ಫುಲ್ ಸ್ಕ್ರೀನ್ ಡಿಸ್‌ಪ್ಲೇ, 20MP ಸೆಲ್ಫೀ ಕ್ಯಾಮೆರಾದೊಂದಿಗೆ ಒಪ್ಪೋ A75 ಮತ್ತು A75s ಫೋನ್!!

By Tejaswini P G
|

ಚೀನಾದ ಮೊಬೈಲ್ ತಯಾರಕರಾದ ಒಪ್ಪೋ ಸಂಸ್ಥೆಯು ತೈವಾನ್ ನಲ್ಲಿ ಎರಡು ಹೊಸ ಮೊಬೈಲ್ಗಳನ್ನು ಲಾಂಚ್ ಮಾಡುವ ಮೂಲಕ ಈ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದಾರೆ. ಒಪ್ಪೋ A75 ಮತ್ತು A75s ಹೆಸರಿನ ಈ ಎರಡು ಸ್ಮಾರ್ಟ್ಫೋನ್ಗಳು ಫುಲ್ ಸ್ಕ್ರೀನ್ ವಿನ್ಯಾಸ ಮತ್ತು ಇತರ ಸಮಾನ ಫೀಚರ್ಗಳೊಂದಿಗೆ ಲಾಂಚ್ ಆಗಿದೆ.

ಫುಲ್ ಸ್ಕ್ರೀನ್ ಡಿಸ್‌ಪ್ಲೇ, 20MP ಸೆಲ್ಫೀ ಕ್ಯಾಮೆರಾದೊಂದಿಗೆ ಒಪ್ಪೋ A75 ಫೋನ್!!

ಈ ಎರಡೂ ಫೋನ್ಗಳ ಮಧ್ಯೆ ಇರುವ ವ್ಯತ್ಯಾಸ ಒಂದೇ..ಅದೇ ಆಂತರಿಕ ಸ್ಟೋರೇಜ್ ಸಾಮರ್ಥ್ಯ. ಒಪ್ಪೋ A75 ಮತ್ತು A75s ಎರಡೂ ಬ್ಲ್ಯಾಕ್ ಮತ್ತು ಗೋಲ್ಡ್ ಆವೃತ್ತಿಗಳಲ್ಲಿ ಲಭ್ಯವಿದೆ. ಇನ್ನು ಇವುಗಳ ಬೆಲೆಯ ಬಗ್ಗೆ ಹೇಳುವುದಾದರರೆ A75 ನ ಬೆಲೆ NTD 10,990 (ಅಂದಾಜು ರೂ 23,500) ಆದರೆ ಒಪ್ಪೋ A75s ನ ಬೆಲೆ NTD 11,990(ಅಂದಾಜು ರೂ 25,650).ಈ ಸ್ಮಾರ್ಟ್ಫೋನ್ಗಳು ಈಗಾಗಲೇ ತೈವಾನ್ ನಲ್ಲಿ ಖರೀದಿಗೆ ಲಭ್ಯವಿದೆ.

ಸಧ್ಯಕ್ಕೆ ಈ ಫೋನ್ಗಳು ಬೇರೆ ಪ್ರದೇಶಗಳಲ್ಲಿ ಮಾರಾಟವಾಗಲಿದೆಯೇ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಈ ಮೊಬೈಲ್ಗಳ ಫೀಚರ್ಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಫುಲ್ ಸ್ಕ್ರೀನ್ ಡಿಸ್‌ಪ್ಲೇ, 20MP ಸೆಲ್ಫೀ ಕ್ಯಾಮೆರಾದೊಂದಿಗೆ ಒಪ್ಪೋ A75 ಫೋನ್!!

ಒಪ್ಪೋ A75 ಮತ್ತು A75s ನ ಸ್ಪೆಸಿಫಿಕೇಶನ್ಗಳು

ಒಪ್ಪೋ A75 ಮತ್ತು A75s 6-ಇಂಚ್ FHD+ ರೆಸೊಲ್ಯೂಶನ್ ಹೊಂದಿದ್ದು 2160x1080 ಪಿಕ್ಸೆಲ್ಸ್ ರೆಸೊಲ್ಯೂಶನ್ ಹೊಂದಿದೆ.ಈ ಮೊದಲೇ ತಿಳಿಸಿದಂತೆ ಈ ಮೊಬೈಲ್ಗಳು ಫುಲ್-ಸ್ಕ್ರೀನ್ ವಿನ್ಯಾಸ ಹೊಂದಿದ್ದು ಅತ್ಯಂತ ತೆಳುವಾದ ಅಂಚು ಹೊಂದಿದೆ.

ಇನ್ನು ಮೀಡಿಯಾಟೆಕ್ ಹೀಲಿಯೋಪಿ23(MT6763T) ಪ್ರೊಸೆಸರ್ ಹೊಂದಿರುವ ಈ ಎರಡೂ ಫೋನ್ಗಳು 4GB RAM ಹೊಂದಿದೆ. ಇವುಗಳ ಆಂತರಿಕ ಸ್ಟೋರೇಜ್ ಕುರಿತು ಹೇಳುವುದಾದರೆ ಒಪ್ಪೋ A75 32GB ಆಂತರಿಕ ಸ್ಟೋರೇಜ್ ಹೊಂದಿದ್ದರೆ ಒಪ್ಪೋ A75s 64GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.

ಬೆಂಗಳೂರಿನಲ್ಲಿ ಗೂಗಲ್ ಕೆಲಸಗಳಿಗಾಗಿ ಈಗಲೇ ಅರ್ಜಿ ಸಲ್ಲಿಸಿ!!..ಎಲ್ಲಾ ಮಾಹಿತಿ ತಿಳಿಯಿರಿ!!ಬೆಂಗಳೂರಿನಲ್ಲಿ ಗೂಗಲ್ ಕೆಲಸಗಳಿಗಾಗಿ ಈಗಲೇ ಅರ್ಜಿ ಸಲ್ಲಿಸಿ!!..ಎಲ್ಲಾ ಮಾಹಿತಿ ತಿಳಿಯಿರಿ!!

ಇದರ ಆಪ್ಟಿಕ್ಸ್ ಕುರಿತು ಹೇಳುವುದಾದರೆ ಎರಡೂ ಸ್ಮಾರ್ಟ್ಫೋನ್ಗಳು 16MP ಪ್ರೈಮರಿ ಕ್ಯಾಮೆರಾ ಮತ್ತು ಸೆಲ್ಫೀಗಳಿಗಾಗಿ 20MP ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಸೆಲ್ಫೀ ಕ್ಯಾಮೆರಾ ಕೃತಕ ಬುದ್ಧಿಮತ್ತೆ ಆಧಾರಿತ ಫೇಸ್ ರೆಕಗ್ನಿಶನ್ ಫೀಚರ್ ಹೊಂದಿದ್ದು ಸ್ಮಾರ್ಟ್ಫೋನ್ ಅನ್ಲಾಕ್ ಮಾಡಲು ಬಳಸಲಾಗುವ ಫೋನ್ ಹಿಂಬದಿಯಲ್ಲಿರುವ ಫಿಂಗರ್ಪ್ರಿಂಟ್ ಸೆನ್ಸರ್ ಗೆ ಆಸರೆಯಾಗಿರುತ್ತದೆ.

ಇನ್ನು ಇದರ ಸಾಫ್ಟ್ವೇರ್ ಕುರಿತು ಹೇಳುವುದಾದರೆ ಈ ನೂತನ ಒಪ್ಪೋ ಸ್ಮಾರ್ಟ್ಫೋನ್ಗಳೆರಡೂ ಆಂಡ್ರಾಯ್ಡ್ 7.1 ನುಗಾಟ್ ಆಪರೇಟಿಂಗ್ ಸಾಫ್ಟ್ವೇರ್ ಹೊಂದಿದ್ದು ಅದರ ಮೇಲೆ ಕಲರ್ ಓಎಸ್ 3.0 ನ ಮೇಲ್ಪದರವಿದೆ. ಇನ್ನು ಈ ಫೋನ್ಗಳು ಸದಾ ಓಡುತ್ತಿರಲು ಇದರಲ್ಲಿದೆ 3200mAh ಸಾಮರ್ಥ್ಯದ ಬ್ಯಾಟರಿ.

ವೈಫೈ 2.4/5Ghz 802.11 a/b/g/n, ಜಿಪಿಎಸ್ ಸಪೋರ್ಟ್, ಬ್ಲೂಟೂತ್ 4.2 ಮತ್ತು OTG ಮೊದಲಾದ ಕನೆಕ್ಟಿವಿಟಿ ಫೀಚರ್ಗಳು ಈ ಎರಡೂ ಒಪ್ಪೋ ಫೋನ್ಗಳಲ್ಲಿದೆ. ಒಪ್ಪೋ A75 ಮತ್ತು A75s ಫೋನ್ಗಳೆರಡೂ 156.5x76x7.5mm ಆಯಾಮ ಹೊಂದಿದ್ದು 152ಗ್ರಾಂ ತೂಕ ಹೊಂದಿದೆ.

Best Mobiles in India

Read more about:
English summary
The newly launched Oppo smartphones are powered by MediaTek's HelioP23 (MT6763T) processor clubbed with 4GB RAM.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X