Home
ಸುದ್ದಿಜಾಲ

ಇತ್ತೀಚಿಗೆ ಬಿಡುಗಡೆ ಆಗಿದ್ದ ಒಪ್ಪೋದ ಈ ಫೋನ್‌ಗೆ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌!

ಅಮೆಜಾನ್‌ ತಾಣದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಮುಂದುವರೆದಿದೆ. ಇದು ಒಪ್ಪೋ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳಿಗೂ ಕೂಡ ಅನ್ವಯವಾಗುತ್ತಿದೆ. ಅದರಲ್ಲೂ ಎರಡು ತಿಂಗಳ ಹಿಂದೆ ಭಾರತಕ್ಕೆ ಎಂಟ್ರಿ ನೀಡುವ ಮೂಲಕ ಧೂಳೆಬ್ಬಿಸಿದ್ದ ಒಪ್ಪೋ A79 5G ಭರ್ಜರಿ ಡಿಸ್ಕೌಂಟ್‌ ಪಡೆದುಕೊಂಡಿದೆ.

ಹೌದು, ಒಪ್ಪೋ A79 5G ಸ್ಮಾರ್ಟ್‌ಫೋನ್‌ ಅಮೆಜಾನ್‌ ತಾಣದಲ್ಲಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಟೆಕ್‌ ವಲಯಕ್ಕೆ ಎಂಟ್ರಿ ನೀಡಿ ಕೇವಲ ಎರಡು ತಿಂಗಳನ್ನಷ್ಟೇ ಕಳೆದಿರುವ ಈ ಫೋನ್‌ ಮೇಲೆ ಇಂದಿಗೂ ಕೂಡ ಗ್ರಾಹಕರ ಆಕರ್ಷಣೆ ಪಡೆದಿದೆ. ಹಾಗಾದ್ರೆ ಅಮೆಜಾನ್‌ ತಾಣದಲ್ಲಿ ಒಪ್ಪೋ A79 5G ಫೋನ್‌ ಪಡೆದುಕೊಂಡಿರುವ ಡಿಸ್ಕೌಂಟ್‌ ಎಷ್ಟು? ಇದರ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇತ್ತೀಚಿಗೆ ಬಿಡುಗಡೆ ಆಗಿದ್ದ ಒಪ್ಪೋ ಫೋನ್‌ಗೆ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌

ಡಿಸ್ಕೌಂಟ್‌ ನಂತರದ ಬೆಲೆ ಎಷ್ಟು?
ಒಪ್ಪೋ A79 5G ಸ್ಮಾರ್ಟ್‌ಫೋನ್‌ ಅಮೆಜಾನ್‌ ತಾಣದಲ್ಲಿ 22,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್‌ಫೋನ್‌ 13% ಡಿಸ್ಕೌಂಟ್‌ ಪಡೆದುಕೊಂಡಿರುವುದರಿದ ಕೇವಲ 19,999ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಜೊತೆಗೆ ವಿವಿಧ ಬ್ಯಾಂಕ್‌ ಆಫರ್‌ಗಳನ್ನು ಸಹ ನೀಡಲಾಗ್ತಿದ್ದು, ಇದರ ಬೆಲೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಇಳಿಕೆಯಾಗಲಿದೆ.

ಒಪ್ಪೋ A79 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ರಚನೆ ಏನಿದೆ?
ಒಪ್ಪೋ A79 5G ಸ್ಮಾರ್ಟ್‌ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 91.4% ರಚನೆಯ ಅನುಪಾತವನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಡಿಸ್‌ಪ್ಲೇ ಆಲ್-ಡೇ AI ಐ ಕಂಫರ್ಟ್ ಟೆಕ್ನಾಲಜಿಯನ್ನು ಒಳಗೊಂಡಿದೆ.

ಇತ್ತೀಚಿಗೆ ಬಿಡುಗಡೆ ಆಗಿದ್ದ ಒಪ್ಪೋ ಫೋನ್‌ಗೆ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌

ಒಪ್ಪೋ A79 5G ಪ್ರೊಸೆಸರ್‌ ಕಾರ್ಯ ವೈಖರಿ ಹೇಗಿದೆ?
ಒಪ್ಪೋ A79 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 13 OS ಆಧಾರಿತ ColorOS 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ.

ಒಪ್ಪೋ A79 5G ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ಒಪ್ಪೋ A79 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪೋರ್ಟ್ರೇಟ್‌ ಲೆನ್ಸ್‌ ಅನ್ನು ಹೊಂದಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ನ ರಿಯರ್‌ ಕ್ಯಾಮೆರಾವನ್ನು ಹೊಳೆಯುವ ರಿಂಗ್‌ ಹೌಸಿಂಗ್‌ನಲ್ಲಿ ಇರಿಸಿರುವುದು ಮೇನ್‌ ಹೈಲೈಟ್‌ ಆಗಿದೆ.

ಇತ್ತೀಚಿಗೆ ಬಿಡುಗಡೆ ಆಗಿದ್ದ ಒಪ್ಪೋ ಫೋನ್‌ಗೆ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌

ಒಪ್ಪೋ A79 5G ಬ್ಯಾಟರಿ ಮತ್ತು ಇತರೆ
ಒಪ್ಪೋ A79 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌ 5.3, ಯುಎಸ್‌ಬಿ ಟೈಪ್-ಸಿ, ಇಯರ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 3.5ಮಿ.ಮೀ ಸ್ಟೀರಿಯೋ ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.

ಒಪ್ಪೋ A79 5G ಕಲರ್‌ ಆಯ್ಕೆಗಳೇನು?
ಒಪ್ಪೋ A79 5G ಸ್ಮಾರ್ಟ್‌ಫೋನ್‌ ಗ್ಲೋಯಿಂಗ್ ಗ್ರೀನ್ ಮತ್ತು ಮಿಸ್ಟರಿ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Oppo A79 5G Smartphone Gets Price Drop on amazon website
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+