Home
ಸುದ್ದಿಜಾಲ

ಭಾರತದಲ್ಲಿ ಒಪ್ಪೋ A57e ಸ್ಮಾರ್ಟ್‌ಫೋನ್‌ ಬಿಡುಗಡೆ! ಪ್ರೊಸೆಸರ್‌ ಯಾವುದು?

ಭಾರತದಲ್ಲಿ ಒಪ್ಪೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಬೇಡಿಕೆಯಿದೆ. ಇದೇ ಕಾರಣಕ್ಕೆ ಒಪ್ಪೋ ಕಂಪೆನಿ ಕೂಡ ಭಾರತದಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಒಪ್ಪೋ A57e ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಇದು ಮೀಡಿಯಾಟೆಕ್‌ ಹಿಲಿಯೋ G35 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಒಪ್ಪೋ

ಹೌದು, ಒಪ್ಪೋ ಕಂಪೆನಿ ಭಾರತದಲ್ಲಿ ಒಪ್ಪೋ A57e ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ಒಳಗೊಂಡಿದೆ. ಇದು 33W SuperVOOC ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ವಿಶೇಷತೆಯನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಒಪ್ಪೋ A57e ಸ್ಮಾರ್ಟ್‌ಫೋನ್‌ 6.56 ಇಂಚಿನ HD+ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,612x720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 600 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 84.2% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದ್ದು, 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಒಪ್ಪೋ A57e ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G35 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ ಕಲರ್‌ಒಸ್‌ 12.1ನಲ್ಲಿ ರನ್ ಆಗಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಒಪ್ಪೋ A57e ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನೀವು ಲೋ ಲೈಟ್‌ ಇದ್ದಾಗಲೂ ಸ್ಪಷ್ಟ ಚಿತ್ರಗಳನ್ನು ಸೆರಿಹಿಡಿಯಬಹುದಾಗಿದೆ. ಇದಕ್ಕಾಗಿ ಸೆಲ್ಫಿ ಕ್ಯಾಮೆರಾದಲ್ಲಿ ನೈಟ್‌ಸ್ಕೇಪ್‌ ಸೆಲ್ಫಿ ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಒಪ್ಪೋ A57e ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W SuperVOOC ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi, ಬ್ಲೂಟೂತ್ v5.2, USB ಟೈಪ್-C ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೊಮೀಟರ್ ಮತ್ತು ಗ್ರ್ಯಾವಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಒಪ್ಪೋ A57e ಸ್ಮಾರ್ಟ್‌ಫೋನ್‌ 4GB RAM + 128GB ಸ್ಟೋರೇಜ್‌ ಆಯ್ಕೆಗೆ 13,999ರೂ. ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ಒಪ್ಪೋ ಎನ್ಕೋ ಬಡ್ಸ್‌ 2 ಇಯರ್‌ಬಡ್ಸ್‌

ಇದಲ್ಲದೆ ಒಪ್ಪೋ ಕಂಪೆನಿ ಭಾರತದಲ್ಲಿ ಇತ್ತೀಚಿಗೆ ಹೊಸ ಒಪ್ಪೋ ಎನ್ಕೋ ಬಡ್ಸ್‌ 2 ಇಯರ್‌ಬಡ್ಸ್‌ ಬಿಡಗಡೆ ಮಾಡಿದೆ. ಈ ಹೊಸ ಇಯರ್‌ಬಡ್ಸ್‌ ಎನ್‌ಕೋ ಬಡ್ಸ್‌ನ ಉತ್ತರಾಧಿಕಾರಿಯಾಗಿದ್ದು, ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ. ಇನ್ನು ಈ ಇಯರ್‌ಬಡ್ಸ್‌ 28 ಗಂಟೆಗಳವರೆಗೆ ಬ್ಯಾಕಪ್ ಅನ್ನು ನೀಡಲಿದೆ ಎಂದು ಒಪ್ಪೋ ಕಂಪನಿ ಹೇಳಿಕೊಂಡಿದೆ. ಇದು ಡಾಲ್ಬಿ ಅಟ್ಮಾಸ್ ಜೊತೆಗೆ ಎನ್ಕೋ ಲೈವ್ ಸ್ಟಿರಿಯೊ ಸೌಂಡ್ ಎಫೆಕ್ಟ್‌ಗಳನ್ನು ಕೂಡ ಪಡೆದುಕೊಂಡಿದೆ. ಇದು ಬೇಸ್‌ ಸೌಂಡ್‌, ಬಾಸ್ ಬೂಸ್ಟ್ ಮತ್ತು ಕ್ಲಿಯರ್ ವೋಕಲ್ಸ್ ಎನ್ನುವ ಮೂರು ರೀತಿಯ ಸೆಟ್ಟಿಂಗ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಈ ಇಯರ್‌ಬಡ್ಸ್‌ IPX4-ರೇಟಿಂಗ್ ಅನ್ನು ಹೊಂದಿದ್ದು, ವರ್ಕೌಟ್‌ಗಳು ಮತ್ತು ಸ್ಪ್ಲಾಶ್‌ಗಳ ಸಮಯದಲ್ಲಿ ಬೆವರು ವಿರುದ್ದ ಪ್ರಮಾಣೀಕರಿಸುತ್ತದೆ.

Best Mobiles in India

English summary
Oppo A57e With 5,000mAh Battery Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+