Home
ಸುದ್ದಿಜಾಲ

Oppo: ಒಪ್ಪೋ A59 5G ಎಂಟ್ರಿಗೆ ಪತರುಗುಟ್ಟಿದ ಪ್ರತಿಸ್ಪರ್ಧಿಗಳು!..ಇದರ ವಿಶೇಷತೆ ಏನ್‌ ಗೊತ್ತಾ?

ಕೆಲ ದಿನಗಳಿಂದ ಆನ್‌ಲೈನ್‌ನಲ್ಲಿ ಸಾಕಷ್ಟು ಹಲ್‌ಚಲ್‌ ಎಬ್ಬಿಸಿದ್ದ ಒಪ್ಪೋ A59 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಸ್ಲಿಮ್ ಬಾಡಿ ಡಿಸೈನ್, 90Hz ರಿಫ್ರೆಶ್ ರೇಟ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಲ್ಲದೆ ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6020SoC ಪ್ರೊಸೆಸರ್‌ ಒಳಗೊಂಡಿದೆ.

ಹೌದು, ಒಪ್ಪೋ A59 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದು 33W SUPERVOOC ಫ್ಲ್ಯಾಷ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಇನ್ನುಳಿದಂತೆ ಒಪ್ಪೋ A59 5G ಫೀಚರ್ಸ್‌ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Oppo: ಒಪ್ಪೋ A59 5G ಎಂಟ್ರಿಗೆ ಪತರುಗುಟ್ಟಿದ ಪ್ರತಿಸ್ಪರ್ಧಿಗಳು!ವಿಶೇಷತೆ ಏನು?

ಒಪ್ಪೋ A59 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಒಪ್ಪೋ A59 5G ಸ್ಮಾರ್ಟ್‌ಫೋನ್‌ 6.56 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಡ್ಯೂಡ್ರಾಪ್ ನಾಚ್ ಅನ್ನು ಹೊಂದಿದ್ದು, 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಬೆಂಬಲ ಹಾಗೂ 720 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ನೀಡಲಿದೆ. ಇನ್ನು ಈ ಡಿಸ್‌ಪ್ಲೇ 96% NTSC ಹೈ ಕಲರ್ ಗ್ಯಾಮಟ್‌ನೊಂದಿಗೆ ಹೊಂದಿದೆ.

ಒಪ್ಪೋ A59 5G ಪ್ರೊಸೆಸರ್‌ ಯಾವುದು?
ಒಪ್ಪೋ A59 5G ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6020SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ColorOS 13.1 ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಮಾಲಿ-G57 MC2 GPU ಸಪೋರ್ಟ್‌ ಪಡೆದಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಮೆಮೊರಿ ಕಾರ್ಡ್‌ ಬೆಂಬಲಿಸುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Oppo: ಒಪ್ಪೋ A59 5G ಎಂಟ್ರಿಗೆ ಪತರುಗುಟ್ಟಿದ ಪ್ರತಿಸ್ಪರ್ಧಿಗಳು!ವಿಶೇಷತೆ ಏನು?

ಒಪ್ಪೋ A59 5G ಕ್ಯಾಮೆರಾ ಸೆಟಪ್‌
ಒಪ್ಪೋ A59 5G ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಬೊಕೆ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಒಪ್ಪೋ A59 5G ಬ್ಯಾಟರಿ ಮತ್ತು ಇತರೆ

ಒಪ್ಪೋ A59 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W SUPERVOOC ಫ್ಲ್ಯಾಷ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಫೋನ್‌ ಅನ್ನು ಕೇವಲ 30 ನಿಮಿಷಗಳಲ್ಲಿ 52% ಚಾರ್ಜ್ ಮಾಡಬಹುದು ಎಂದು ಒಪ್ಪೋ ಕಂಪೆನಿ ಹೇಳಿದೆ. ಇದಲ್ಲದೆ ಫೋನ್ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ.

Oppo: ಒಪ್ಪೋ A59 5G ಎಂಟ್ರಿಗೆ ಪತರುಗುಟ್ಟಿದ ಪ್ರತಿಸ್ಪರ್ಧಿಗಳು!ವಿಶೇಷತೆ ಏನು?

ಭಾರತದಲ್ಲಿ ಒಪ್ಪೋ A59 5G ಬೆಲೆ ಮತ್ತು ಲಭ್ಯತೆ
ಒಪ್ಪೋ A59 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 14,999ರೂ.ಬೆಲೆಯನ್ನು ಹೊಂದಿದೆ. ಇದರ 6GB+128GB RAM ಸ್ಟೋರೇಜ್‌ ಆಯ್ಕೆಯು ಕೂಡ ಬರಲಿದ್ದು, ಇದರ ಬೆಲೆ ವಿವರಗಳು ಬಹಿರಂಗವಾಗಿಲ್ಲ. ಈ ಸ್ಮಾರ್ಟ್‌ಫೋನ್‌ ಇದೇ ಡಿಸೆಂಬರ್ 25 ರಿಂದ OPPO ಸ್ಟೋರ್, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಇತರ ರಿಟೇಲ್ ಔಟ್‌ಲೆಟ್‌ಗಳ ಮೂಲಕ ಮಾರಾಟವಾಗಲಿದೆ. ಇದನ್ನು ನೀವು ಸಿಲ್ಕ್ ಗೋಲ್ಡ್ ಮತ್ತು ಸ್ಟಾರ್ರಿ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಲಾಂಚ್‌ ಆಫರ್‌ ಏನಿದೆ?
ಒಪ್ಪೋ A59 5G ಸ್ಮಾರ್ಟ್‌ಫೋನ್‌ ಮೇಲೆ ಲಾಂಚ್‌ ಆಫರ್‌ನಲ್ಲಿ 1,500ರೂ ವರೆಗೆ ಕ್ಯಾಶ್‌ಬ್ಯಾಕ್‌ ನೀಡಲಾಗ್ತಿದೆ. ಇದನ್ನು SBI ಕಾರ್ಡ್, IDFC ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್, AU ಫೈನಾನ್ಸ್ ಬ್ಯಾಂಕ್ ಮೂಲಕ ಖರೀದಿ ಮಾಡಿದವರಿಗೆ ನೀಡಲಾಗುತ್ತದೆ. ಜೊತೆಗೆ ರಿಟೇಲ್ ಔಟ್‌ಲೆಟ್‌ಗಳು ಮತ್ತು Oppo ಸ್ಟೋರ್‌ಗಳಿಂದ ಒಂದು ಕಾರ್ಡ್ ಮೂಲಕ ಮಾಡಿದ ಖರೀದಿಗಳ ಮೇಲೆ ಆರು ತಿಂಗಳವರೆಗೆ ನೋ ಕಾಸ್ಟ್‌ EMI ಆಯ್ಕೆಯನ್ನು ಸಹ ಪಡೆದುಕೊಳ್ಳಬಹುದು.

Best Mobiles in India

English summary
Oppo A59 5G with 33W charging launched in India: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+