20,000ಕ್ಕಿಂತ ಕಡಿಮೆ! 6000mAh ಬ್ಯಾಟರಿ.. 512GB ಸ್ಟೋರೇಜ್.. ಹೊಸ OPPO ಫೋನ್ ಅಬ್ಬರಿಸಲು ಸಿದ್ಧ
ಒಪ್ಪೋ ಪ್ರಿಯರಿಗೆ ಸಿಹಿಸುದ್ದಿ ಇಲ್ಲಿದೆ. ಶೀಘ್ರದಲ್ಲೇ ಹೊಸ ಫೋನ್ ಗ್ರಾಹಕರ ಕೈ ಸೇರಲಿದೆ. ಹೌದು, ಕಂಪನಿಯು ನೂತನ ಒಪ್ಪೋ A5 ಪ್ರೊ 5G (OPPO A5 Pro 5G) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು, ಕಳೆದ ಜೂನ್ ತಿಂಗಳಲ್ಲಿ ಬಿಡುಗಡೆಯಾದ ಒಪ್ಪೋ A3 ಪ್ರೊ 5G ಫೋನಿನ ಉತ್ತರಾಧಿಕಾರಿಯಾಗಿ ಮಾರುಕಟ್ಟೆಗೆ ಬರಲಿದೆ. ಮುಂಬರುವ ಹೊಸ ಮೊಬೈಲ್‌ನ ಬೆಲೆ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಬನ್ನಿ, ಈ ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ತಿಳಿಯೋಣ.
ಕಂಪನಿಯು ಒಪ್ಪೋ A3 ಪ್ರೊ 5G ಫೋನನ್ನು ಭಾರತದಲ್ಲಿ 17,999 ರೂ.ಗೆ ಬಿಡುಗಡೆ ಮಾಡಿತ್ತು. ಅದರಂತೆ, ಮುಂಬರುವ ಒಪ್ಪೋ A5 ಪ್ರೊ 5G ಅನ್ನು 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಪರಿಚಯಿಸಬಹುದು. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್ ಹೊಂದಿರಲಿದೆ. ಇದರಲ್ಲಿ 12GB RAM + 512GB ಸ್ಟೋರೇಜ್ ಲಭ್ಯವಿರುತ್ತದೆ. ಇದರೊಂದಿಗೆ 6.7 ಇಂಚಿನ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಕ್ಯಾಮೆರಾ, 6000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಒಪ್ಪೋ A5 ಪ್ರೊ 5G ಬೆಲೆ ಎಷ್ಟು?
ಕಂಪನಿಯು ಒಪ್ಪೋ A3 ಪ್ರೊ 5G ಅನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ. ಫೋನಿನ ಆರಂಭಿಕ ಬೆಲೆ ಅಂದಾಜು 20,000 ರೂ. ಆಗಿರಲಿದೆ. ಈ ಫೋನಿನ ಮೂಲ ರೂಪಾಂತರದ ಬೆಲೆ 20 ಸಾವಿರ ರೂ.ಗಿಂತ ಕಡಿಮೆ ಇರುತ್ತದೆ ಎಂದು ಹೇಳಲಾಗಿದೆ. ಟಾಪ್ ವೇರಿಯಂಟ್ ಬೆಲೆ 22,000 ರೂ. ಇರಲಿದೆ. ಪ್ರಸ್ತುತ, ಒಪ್ಪೋ A3 ಪ್ರೊ 5G ಫೋನಿನ 8GB+128GB ಸ್ಟೋರೇಜ್ ಬೆಲೆ ಭಾರತದಲ್ಲಿ 17,999 ರೂ. ಮತ್ತು 8GB+256GB ಸ್ಟೋರೇಜ್ ಬೆಲೆ 19,999 ರೂ. ಇದೆ.
ಒಪ್ಪೋ A5 ಪ್ರೊ 5G ಯಾವಾಗ ಬಿಡುಗಡೆ?
ಕಂಪನಿಯು ಒಪ್ಪೋ A5 ಪ್ರೊ 5G ಮೊಬೈಲ್ ಬಿಡುಗಡೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಆದರೆ, ಹೊಸ ವರ್ಷಕ್ಕೆ ಈ ಸ್ಮಾರ್ಟ್‌ಫೋನ್ ಅದ್ದೂರಿಯಾಗಿ ಲಾಂಚ್ ಆಗಬಹುದು ಎನ್ನಲಾಗಿದೆ. ಕಂಪನಿಯು ಒಪ್ಪೋ A5 ಪ್ರೊ 5G ಫೋನನ್ನು 2025ರ ಜನವರಿ ತಿಂಗಳಲ್ಲಿ ರಿಲೀಸ್ ಮಾಡಬಹುದು. ಈ ಮೊಬೈಲ್ ಮೊದಲು ಚೀನಾದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಬಳಿಕ, ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.
ಒಪ್ಪೋ A5 ಪ್ರೊ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ A5 ಪ್ರೊ 5G ಮೊಬೈಲ್ 6.7 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಪಂಚ್ ಹೋಲ್ ಅಮೋಲೆಡ್ ಡಿಸ್ಪ್ಲೇ ಆಗಿರಲಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ A5 ಪ್ರೊ 5G ಫೋನ್ ಮೀಡಿಯಾ ಟೆಕ್ ಡೈಮೆನ್ಷನ್ 7300 ಎನರ್ಜಿ ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಹೊಸ ಆಂಡ್ರಾಯ್ಡ್ 5 ಆಪರೇಟಿಂಗ್ ಸಿಸ್ಟಮ್ ಜೊತೆಗೆ ColorOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಒಪ್ಪೋ A3 ಪ್ರೊ 5G ಸ್ಮಾರ್ಟ್‌ಫೋನ್ 8GB RAM ಹೊಂದಿದೆ. ಮುಂಬರುವ ಒಪ್ಪೋ A5 ಪ್ರೊ 5G ಮೊಬೈಲ್ 12GB RAM ನೊಂದಿಗೆ ಬರಲಿದೆ. ಫೋನಿನ ದೊಡ್ಡ ವೇರಿಯಂಟ್ 12GB RAM ಮತ್ತು 512GB ಸ್ಟೋರೇಜ್ ಹೊಂದಿರಲಿದೆ. ಮೂಲ ರೂಪಾಂತರವು 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿರಲಿದೆ.
ಕ್ಯಾಮೆರಾ ಸೆಟಪ್
ಕಂಪನಿಯು ಒಪ್ಪೋ A5 ಪ್ರೊ 5G ಫೋನಿನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅಳವಡಿಸಲಿದೆ. ಇದು OIS ತಂತ್ರಜ್ಞಾನದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿರಲಿದೆ. ಸೆಲ್ಫಿ ಪ್ರಿಯರಿಗಾಗಿ, ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ A5 ಪ್ರೊ 5G ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ತಂತ್ರಜ್ಞಾನ ಇರಲಿದೆ.


Click it and Unblock the Notifications








