Home
ಸುದ್ದಿಜಾಲ

ಮೊಬೈಲ್‌ ಪ್ರಿಯರಿಗೆ ಹೊಸ ಆಯ್ಕೆಕೊಟ್ಟ ಒಪ್ಪೋ! ಏನಿದೆ ಈ ಹೊಸ ಫೋನ್‌ನಲ್ಲಿ!

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಗಳಲ್ಲಿ ಒಂದಾದ ಒಪ್ಪೋ ಬ್ರ್ಯಾಂಡ್‌ ಹೊಸ ಒಪ್ಪೋ A78 4G ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಹೌದು, ಒಪ್ಪೋ A78 4G ಸ್ಮಾರ್ಟ್‌ಫೋನ್‌ ಇಂಡೋನೇಷ್ಯಾ ಮಾರುಕಟ್ಟೆಗೆ ಎಂಟ್ರಿ ನಿಡಿದೆ. ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 256GB ಇಂಟರ್‌ ಸ್ಟೋರೇಜ್ ಕಾನ್ಫಿಗರೇಶನ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಜೊತೆಗೆ 67W ಸೂಪರ್‌ವೂಕ್‌ ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್‌ ಪ್ರಿಯರಿಗೆ ಹೊಸ ಆಯ್ಕೆಕೊಟ್ಟ ಒಪ್ಪೋ! ಏನಿದೆ ಈ ಹೊಸ ಫೋನ್‌ನಲ್ಲಿ!

ಒಪ್ಪೋ A78 4G ಡಿಸ್‌ಪ್ಲೇ ರಚನೆ ಹೇಗಿದೆ?
ಒಪ್ಪೋ A78 4G ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 90Hz ರಿಫ್ರೆಶ್ ರೇಟ್‌ ಮತ್ತು ಗರಿಷ್ಠ 180Hz ಟಚ್ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 409ppi ಪಿಕ್ಸೆಲ್ ಸಾಂದ್ರತೆ, 430 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ಡಿಸ್‌ಪ್ಲೇ 90.8% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ.

ಒಪ್ಪೋ A78 4G ಪ್ರೊಸೆಸರ್‌ ಯಾವುದು?
ಒಪ್ಪೋ A78 4G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ ColorOS 13.1 ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ Adreno 610 GPU ಸಪೋರ್ಟ್‌ ಅನ್ನು ಪಡೆದಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ ಬಳಕೆಯಾಗದ ಸ್ಟೋರೇಜ್‌ ಬಳಸಿಕೊಂಡು RAM ಅನ್ನು ವಾಸ್ತವಿಕವಾಗಿ 16GB ವರೆಗೆ ವಿಸ್ತರಿಸಬಹುದಾಗಿದೆ.

ಒಪ್ಪೋ A78 4G ಕ್ಯಾಮೆರಾ ಸೆಟ್‌ಅಪ್‌
ಒಪ್ಪೋ A78 4G ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಮೊಬೈಲ್‌ ಪ್ರಿಯರಿಗೆ ಹೊಸ ಆಯ್ಕೆಕೊಟ್ಟ ಒಪ್ಪೋ! ಏನಿದೆ ಈ ಹೊಸ ಫೋನ್‌ನಲ್ಲಿ!

ಒಪ್ಪೋ A78 4G ಬ್ಯಾಟರಿ ಮತ್ತು ಇತರೆ ಸೌಲಭ್ಯ
ಒಪ್ಪೋ A78 4G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.3, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಜಿಯೋಮ್ಯಾಗ್ನೆಟಿಕ್ ಸೆನ್ಸರ್, ಗ್ರಾವಿಟಿ ಸೆನ್ಸಾರ್, ಗೈರೊಸ್ಕೋಪ್, ಇನ್-ಡಿಸ್ಪ್ಲೇ ಆಪ್ಟಿಕಲ್ ಸೆನ್ಸರ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಅನ್ನು ಹೊಂದಿದೆ.

ಒಪ್ಪೋ A78 4G ಬೆಲೆ ಮತ್ತು ಲಭ್ಯತೆ
ಒಪ್ಪೋ A78 4G ಸ್ಮಾರ್ಟ್‌ಫೋನ್‌ 8GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ IDR 35,99,000 (ಸುಮಾರು 20,000ರೂ)ಬೆಲೆ ಹೊಂದಿದೆ. ಇದು ಪ್ರಸ್ತುತ ಇಂಡೋನೇಷ್ಯಾದಲ್ಲಿನ ಒಪ್ಪೋದ ಆನ್‌ಲೈನ್ ಸ್ಟೋರ್‌ನಲ್ಲಿ ಬ್ಲ್ಯಾಕ್ ಮಿಸ್ಟ್ ಮತ್ತು ಸೀ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದನ್ನು ಆರ್ಡರ್‌ ಮಾಡಿದ ಗ್ರಾಹಕರಿಗೆ ಒಪ್ಪೋ ಎನ್ಕೋ ಬಡ್ಸ್‌2 ಇಯರ್ ಫೋನ್‌ ಅನ್ನು ಉಚಿತವಾಗಿ ಕೂಡ ನೀಡಲಾಗ್ತಿದೆ.

Best Mobiles in India

English summary
Oppo A78 4G With 67W SuperVOOC Charging Launched: Price and Specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+