Subscribe to Gizbot

ಒಪ್ಪೋ A71 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ: ಬಂಪರ್ ಆಫರ್..!

Written By: Lekhaka

ಒಪ್ಪೋ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡುತ್ತಿದೆ. ಇದೇ ಮಾದರಿಯಲ್ಲಿ ಒಪ್ಪೋ A71 ಸ್ಮಾರ್ಟ್ ಫೋನ್ ಮೇಲೆ ರೂ.3000 ವರೆಗೂ ದರ ಕಡಿತವನ್ನು ಕಾಣಬಹುದಾಗಿದೆ. ಈ ಕುರಿತು ಒಪ್ಪೋ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲವಾದರೂ ಫೇಸ್ ಬುಕ್ ಟ್ವೀಟರ್ ನಲ್ಲಿ ಈ ಕುರಿತು ಜಾಹಿರಾತುಗಳು ಓಡಾಡುತ್ತಿವೆ ಎನ್ನಲಾಗಿದೆ.

ಒಪ್ಪೋ A71 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ: ಬಂಪರ್ ಆಫರ್..!

ಮಹೇಶ್ ಟೆಲಿಕಾಂ ಎನ್ನುವ ರಿಟೇಲ್ ಒಪ್ಪೋ A71 ಸ್ಮಾರ್ಟ್ ಫೋನ್ ಮೇಲೆ ರೂ.3000 ವರೆಗೂ ದರ ಕಡಿತವನ್ನು ಮಾಡಿದ್ದಾರೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಲಾಂಚ್ ಆದ ಸಂದರ್ಭದಲ್ಲಿ ರೂ.12,990ಕ್ಕೆ ದೊರೆಯುತ್ತಿತ್ತು, ಸದ್ಯ ಬೆಲೆಯಲ್ಲಿ ಕಡಿತವಾಗಿರುವ ಕಾರಣ ರೂ. 9,990ಕ್ಕೆ ದೊರೆಯಲಿದೆ ಎನ್ನಲಾಗಿದೆ, ಈ ಹಿನ್ನಲೆಯಲ್ಲಿ ಒಪ್ಪೋ A71 ಸ್ಮಾರ್ಟ್ ಫೋನ್ ವಿಶೇಷತೆಗಳ ಕುರಿತ ಮಾಹಿತಿಯೂ ಇಲ್ಲದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್ ಪ್ಲೇ:

ಡಿಸ್ ಪ್ಲೇ:

ಒಪ್ಪೋ A71 ಸ್ಮಾರ್ಟ್ ಫೋನ್ ಯೂನಿ ಬಾಡಿ ಡಿಸೈನ್ ಅನ್ನು ಕಾಣಬಹುದಾಗಿದ್ದು, ರೌಂಡ್ ಎಡ್ಜ್ ವಿನ್ಯಾಸವು ಇದೆ. 5.2 ಇಮಚಿನ HD TFT ಡಿಸ್ ಪ್ಲೇಯನ್ನು ಒಳಗೊಂಡಿದ್ದು, ಉತ್ತಮ ಗುಣಮಟ್ಟದ ವಿಡಿಯೋಗಳನ್ನು ನೋಡಲು ಇದು ಸಹಾಯಕಾರಿಯಾಗಲಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಒಪ್ಪೋ A71 ಸ್ಮಾರ್ಟ್ ಫೋನ್ ನಲ್ಲಿ ಆಕ್ಟಾ ಕೋರ್ ಮಿಡಿಯಾ ಟೆಕ್ MT6750T ಪ್ರೋಸೆಸರ್ ಅಳವಡಿಸಲಾಗಿದ್ದು, 3GB RAM ಮತ್ತು 16^GB ಇಂಟರ್ನಲ್ ಮೆಮೊರಿಯನ್ನು ಈ ಪೋನ್ ನಲ್ಲಿ ಕಾಣಬಹುದಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಫೇಸ್‌ಬುಕ್ ಸೆಕ್ಯೂರ್ ಮಾಡುವುದು ಹೇಗೆ..? FB ಬಳಕೆದಾರರ ಗಮನಕ್ಕೆ

ಕ್ಯಾಮೆರಾ- ಸಾಫ್ಟ್ ವೇರ್:

ಕ್ಯಾಮೆರಾ- ಸಾಫ್ಟ್ ವೇರ್:

ಈ ಒಪ್ಪೋ A71 ಸ್ಮಾರ್ಟ್ ಫೋನ್ ನಲ್ಲಿ 13MP ಹಿಂಭಾಗದ ಕ್ಯಾಮೆರಾವನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೋಡಬಹುದಾಗಿದೆ. ಅಲ್ಲದೇ ಈ ಸ್ಮಾರ್ಟ್ ಪೋನ್ ಆಂಡ್ರಾಯ್ಡ್ ನೌಗಾದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಜೊತೆಗೆ ಕಲಸ್ಸ್ ಓಎಸ್ 3.1 ಅನ್ನು ಸಹ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Oppo A71 smartphone has received a price cut of Rs 3,000 in India. The news comes from Mumbai-based mobile phone retailer Mahesh Telecom. After receiving the price cut, Oppo A71 will be available at just Rs. 9,990.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot