Home
ಸುದ್ದಿಜಾಲ

ನಾಳೆ ಭಾರತದಲ್ಲಿ OPPO A5 Pro 5G ಬಿಡುಗಡೆ; 6000mAh ಬ್ಯಾಟರಿ.. ಬೆಲೆಯೂ ಬಹಿರಂಗ.. ಹೀಗಿವೆ ಫೀಚರ್ಸ್

ಒಪ್ಪೋ ಇತ್ತೀಚೆಗೆ ಒಪ್ಪೋ K13 5G (OPPO K13 5G) ಫೋನನ್ನು ಬಿಡುಗಡೆ ಮಾಡಿತು. ಇದೀಗ, ಮತ್ತೊಂದು ಹೊಸ ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿದೆ. ಹೌದು, ನಾಳೆ ಒಪ್ಪೋ A5 ಪ್ರೊ 5G (OPPO A5 Pro 5G) ಸ್ಮಾರ್ಟ್‌ಫೋನ್ ಅಧಿಕೃತವಾಗಿ ಭಾರತದಲ್ಲಿ ಲಾಂಚ್ ಆಗಲಿದೆ. ಇದನ್ನು ತನ್ನ 'A' ಸರಣಿಯ ಅಡಿಯಲ್ಲಿ ತರಲಾಗುತ್ತಿದೆ. ಈ ಒಪ್ಪೋ A5 ಪ್ರೊ 5G ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ಮತ್ತು ಬಿಡುಗಡೆ ವಿವರಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕಂಪನಿಯು ಈಗಾಗಲೇ ಒಪ್ಪೋ A5 ಪ್ರೊ 5G ಫೋನಿನ ಫೋಟೋ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಇದು 6.67 ಇಂಚಿನ ಡಿಸ್ಪ್ಲೇಯೊಂದೊಗೆ ಬರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಇದರೊಂದಿಗೆ 5800mAh ಬ್ಯಾಟರಿ ಮತ್ತು 45W ಫ್ಲ್ಯಾಶ್ ಚಾರ್ಜ್, 8GB RAM + 256GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ದೇಶೀಯ ಮಾರುಕಟ್ಟೆಗೆ ಬರಲಿದೆ.

ನಾಳೆ OPPO A5 Pro 5G ಲಾಂಚ್; 6000mAh ಬ್ಯಾಟರಿ.. ಬೆಲೆಯೂ ಲೀಕ್! ಹೀಗಿವೆ ಫೀಚರ್

ಭಾರತದಲ್ಲಿ ಒಪ್ಪೋ A5 ಪ್ರೊ 5G ಬಿಡುಗಡೆ

ಒಪ್ಪೋ ಕಂಪನಿಯು ನಾಳೆ (ಏಪ್ರಿಲ್ 24) ವರ್ಚುವಲ್ ಲಾಂಚ್ ಈವೆಂಟ್ ಆಯೋಜಿಸಿದೆ. ಈ ಸಮಾರಂಭದಲ್ಲಿ ತನ್ನ ಹೊಸ ಒಪ್ಪೋ A5 ಪ್ರೊ 5G ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದೇ ವೇಳೆ ನೂತನ ಒಪ್ಪೋ 5G ಸ್ಮಾರ್ಟ್‌ಫೋನಿನ ಬೆಲೆ ಮತ್ತು ಮಾರಾಟದ ವಿವರಗಳನ್ನು ಬಹಿರಂಗಪಡಿಸಲಿದೆ. ವಿಶೇಷವೆಂದರೆ, ಈ ಒಪ್ಪೋ 5G ಫೋನ್ IP69 ರೇಟಿಂಗ್ ಪಡೆದಿದೆ. ಇದು 'ಜಲನಿರೋಧಕ ಫೋನ್' ಎಂದು ಕಂಪನಿ ಹೇಳಿದೆ. ಈ ಮೊಬೈಲ್ ನೀರು, ಮಣ್ಣು, ಶಾಖ, ಶೀತ ಮತ್ತು ಧೂಳಿನಿಂದ ರಕ್ಷಣೆ ಪಡೆದಿದೆ.

ಭಾರತದಲ್ಲಿ ಒಪ್ಪೋ A5 ಪ್ರೊ 5G ಬೆಲೆ (ನಿರೀಕ್ಷಿತ)

ವರದಿಯ ಪ್ರಕಾರ, ಒಪ್ಪೋ A5 ಪ್ರೊ 5G ಫೋನಿನ ಬೆಲೆ ಭಾರತದಲ್ಲಿ 17,999 ರೂ. ನಿಂದ ಪ್ರಾರಂಭವಾಗಲಿದೆ. ಇದು 8GB RAM+ 128GBಸ್ಟೋರೇಜ್ ಆಯ್ಕೆ ಹೊಂದಿರುವ ಫೊನಿನ ಬೆಲೆ ಆಗಿದೆ. ಇನ್ನು 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 19,999 ರೂ. ಆಗಿರುತ್ತದೆ.

ಒಪ್ಪೋ A5 ಪ್ರೊ 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒಪ್ಪೋ A5 ಪ್ರೊ 5G ಫೋನ್ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದು ಭಾರತದಲ್ಲಿ 6.67 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರಲಿದೆ. ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಸ್ಕ್ರೀನ್ ಆಗಿರಲಿದೆ. ಈ ಡಿಸ್ಪ್ಲೇಯು 1,604 × 720 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ಒಪ್ಪೋ A5 ಪ್ರೊ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರಲಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಕಲರ್‌ಓಎಸ್ 15 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಫೋನ್ 6GB RAM + 128GB ಸ್ಟೋರೇಜ್ ಮತ್ತು 8GB RAM + 256GB ಸ್ಟೋರೇಜ್ ರೂಪಾಂತರಗಳನ್ನು ಹೊಂದಿದೆ.

ನಾಳೆ OPPO A5 Pro 5G ಲಾಂಚ್; 6000mAh ಬ್ಯಾಟರಿ.. ಬೆಲೆಯೂ ಲೀಕ್! ಹೀಗಿವೆ ಫೀಚರ್

ಕ್ಯಾಮೆರಾ ಸೆಟಪ್

ಒಪ್ಪೋ A5 ಪ್ರೊ 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರಲಿದೆ. ಇದು ಎಲ್‌ಇಡಿ ಫ್ಲ್ಯಾಷ್ ಬೆಂಬಲದೊಂದಿಗೆ ಬರಲಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿರಲಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒಪ್ಪೋ A5 ಪ್ರೊ 5G ಫೋನ್ 5,800mAh ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಚೀನಾದಲ್ಲಿ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರಾಟವಾಗುತ್ತಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗುವುದು. ಈ ಒಪ್ಪೋ A5 ಪ್ರೊ 5G ಮೊಬೈಲ್ IP69 ರೇಟಿಂಗ್ ಹೊಂದಿದೆ. ಇದು ಭದ್ರತೆ ಮತ್ತು ಅನ್‌ಲಾಕಿಂಗ್‌ಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಈ ಫೋನ್ ಬ್ಲೂಟೂತ್ 5.3, ವೈ-ಫೈ 5, ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

Best Mobiles in India

English summary
OPPO A5 Pro 5G is launching in India Tomorrow: Check Out Expected Price, Specs, Features and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+