Home
ಸುದ್ದಿಜಾಲ

ನಾಳೆ OPPO A3x 4G ಸೇಲ್; 8,999 ರೂ.ಗೆ ಲಭ್ಯ.. ಆಫರ್‌ ಏನಿದೆ?

ಒಪ್ಪೋ (OPPO) ಕಂಪನಿಯು ಇತ್ತೀಚೆಗೆ ಒಪ್ಪೋ A3x 4G (OPPO A3x 4G) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದನ್ನು ಅಗ್ಗದ ಬೆಲೆಗೆ ಪರಿಚಯಿಸಲಾಗಿದೆ. ಅಂದಹಾಗೆ, ಈ ಫೋನ್ ಅಕ್ಟೋಬರ್ 29 ರಿಂದ (ನಾಳೆ) ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ನೀವು, ದೀಪಾವಳಿ ಹಬ್ಬಕ್ಕೆ ಹೊಸ ಮೊಬೈಲ್ ಖರೀದಿಸಲು ಬಯಸಿದರೆ ಒಪ್ಪೋ A3x 4G ಉತ್ತಮ ಆಯ್ಕೆಯಾಗಲಿದೆ. ಬನ್ನಿ, ಈ ಫೋನಿನ ವೈಶಿಷ್ಟ್ಯಗಳು ಮತ್ತು ಬೆಲೆಯನ್ನು ತಿಳಿಯೋಣ.

ಕಂಪನಿಯು ಕಳೆದ ತಿಂಗಳು ಒಪ್ಪೋ A3x ಫೋನನ್ನು ಬಿಡುಗಡೆ ಮಾಡಿತ್ತು. ಇದೀಗ, ಒಪ್ಪೋ A3x 4G ಸಹ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಸ್ನಾಪ್‌ಡ್ರಾಗನ್ 6s ಜೆನ್ 1 ಪ್ರೊಸೆಸರ್ ಹೊಂದಿದೆ. ಇದರಲ್ಲಿ 6.67 ಇಂಚಿನ ಡಿಸ್ಪ್ಲೇ ಮತ್ತು 4GB RAM ಲಭ್ಯವಿದೆ. ಇದು 45W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 5,100mAh ಬ್ಯಾಟರಿಯನ್ನು ಹೊಂದಿದೆ. ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ನಾಳೆ OPPO A3x 4G ಸೇಲ್; 8,999 ರೂ.ಗೆ ಲಭ್ಯ.. ಆಫರ್‌ ಏನಿದೆ?

ಒಪ್ಪೋ A3x 4G ಫೋನಿನ ಬೆಲೆ

ಕಂಪನಿಯು ಒಪ್ಪೋ A3x 4G ಫೋನಿನ 4GB RAM ಮತ್ತು 64GB ಸ್ಟೋರೇಜ್‌ ವೇರಿಯಂಟ್ ಅನ್ನು 8,999 ರೂ.ಗೆ ಬಿಡುಗಡೆ ಮಾಡಿದೆ. 128GB ಸ್ಟೋರೇಜ್ ರೂಪಾಂತರವು 9,999 ರೂ.ಗೆ ಲಭ್ಯವಿದೆ. ಇದನ್ನು ನೆಬ್ಯುಲಾ ರೆಡ್ ಮತ್ತು ಓಷನ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು. ಒಪ್ಪೋ ಕಂಪನಿಯ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಚಿಲ್ಲರೆ ಮಳಿಗೆಗಳ ಮೂಲಕ ನಾಳೆಯಿಂದ (ಅಕ್ಟೋಬರ್ 29) ಮಾರಾಟ ಮಾಡಲಾಗುತ್ತದೆ.

ಒಪ್ಪೋ A3x 4G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒಪ್ಪೋ A3X 4G ಫೋನ್ 6.67 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. 1604 × 720 ಪಿಕ್ಸೆಲ್‌ಗಳ ರೆಸಲ್ಯೂಶನ್, 90Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ನೂತನ ಒಪ್ಪೋ A3X 4G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6s 4G ಜೆನ್ 1 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಗ್ರಾಫಿಕ್ಸ್‌ಗಾಗಿ, ಈ ಸ್ಮಾರ್ಟ್‌ಫೋನ್‌ನಲ್ಲಿ ಅಡ್ರಿನೊ 610 ಜಿಪಿಯು ನೀಡಲಾಗಿದೆ. ಈ ಫೋನನ್ನು ಆಂಡ್ರಾಯ್ಡ್‌ 14 ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು ColorOS 14 ಜೊತೆಗೆ ಕೆಲಸ ನಿರ್ವಹಿಸುತ್ತದೆ.

ಸ್ಟೋರೇಜ್ ಆಯ್ಕೆ

ಈ ಫೋನ್ 4GB RAM ನೊಂದಿಗೆ ಬರುತ್ತದೆ. ಈ RAM ನೊಂದಿಗೆ 64GB ಮತ್ತು 128GB ಸ್ಟೋರೇಜ್‌ ಲಭ್ಯವಿದೆ.ಈ ಸ್ಮಾರ್ಟ್‌ಫೋನ್ 4GB ವರ್ಚುವಲ್ RAM ತಂತ್ರಜ್ಞಾನವನ್ನು ಹೊಂದಿದೆ. ಇದು ಫೋನಿನ ಭೌತಿಕ RAM ಜೊತೆಗೆ 8GB RAMನ ಶಕ್ತಿಯನ್ನು ಒದಗಿಸುತ್ತದೆ.

ಕ್ಯಾಮೆರಾ ಸೆಟಪ್

ಒಪ್ಪೋ A3X 4G ಮೊಬೈಲ್‌ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು ಆಟೋ ಫೋಕಸ್ ತಂತ್ರಜ್ಞಾನದ ಜೊತೆಗೆ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಜೊತೆಗೆ, ಕ್ಯಾಮೆರಾ ಸೆಟಪ್‌ನಲ್ಲಿ ಫ್ಲಿಕರ್ ಸಂವೇದಕವೂ ಲಭ್ಯವಿದೆ.ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಫೋನಿನಲ್ಲಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಒಪ್ಪೋ A3x 4G ಸ್ಮಾರ್ಟ್‌ಫೋನ್ ಅನ್ನು 5100mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 45W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ. ಈ ಮೊಬೈಲ್ ಅನ್ನು ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಮಾಡಬಹುದು.

ಇತರೆ ವೈಶಿಷ್ಟ್ಯಗಳು

ಈ ಮೊಬೈಲ್ ಕಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಬ್ಲೂಟೂತ್ v5.0, ವೈ-ಫೈ 5 ಮತ್ತು ಜಿಪಿಎಸ್‌, IP54 ರೇಟಿಂಗ್, 3.5 ಎಂಎಂ ಆಡಿಯೋ ಜ್ಯಾಕ್ ಮತ್ತು ಯುಎಸ್‌ಬಿ 2.0, ಯುಎಸ್‌ಬಿ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
Oppo A3x 4G First Sale starts tomorrow: know price, discount, availability, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+