ಒಪ್ಪೋ ಎನ್‌ಕೋ ಫ್ರೀ ಮತ್ತು ಎನ್‌ಕೊ w31 ಟ್ರೂ ಇಯರ್‌ ಬಡ್ಸ್‌ ಲಾಂಚ್‌!

|

ಟೆಕ್‌ ಮಾರುಕಟ್ಟೆಯಲ್ಲಿ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳಿಗೆ ಭಾರಿ ಬೇಡಿಕೆ ಇದ್ದು, ಈಗಾಗ್ಲೆ ಹಲವಾರು ಕಂಪೆನಿಗಳ ವೈವಿಧ್ಯಮಯ ಇಯರ್‌ಬಡ್ಸ್‌ಗಳು ಖರೀದಿಗೆ ಲಭ್ಯವಿವೆ. ಆದರೂ ಗ್ರಾಹಕರು ಉತ್ತಮ ಬ್ರ್ಯಾಂಡ್‌ ಕಂಪೆನಿಗಳ ಇಯರ್‌ಬಡ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಒಪ್ಪೋ ಕಂಪೆನಿ ಕೂಡ ಒಂದಾಗಿದ್ದು, ಮಾರುಕಟ್ಟೆಯಲ್ಲಿ ತನ್ನ ವೈವಿಧ್ಯಮಯ ಸ್ಮಾರ್ಟ್‌ ಪ್ರಾಡಕ್ಟ್‌ಗಳಿಂದ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಆವೃತ್ತಿಯ ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಿದೆ.

ಹೌದು

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಒಪ್ಪೋ ತನ್ನ ಹೊಸ ಒಪ್ಪೋ ಎನ್‌ಕೋ ಫ್ರೀ ಮತ್ತು ಒಪ್ಪೊ ಎನ್‌ಕೊ w31 ಟ್ರೂ ವಾಯರ್‌ಲೆಸ್‌ ಇಯರ್‌ ಬಡ್ಸ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇನ್ನು ಈ ಇಯರ್‌ಬಡ್ಸ್‌ಗಳು ಪ್ರಸ್ತುತ ಯುವ ಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಂಡಿದ್ದು, ಬಾಸ್‌ ಮೋಡ್‌ ಹಾಗೂ ಬ್ಯಾಲೆನ್ಸ್‌ ಮೋಡ್‌ ಹೊಂದಿದೆ. ಇದರಿಂದ ಆಡಿಯೋ ಫ್ರೀಕ್ವೇನ್ಸಿಯನ್ನ ಉತ್ತಮಗೊಳಿಸಲು ಸಾಧ್ಯವಾಗಲಿದೆ.

ಒಪ್ಪೋ ಎನ್‌ಕೋ ಫ್ರೀ ವಿನ್ಯಾಸ

ಒಪ್ಪೋ ಎನ್‌ಕೋ ಫ್ರೀ ವಿನ್ಯಾಸ

ಒಪ್ಪೋ ಎನ್‌ಕೋ ಫ್ರೀ ವಾಯರ್‌ಲೆಸ್‌ ಇಯರ್‌ಬಡ್‌ಗಳು ಒದೇ ಸಮಯದಲ್ಲಿ ಕನೆಕ್ಟ್‌ ಆಗುವ ಬೈನೌರಲ್ ಬ್ಲೂಟೂತ್ ಟ್ರಾನ್ಸ್‌ಮಿಷನ್‌ ಅನ್ನು ಹೊಂದಿದ್ದು, ಇದು ಎಡ ಮತ್ತು ಬಲ ಕಿವಿಗಳಿಗೆ ಏಕಕಾಲದಲ್ಲಿ ಉತ್ತಮ ಆಡಿಯೋ ವನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಈ ಇಯರ್‌ಬಡ್ಸ್‌ ಬ್ಲೂಟೂತ್ 5.0 ಮೂಲಕ ಸ್ಮಾರ್ಟ್‌ಫೋನ್‌ ಜೊತೆಗೆ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಜೊತೆಗೆ ಇದು ಇನ್ಸಟ್ಯಾಂಟ್‌ ಕನೆಕ್ಟಿವಿಟಿ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ.

ಒಪ್ಪೋ ಎನ್‌ಕೋ ಫ್ರೀ ವಿಶೇಷತೆ

ಒಪ್ಪೋ ಎನ್‌ಕೋ ಫ್ರೀ ವಿಶೇಷತೆ

ಇನ್ನು ಈ ಇಯರ್‌ಬಡ್‌ಗಳು 13.4MM ಆಡಿಯೋ ಡೈನಾಮಿಕ್ ಡ್ರೈವರ್ ಮತ್ತು 120DB ಸೆನ್ಸಿಟಿವ್‌ ಡ್ರೈವರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಮೂಲಕ ಕರೆಗಳನ್ನ ಸ್ವೀಕರಿಸಲು AI ಅಪ್‌ಲಿಂಕ್ ನಾಯಿಸ್‌ ಕ್ಯಾನ್ಸೆಲೇಶನ್‌ ಅನ್ನು ನೀಡಲಾಗಿದೆ. ಇದರಿಂದ ಸುತ್ತಲೂ ಯಾವುದೇ ಗದ್ದಲವಿದ್ದರೂ ಕರೆಗಳ ಮೇಲೆ ಪರಿಣಾಮ ಬೀರದಂತೆ ಉತ್ತಮವಾಗಿ ಧ್ವನಿ ಕೇಳಲಿದೆ. ಇದಲ್ಲದೆ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂನಲ್ಲಿ ವಿಳಂಭವಾದರೆ ಸಿಸ್ಟಮ್-ವೈಡ್ ಆಪ್ಟಿಮೈಸೇಶನ್‌ಗಳನ್ನು ತೆಗೆದುಹಾಕಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಎನ್‌ಕೊ w31 ಟ್ರೂ ಇಯರ್‌ಬಡ್ಸ್‌

ಎನ್‌ಕೊ w31 ಟ್ರೂ ಇಯರ್‌ಬಡ್ಸ್‌

ಒಪ್ಪೋ ಎನ್‌ಕೊ w31 ಇಯರ್‌ ಬಡ್ಸ್‌ ಕೂಡ ಬೈನೌರಲ್ ಲೋ-ಲೇಟೆನ್ಸಿ ಬ್ಲೂಟೂತ್ ಟ್ರಾನ್ಸ್‌ಮಿಷನ್ ಮತ್ತು ಇನ್-ಇಯರ್ ವಿನ್ಯಾಸವನ್ನು ಹೊಂದಿದೆ. ಇದು ವಾಟರ್‌ ಹಾಗೂ ಡಸ್ಟ್‌ ಪ್ರೂಪ್‌ ಹೊಂದಿದ್ದು, ಫ್ರೀಕ್ವೆನ್ಸಿ ಮಟ್ಟವನ್ನು ಸುಧಾರಿಸಲು ಡ್ಯುಯಲ್ ಕಾಂಪೋಸಿಟ್ ಪಾಲಿಯುರೆಥೇನ್ (TPU) ಮತ್ತು ಗ್ರ್ಯಾಫೀನ್ ಡಯಾಫ್ರಾಮ್‌ವಿನ್ಯಾಸವನ್ನು ಅಳವಡಿಸಲಾಗಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಗಾಳಿ ಮತ್ತು ಶಬ್ದ ಹೆಚ್ಚಿರುವ ಸಮಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಲು ಹೈ-ಸೆನ್ಸಿಟಿವಿಟಿ ಮೈಕ್ರೊಫೋನ್‌ ಮತ್ತು ಅಲ್ಗಾರಿದಮ್ ಅನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಇಯರ್‌ಬಡ್‌ಗಳು 31mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ಅಪ್‌ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಐದು ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು 410mAh ಕ್ಯಾರಿ ಕೇಸ್ ಮೂಲಕ ಹೆಚ್ಚುವರಿ 20 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಬ್ಲೂಟೂತ್‌ v5.0 ಅನ್ನು ಬೆಂಬಲಿಸಲಿದ್ದು, ಇನ್ಸ್ಟ್ಯಾಂಟ್‌ ಕನೆಕ್ಟಿವಿಟಿಯನ್ನು ಹೊಂದಿವೆ. ಅಲ್ಲದೆ ಅಲ್ಟ್ರಾ ಡೈನಾಮಿಕ್‌ ಸ್ಪೀಕರ್‌ಗಳನ್ನು ಸಹ ಹೊಂದಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ಒಪ್ಪೋ ಬಿಡುಗಡೆ ಮಾಡಿರುವ ಎನ್‌ಕೋ ಫ್ರೀ 7,999 ರೂ ಬೆಲೆಯನ್ನ ಹೊಂದಿದ್ದರೆ, ಎನ್‌ಕೋ ಡಬ್ಲ್ಯು 31 ಬೆಲೆ ಕೇವಲ 4,499 ರೂ.ಆಗಿದೆ. ಇನ್ನು ಈ ಎರಡೂ ಇಯರ್‌ ಬಡ್‌ಗಳು ಇದೇ ಮಾರ್ಚ್ 4ರಿಂದ ಮಾರಾಟವಾಗಲಿವೆ. ಇನ್ನು ಈ ಇಯರ್‌ಬಡ್ಸ್‌ಗಳು ಬಿಳಿ, ಗುಲಾಬಿ ಮತ್ತು ಕಪ್ಪು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಲು ಲಭ್ಯವಿರುತ್ತದೆ.

Best Mobiles in India

English summary
The OPPO Enco Free comes with 13.4 dynamic drivers, Bluetooth 5.0 and 31mAh battery in each earbud. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X