪೊರ್ಟ್ ಆಗಲಿದ್ದು, ಇದರಿಂದ ಹಲವು ಮೊಬೈಲ್‍‍ಗಳನ್ನು ಒಟ್ಟಿಗೆ ಕನೆಕ್ಟ್ ಮಾಡಿ ಮ್ಯೂಸಿಕ್‍ ಆನಂದಿಸಬಹುದು.

ಬೆಲೆ ಮತ್ತು ಮಾರಾಟ!

ಬೆಲೆ ಮತ್ತು ಮಾರಾಟ!

6.2 ಇಂಚಿನ ಡಿಸ್ ಪ್ಲೆ, ಡ್ಯುಯಲ್ ಕ್ಯಾಮೆರಾ ಸೇರಿದಂತೆ ಹಲವಾರು ವಿಶೇಷತೆಗಳನ್ನು ಹೊಂದಿರುವ ಒಪ್ಪೋ A3s ಸ್ಮಾರ್ಟ್‌ಫೋನ್ ಜುಲೈ 15ರಿಂದ ಭಾರತದಲ್ಲಿ ಈ ಮೊಬೈಲ್ ಲಭ್ಯವಾಗಲಿದೆ. ಸ್ಮಾರ್ಟ್‌ಫೋನ್ ಮೊದಲಿಗೆ ಆನ್‌ಲೈನಿನಲ್ಲಿ ಮಾತ್ರ ಸಿಗಲಿದ್ದು, ಆರಂಭಿಕ ಬೆಲೆಯನ್ನು 10,990 ರೂಪಾಯಿಗಳಿಗೆ ನಿಗದಿ ಪಡಿಸಲಾಗಿದೆ.

Best Mobiles in India

English summary
Oppo A3s with notch display, dual rear cameras launched at Rs 10,990. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+