ಟ್ರೆಂಡಿಂಗ್‌ನಲ್ಲಿರುವ ಈ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಕೋಬೇಡಿ
ಇತ್ತೀಚಿಗೆ ಬಿಡುಗಡೆ ಆಗಿದ್ದ ಒಪ್ಪೋ A59 5G ಫೋನ್ ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಸ್ಟೈಲಿಶ್ ಲುಕ್ ಜೊತೆಗೆ ಗುಣಮಟ್ಟದ ಕ್ಯಾಮೆರಾ ಫೀಚರ್ಸ್ ಇದರ ಮೇನ್ ಹೈಲೈಟ್ ಆಗಿದೆ. ಇದೀಗ ಈ ಸ್ಮಾರ್ಟ್‌ಫೋನ್ ಅಮೆಜಾನ್ ತಾಣದಲ್ಲಿ ಭಾರಿ ರಿಯಾಯಿತಿಯೊಂದಿಗೆ ಸೇಲ್ ಆಗುತ್ತಿದೆ. ಇದರಿಂದ ಫೋನ್ ಖರೀದಿಸುವವರಿಗೆ ಉತ್ತಮ ಸಮಯ ಇದಾಗಿದೆ.
ಹೌದು, ಒಪ್ಪೋ A59 5G ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಡಿಸ್ಕೌಂಟ್ ಪಡೆದುಕೊಂಡಿದೆ. ಇದರೊಂದಿಗೆ ವಿವಿಧ ಬ್ಯಾಂಕ್ ಆಫರ್ ಹಾಗೂ ಇಎಂಐ ಸೌಲಭ್ಯ ಕೂಡ ದೊರೆಯುತ್ತಿದ್ದು, ಇನ್ನಷ್ಟು ಕಡಿಮೆ ಬೆಲೆಗೆ ಫೋನ್ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6020SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಒಪ್ಪೋ A59 5G ಮೇಲೆ ದೊರೆಯುತ್ತಿರುವ ರಿಯಾಯಿತಿ ಏನು? ಇದರ ಫೀಚರ್ಸ್ ಹೇಗಿದೆ ಎಲ್ಲದರ ಡಿಟೇಲ್ಸ್ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಒಪ್ಪೋ A59 5G ಮೇಲೆ ಭಾರಿ ಡಿಸ್ಕೌಂಟ್
ಒಪ್ಪೋ A59 5G ಸ್ಮಾರ್ಟ್‌ಫೋನಿನ 4GB RAM ಮತ್ತು 128GB ಸ್ಟೋರೇಜ್ ಆಯ್ಕೆಯನ್ನು ಅಮೆಜಾನ್ ತಾಣದಲ್ಲಿ 17,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಫೋನ್ ಮೇಲೆ 17% ಡಿಸ್ಕೌಂಟ್ ನೀಡಲಾಗುತ್ತಿರುವುದರಿಂದ ಇದನ್ನು ನೀವು ಕೇವಲ 14,999ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಜೊತೆಗೆ ಇಎಂಐ, ವಿವಿಧ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ.
ಒಪ್ಪೋ A59 5G ಫೀಚರ್ಸ್ ಹೇಗಿದೆ?
ಒಪ್ಪೋ A59 5G ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಇದು ಡ್ಯೂಡ್ರಾಪ್ ನಾಚ್ ವಿನ್ಯಾಸದಲ್ಲಿದ್ದು, 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಬೆಂಬಲ ಹಾಗೂ 720 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ. ಇದಲ್ಲದೆ ಡಿಸ್‌ಪ್ಲೇ 96% NTSC ಹೈ ಕಲರ್ ಗ್ಯಾಮಟ್‌ನೊಂದಿಗೆ ಹೊಂದಿದೆ.

ಒಪ್ಪೋ A59 5G ಪ್ರೊಸೆಸರ್ ಕಾರ್ಯವೈಖರಿ?
ಒಪ್ಪೋ A59 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6020SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಮಾಲಿ-G57 MC2 GPU ಸಪೋರ್ಟ್ ಪಡೆದಿದೆ. ಇದು ColorOS 13.1 ಆಂಡ್ರಾಯ್ಡ್ 13 ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಒಪ್ಪೋ A59 5G ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ
ಒಪ್ಪೋ A59 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಬೊಕೆ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಒಪ್ಪೋ A59 5G ಬ್ಯಾಟರಿ ಮತ್ತು ಇತರೆ ಸೌಲಭ್ಯ
ಒಪ್ಪೋ A59 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W SUPERVOOC ಫ್ಲ್ಯಾಷ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಫೋನ್ ಅನ್ನು ಕೇವಲ 30 ನಿಮಿಷಗಳಲ್ಲಿ 52% ಚಾರ್ಜ್ ಮಾಡಬಹುದು ಎಂದು ಒಪ್ಪೋ ಕಂಪೆನಿ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್,ವೈಫೈ, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ.


Click it and Unblock the Notifications








