Home
ಸುದ್ದಿಜಾಲ

Oppo: ಭಾರತದಲ್ಲಿ ಮೊದಲ ಮಾರಾಟ ಆರಂಭಿಸಿದ ಒಪ್ಪೋ A59!..ಭರ್ಜರಿ ಕ್ಯಾಶ್‌ಬ್ಯಾಕ್‌!

ಮೂರು ದಿನಗಳ (ಡಿ.22) ಹಿಂದೆಯಷ್ಟೇ ಭಾರತಕ್ಕೆ ಎಂಟ್ರಿ ನೀಡಿದ್ದ ಒಪ್ಪೋ A59 5G ಇಂದು (25) ತನ್ನ ಮೊದಲ ಸೇಲ್‌ ಆರಂಭಿಸಿದೆ. ಎಂಟ್ರಿಯಲ್ಲೇ ಭರ್ಜರಿ ಸೌಂಡ್‌ ಮಾಡುತ್ತಿರುವ ಒಪ್ಪೋ A59 ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌ ಪ್ರಯುಕ್ತ ವಿಶೇಷ ಆಫರ್‌ಗಳನ್ನು ಸಹ ನೀಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಒಪ್ಪೋ A59 ಸ್ಮಾರ್ಟ್‌ಫೋನ್‌ ಭಾರತದಲ್ಲಿ ತನ್ನ ಮೊದಲ ಮಾರಾಟವನ್ನು ಆರಂಭಿಸಿದೆ. ಹೊಸ ವರ್ಷಕ್ಕೂ ಮುನ್ನ ನ್ಯೂ ಫೋನ್‌ ಖರೀದಿಸಬೇಕೆಂದುಕೊಂಡವರಿಗೆ ಉತ್ತಮ ಆಯ್ಕೆ ಇದಾಗಿದೆ. ಬಜೆಟ್‌ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್ಸ್‌ ಸ್ಮಾರ್ಟ್‌ಫೋನ್‌ ಖರೀದಿಸಬಹುದಾಗಿದೆ. ಇನ್ನು ಫಸ್ಟ್‌ ಸೇಲ್‌ ಪ್ರಯುಕ್ತ ಒಪ್ಪೋ A59 ಫೋನ್‌ ಮೇಲೆ ಏನೆಲ್ಲಾ ಆಫರ್‌ ಲಭ್ಯವಾಗುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Oppo: ಭಾರತದಲ್ಲಿ ಮೊದಲ ಮಾರಾಟ ಆರಂಭಿಸಿದ ಒಪ್ಪೋ A59!..ಭರ್ಜರಿ ಕ್ಯಾಶ್‌ಬ್ಯಾಕ್‌!

ಒಪ್ಪೋ A59 ಖರೀದಿಗೆ ಲಭ್ಯ! ಏನಿದೆ ಆಫರ್‌
ಒಪ್ಪೋ A59 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬೇಸ್‌ ಮಾಡೆಲ್‌ 4GB + 128GB ಆಯ್ಕೆಯನ್ನು 14,999ರೂ. ಗಳಿಗೆ ಸೇಲ್‌ ಮಾಡುತ್ತಿದೆ. ಇದರ 6GB + 128GB ರೂಪಾಂತರದ ಆಯ್ಕೆಯನ್ನು 16,999 ರೂ. ಬೆಲೆಗೆ ಮಾರಾಟ ಮಾಡುತ್ತಿದೆ. ಇಂದಿನಿಂದಲೇ (ಡಿಸೆಂಬರ್ 25) ಖರೀದಿಗೆ ಲಭ್ಯವಾಗುತ್ತಿದ್ದು, ಇದನ್ನು ಫ್ಲಿಪ್‌ಕಾರ್ಟ್, Amazon, Oppo ಸ್ಟೋರ್ ಮತ್ತು ಇತರ ಚಿಲ್ಲರೆ ಔಟ್‌ಲೆಟ್ ಮೂಲಕ ಖರೀದಿಸಬಹುದಾಗಿದೆ.

ಇನ್ನು ಫಸ್ಟ್‌ ಸೇಲ್‌ ಆಫರ್‌ ಪ್ರಯುಕ್ತ ವಿಶೇಷವಾಗಿ SBI ಕಾರ್ಡ್‌ಗಳು, IDFC ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್, AU ಫೈನಾನ್ಸ್ ಬ್ಯಾಂಕ್ ಮತ್ತು ಒನ್‌ ಕಾರ್ಡ್ ನಲ್ಲಿ ಖರೀದಿಸುವವರಿಗೆ 1,500ರೂ ವರೆಗೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ಮೇಲೆ 6 ತಿಂಗಳವರೆಗೆ ನೋ ಕಾಸ್ಟ್‌ EMI ಆಯ್ಕೆಯನ್ನು ಸಹ ನೀಡುತ್ತಿದೆ.

Oppo: ಭಾರತದಲ್ಲಿ ಮೊದಲ ಮಾರಾಟ ಆರಂಭಿಸಿದ ಒಪ್ಪೋ A59!..ಭರ್ಜರಿ ಕ್ಯಾಶ್‌ಬ್ಯಾಕ್‌!

ಒಪ್ಪೋ A59 ಫೀಚರ್ಸ್‌ ಹೇಗಿದೆ?
ಒಪ್ಪೋ A59 5G ಸ್ಮಾರ್ಟ್‌ಫೋನ್‌ 6.56 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಬೆಂಬಲ ಹಾಗೂ 720 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ನೀಡಲಿದೆ. ಜೊತೆಗೆ 96% NTSC ಹೈ ಕಲರ್ ಗ್ಯಾಮಟ್‌ನೊಂದಿಗೆ ಹೊಂದಿದೆ.

ಒಪ್ಪೋ A59 5G ಪ್ರೊಸೆಸರ್‌ ಯಾವುದು?
ಒಪ್ಪೋ A59 5G ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6020SoC ಪ್ರೊಸೆಸರ್‌ನಲ್ಲಿ ರನ್‌ ಆಗಲಿದೆ. ColorOS 13.1 ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಮಾಲಿ-G57 MC2 GPU ಸಪೋರ್ಟ್‌ ಪಡೆದಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಮೆಮೊರಿ ಕಾರ್ಡ್‌ ಬೆಂಬಲಿಸುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Oppo: ಭಾರತದಲ್ಲಿ ಮೊದಲ ಮಾರಾಟ ಆರಂಭಿಸಿದ ಒಪ್ಪೋ A59!..ಭರ್ಜರಿ ಕ್ಯಾಶ್‌ಬ್ಯಾಕ್‌!

ಒಪ್ಪೋ A59 5G ಕ್ಯಾಮೆರಾ ಸೆಟಪ್‌
ಒಪ್ಪೋ A59 5G ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಬೊಕೆ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಒಪ್ಪೋ A59 5G ಬ್ಯಾಟರಿ ಮತ್ತು ಇತರೆ
ಒಪ್ಪೋ A59 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W SUPERVOOC ಫ್ಲ್ಯಾಷ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಫೋನ್‌ ಅನ್ನು ಕೇವಲ 30 ನಿಮಿಷಗಳಲ್ಲಿ 52% ಚಾರ್ಜ್ ಮಾಡಬಹುದು ಎಂದು ಒಪ್ಪೋ ಕಂಪೆನಿ ಹೇಳಿದೆ. ಇದಲ್ಲದೆ ಫೋನ್ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ.

Best Mobiles in India

English summary
Oppo A59 5G Smartphone Goes for First Sale Today: Price and Offers Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+