Home
ಸುದ್ದಿಜಾಲ

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಒಪ್ಪೋ A58 4G; ಇದರ ಸ್ಟೈಲಿಶ್‌ ಲುಕ್‌ಗೆ ಫಿದಾ ಆಗೋದು ಗ್ಯಾರಂಟಿ!

ಒಪ್ಪೋ ಕಂಪೆನಿಯ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ ಒಪ್ಪೋ A58 4G ಬಿಡುಗಡೆಗೆ ಸಿದ್ಧವಾಗಿದೆ. ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಇದು ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಹೌದು, ಒಪ್ಪೋ A58 4G ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಲಾಂಚ್‌ ಆಗಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ ಬಿಡುಗಡೆಗೂ ಮುನ್ನವೇ ಇದರ ಫೀಚರ್ಸ್‌ ಏನಿರಲಿದೆ ಅನ್ನೊದು ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಒಪ್ಪೋ A58; ಸ್ಟೈಲಿಶ್‌ ಲುಕ್‌ಗೆ ಫಿದಾ  ಗ್ಯಾರಂಟಿ!

ಒಪ್ಪೋ A58 4G ಡಿಸ್‌ಪ್ಲೇ ರಚನೆ
ಒಪ್ಪೋ A58 4G ಸ್ಮಾರ್ಟ್‌ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂದು ನಿರೀಕ್ಷಿಸಲಾಗಿದೆ,. ಜೊತೆಗೆ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 2.8D ಕರ್ವ್ಡ್‌ ಬಾಡಿಯೊಂದಿಗೆ ಬರಲಿದೆ ಎನ್ನಲಾಗಿದೆ.

ಒಪ್ಪೋ A58 4G ಪ್ರೊಸೆಸರ್‌ ಬಲವೇನು?
ಒಪ್ಪೋ A58 4G ಸ್ಮಾರ್ಟ್‌ಫೋನ್‌ ಮಾಲಿ G52 MC2 GPU ನೊಂದಿಗೆ ಜೋಡಿಸಲಾದ ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಬರಲಿದೆ. ಇದು ಆಂಡ್ರಾಯ್ಡ್‌ 13-ಆಧಾರಿತ ColorOS 13.1 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB + 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಒಪ್ಪೋ A58 4G ಕ್ಯಾಮೆರಾ ಸೆಟ್‌ಅಪ್‌
ಒಪ್ಪೋ A58 4G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ನೊಂದಿಗೆ ಬರಲಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿ ಇರಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾವನ್ನು ಸೆಂಟರ್-ಅಲೈನ್ಡ್ ಹೋಲ್-ಪಂಚ್ ಕಟೌಟ್‌ನಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.

ಒಪ್ಪೋ A58 4G ಬ್ಯಾಟರಿ ಮತ್ತು ಇತರೆ ಸೌಲಭ್ಯ
ಒಪ್ಪೋ A58 4G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ. ಇದು 33W ವೈರ್ಡ್ SuperVOOC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ.

ಒಪ್ಪೋ A58 4G ಬೆಲೆ ಮತ್ತು ಲಭ್ಯತೆ
ಒಪ್ಪೋ A58 4G ಸ್ಮಾರ್ಟ್‌ಫೋನ್‌ 6GB + 128GB ಆವೃತ್ತಿಯು ಭಾರತದಲ್ಲಿ 14,999ರೂ.ಬೆಲೆಯಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇದೇ ಆಗಸ್ಟ್ 8 ರಂದು ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಇದು ಭಾರತದಲ್ಲಿ ಆಗಸ್ಟ್ 10 ರಿಂದ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಇದಲ್ಲದೆ ಡ್ಯಾಜ್ಲಿಂಗ್ ಗ್ರೀನ್ ಮತ್ತು ಗ್ಲೋಯಿಂಗ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಇದಲ್ಲದೆ ಒಪ್ಪೋ ಕಂಪೆನಿ ಇತ್ತೀಚಿಗೆ ಒಪ್ಪೋ A58 4G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

Best Mobiles in India

English summary
Oppo A58 4G launch in India soon: Expected Specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+