ಒಪ್ಪೋ ಸಂಸ್ಥೆಯಿಂದ SpO2 ಸೆನ್ಸಾರ್‌ ಬೆಂಬಲಿಸುವ ಸ್ಮಾರ್ಟ್‌ಬ್ಯಾಂಡ್ ಬಿಡುಗಡೆ!

|

ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಒಪ್ಪೋ ಕಂಪೆನಿ ತನ್ನ ಸ್ಮಾರ್ಟ್‌ ವೆರಿಯೆಬಲ್ಸ್‌ ಪ್ರಾಡಕ್ಟ್‌ಗಳ ಮೂಲಕವೂ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಬ್ಯಾಂಡ್‌ಗಳನ್ನ ಪರಿಚಯಿಸಿರುವ ಒಪ್ಪೋ ತನ್ನ ವಿಭಿನ್ನ ಫೀಚರ್ಸ್‌ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ಬ್ಯಾಂಡ್‌ಗಳಿಗೆ ಭಾರಿ ಬೇಡಿಕೆ ಇದ್ದು, ಇದೀಗ ಒಪ್ಪೋ ಕಂಪೆನಿ ತನ್ನ ಹೊಸ ಮಾದರಿಯ ಮೂರು ಸ್ಮಾರ್ಟ್‌ಬ್ಯಾಂಡ್‌ಗಳನ್ನ ಬಿಡುಗಡೆ ಮಾಡಿದೆ.

ಒಪ್ಪೋ

ಹೌದು, ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಒಪ್ಪೋ ಕಂಪೆನಿ ತನ್ನ ಹೊಸ ಮಾದರಿಯ ಮೂರು ಸ್ಮಾರ್ಟ್‌ ಬ್ಯಾಂಡ್‌ಗಳನ್ನ ಬಿಡುಗಡೆ ಮಾಡಿದೆ. ವೆನಿಲ್ಲಾ ಒಪ್ಪೋ ಬ್ಯಾಂಡ್, ಒಪ್ಪೊ ಬ್ಯಾಂಡ್ ಫ್ಯಾಶನ್ ಎಡಿಷನ್, ಮತ್ತು ಒಪ್ಪೋ ಬ್ಯಾಂಡ್ ಇವಿಎ ಎಡಿಷನ್ ಎಂಬ ಮೂರು ಹೊಸ ಮಾದರಿಯ ಸ್ಮಾರ್ಟ್‌ಬ್ಯಾಂಡ್‌ ಅನ್ನು ಪರಿಚಯಿಸಿದೆ. ಇನ್ನು ಒಪ್ಪೋ ಬ್ಯಾಂಡ್ ಫ್ಯಾಶನ್ ಆವೃತ್ತಿ ಹಾಗೂ ವೆನಿಲ್ಲಾ ಒಪ್ಪೋ ಬ್ಯಾಂಡ್‌ ನಲ್ಲಿ ಪ್ಲಾಸ್ಟಿಕ್ ಕವಚದ ಬದಲು ಟಿಪಿಯು ಮತ್ತು ಅಲಾಯ್ ಬ್ಯಾಂಡ್‌ನೊಂದಿಗೆ ಸ್ಟೇನ್‌ಲೆಸ್ ಸ್ಟೀಲ್ ಬಾಡಿ ವಿನ್ಯಾಸವನ್ನು ಹೊಂದಿದೆ. ಇದಲ್ಲದೆ ಫ್ಯಾಷನ್ ಆವೃತ್ತಿಯು ಎನ್‌ಎಫ್‌ಸಿ ಬೆಂಬಲದೊಂದಿಗೆ ಬರುತ್ತದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ಗಳ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಪ್ಪೊ

ಹೊಸ ಒಪ್ಪೊ ಬ್ಯಾಂಡ್ 1.1-ಇಂಚಿನ ಅಮೋಲೆಡ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 100% P3 ವೈಡ್ ಕಲರ್ ಗ್ಯಾಮಟ್ ಮತ್ತು 2.5 ಡಿ ಬಾಗಿದ ಸ್ಕ್ರಾಚ್‌ ರೆಸಿಸ್ಟೆನ್ಸ್ ಮೇಲ್ಮೈಯನ್ನು ಹೊಂದಿದೆ. ಇದು ಇನ್‌ಸೈಡ್‌ ರನ್ನಿಂಗ್‌, ಔಟ್‌ಸೈಡ್‌ ರನ್ನಿಂಗ್‌, ಔಟ್‌ಸೈಡ್‌ ಸೈಕ್ಲಿಂಗ್, ಇನ್‌ಸೈಡ್‌ ವಾಕಿಂಗ್, ಇನ್‌ಸೈಡ್‌ ಸೈಕ್ಲಿಂಗ್, ಇನ್‌ಸೈಡ್‌ ರನ್‌, ಕ್ಯಾಲೊರಿ ವೆಸ್ಟ್‌, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್‌, ರೋಯಿಂಗ್ ಮೆಷಿನ್‌, ಎಲಿಪ್ಟಿಕಲ್ ಮೆಷಿನ್, ಸೇರಿದಂತೆ ಇತರೆ ತರಬೇತಿಯನ್ನು ಒಳಗೊಂಡಿರುವ 12 ಸಮಾದರಿಯ ಕ್ರೀಡಾ ವಿಧಾನಗಳನ್ನು ಹೊಂದಿದೆ.

ಒಪ್ಪೋ

ಇನ್ನು ಒಪ್ಪೋ ಸರಣಿಯ ಈ ವೆರಿಯೆಬಲ್ಸ್‌ ಸ್ಮಾರ್ಟ್‌ ಬ್ಯಾಂಡ್‌ಗಳು 5ATM ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನ ಹೊಂದಿದೆ ಅಂದರೆ ಇದು 50 ಮೀಟರ್ ನೀರಿನಲ್ಲಿಯು ತನ್ನ ಕಾರ್ಯವನ್ನು ನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ ಬಳಕೆದಾರರ ರಕ್ತದ ಶುದ್ದತೆಯನ್ನ ಸಹ ಅಳೆಯಲಿದೆ. ಜೊತೆಗೆ ಆಮ್ಲಜನಕದ ಶುದ್ದತೆಯ ಮಟ್ಟವನ್ನ ಮೇಲ್ವಿಚಾರಣೆ ಮಾಡಲಿದೆ. ಇದಕ್ಕಾಗಿ ಎಸ್‌ಪಿಒ 2 ಸೆನ್ಸಾರ್‌ ಮತ್ತು ಹಾರ್ಟ್‌ಬೀಟ್‌ ಸೆನ್ಸಾರ್‌ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ಕ್ಯಾಲೊರಿ ಬರ್ನ್‌, ಮತ್ತು ನಿದ್ರೆಯ ಮೇಲ್ವಿಚಾರಣೆಯನ್ನು ಎಣಿಸುವ ಸಾಮರ್ಥ್ಯ ಹೊಂದಿದೆ.

ಸ್ಮಾರ್ಟ್‌ಬ್ಯಾಂಡ್‌

ಇದಲ್ಲದೆ ಈ ಸ್ಮಾರ್ಟ್‌ಬ್ಯಾಂಡ್‌ 160 ಕ್ಕೂ ಹೆಚ್ಚು ವಾಚ್ಫೇಸ್‌ಗಳನ್ನ ಹೊಂದಿದೆ. ಅಲ್ಲದೆ ಅಪ್ಲಿಕೇಶನ್‌ಗಳು, ಕರೆಗಳು, ಸಂದೇಶಗಳು ಮತ್ತು ಸೊಶೀಯಲ್‌ ಮೀಡಿಯಾ ನೋಟಿಫೀಕೇಶನ್‌ ಅನ್ನು ಬೆಂಬಲಿಸುತ್ತದೆ. ಜೊತೆಗೆ ಮ್ಯೂಸಿಕ್‌ ಕಂಟ್ರೋಲ್‌, ವೆದರ್‌, ಆಲರ್ಟ್‌, ಇತರೆ ಫೀಚರ್ಸ್‌ಗಳನ್ನ ಸಹ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ಗಳನ್ನ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 1.5 ಗಂಟೆ ಸಮಯ ತೆಗೆದುಕೊಳ್ಳುತ್ತದೆ, ಮತ್ತು ಇದು 14 ದಿನಗಳ ಬಳಕೆಯವರೆಗೆ ಇರುತ್ತದೆ ಎಂದು ಹೇಳಲಾಗ್ತಿದೆ. ಅಲ್ಲದೆ ಇದು ಬ್ಲೂಟೂತ್ V5 ಅನ್ನು ಬೆಂಬಲಿಸುತ್ತದೆ ಮತ್ತು ಇದು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳೊಂದಿಗೆ ಹೊಂದಿಕೊಳ್ಳುತ್ತದೆ.

ಒಪ್ಪೋ

ಇನ್ನು ಒಪ್ಪೋ ಬ್ಯಾಂಡ್‌ನ ಬೆಲೆ CNY199 (ಸರಿಸುಮಾರು 2,100 ರೂ.). ಇದು ಕಪ್ಪು ಮತ್ತು ಗುಲಾಬಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇನ್ನು ಒಪ್ಪೋ ಬ್ಯಾಂಡ್ ಫ್ಯಾಶನ್ ಆವೃತ್ತಿಯ ಬೆಲೆ CNY 249 (ಸರಿಸುಮಾರು 2,600 ರೂ.),ಬೆಲೆ ಹೊಂದಿದ್ದು, ಕಪ್ಪು ಮತ್ತು ಚಿನ್ನದ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಅಲ್ಲದೆ ಒಪ್ಪೋ ಬ್ಯಾಂಡ್ ಇವಿಎ ಆವೃತ್ತಿಯ ಬೆಲೆ CNY 299 (ಸರಿಸುಮಾರು 3,100 ರೂ.) ಯನ್ನ ಹೊಂದಿರಲಿದೆ ಎಂದು ಕಂಪೆನಿ ಹೇಳಿದೆ.

Best Mobiles in India

English summary
Oppo Band has launched in China as the latest wearable offering from the Chinese giant. The Oppo Band will be offered in three models – the vanilla Oppo Band, Oppo Band Fashion Edition, and Oppo Band EVA Edition.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X