Home
ಸುದ್ದಿಜಾಲ

ಒಪ್ಪೊ ಸಂಸ್ಥೆಯಿಂದ ಎನ್‌ಕೋ W31 ಮತ್ತು ಎನ್‌ಕೋ M31 ಇಯರ್‌ಫೋನ್‌ ಬಿಡುಗಡೆ!

ಸ್ಮಾರ್ಟ್‌ಫೋನ್‌ಗಳ ಭರಾಟೆ ಜಾಸ್ತಿ ಆದಷ್ಟು ಟೆಕ್‌ ಮಾರುಕಟ್ಟೆಯಲ್ಲಿ ಇಯರ್‌ಫೋನ್‌ಗಳ ಮಾರುಕಟ್ಟೆ ಕೂಡ ದಿನದಿಂದ ದಿನಕ್ಕೆ ವಿಶಾಲವಾಗುತ್ತಲೇ ಇದೆ. ನಿಮಗೆಲ್ಲಾ ತಿಳಿದಿರುವಂತೆ ಈಗೀಗ ಯಾವುದೇ ಸ್ಮಾರ್ಟ್‌ಫೋನ್‌ ಖರೀದಿ ಮಾಡಿದರು ಅದರ ಜೊತೆಗೆ ಯಾವುದೇ ಮಾದರಿಯ ಇಯರ್‌ಫೋನ್‌ಗಳನ್ನ ನೀಡುವುದಿಲ್ಲ. ಆದರೂ ಕೂಡ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳ ಇಯರ್‌ಫೋನ್‌ಗಳನ್ನ ಖರೀದಿಸುತ್ತಾರೆ. ಇದಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪೆನಿಗಳ ಇಯರ್‌ಫೋನ್‌ಗಳು ಲಬ್ಯವಿವೆ. ಇದರಲ್ಲಿ ಒಪ್ಪೋ ಕಂಪೆನಿ ಕೂಡ ಒಂದಾಗಿದ್ದು ಹಲವು ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ಮತ್ತೆ ಹೊಸ ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿದೆ.

ಹೌದು

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಒಪ್ಪೊ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇಯರ್‌ಫೋನ್‌ ಮಾರುಕಟ್ಟೆಯಲ್ಲೂ ತನ್ನ ಪ್ರಾಬಲ್ಯವನ್ನ ಸಾಧಿಸಿದೆ. ಹಲವು ಹೊಸತನದ ಇಯರ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಒಪ್ಪೋ ಇದೀಗ ಭಾರತದಲ್ಲಿ ತನ್ನ ಎರಡು ಹೊಸ ಆಡಿಯೊ ಪ್ರಾಡಕ್ಟ್‌ಗಳನ್ನ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ಗಳನ್ನ ಎನ್‌ಕೋ W31 ಟ್ರೂಲಿ ವಾಯರ್‌ಲೆಸ್‌ ಮತ್ತು ಎನ್‌ಕೋ M31 ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳು ಎಂದು ಹೆಸರಿಸಲಾಗಿದೆ. ಇನ್ನು ಈ ಇಯರ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಎನ್ಕೊ W31 ಟ್ರೂಲಿ ವಾಯರ್‌ಲೆಸ್

ಎನ್ಕೊ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಕಡಿಮೆ ಲೇಟೆನ್ಸಿ ಟ್ರಾನ್ಸ್‌ಮಿಷನ್‌ ಇನ್-ಇಯರ್ ವಿನ್ಯಾಸವನ್ನು ಹೊಂದಿದೆ. ಇದರ ವಿನ್ಯಾಸವು ನಿಮ್ಮ ಕಿವಿಗಳ ಒಳಗೆ ಸಿಲಿಕೋನ್ ಕಿವಿ ಸುಳಿವುಗಳೊಂದಿಗೆ ಸುರಕ್ಷಿತವಾಗಿ ಕೂರುವುದಕ್ಕೆ ಅನುಕೂಲವಾಗಿದೆ. ಇದಲ್ಲದೆ ಈ ಇಯರ್‌ಫೋನ್‌ಗಳು ಧೂಳು ಮತ್ತು ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನ ಹೊಂದಿದೆ. ಅಲ್ಲದೆ ಎನ್‌ಕೋ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಎರಡು ವಾಯ್ಸ್‌ ಮೋಡ್,ಅನ್ನು ಹೊಂದಿದೆ. ಇದರಲ್ಲಿ ನ್ಯಾಚುರಲ್‌ ಸೌಂಡ್‌ ಪ್ರೊಫೈಲ್ ಮತ್ತು ಬಾಸ್-ಬೂಸ್ಟ್ ಮೋಡ್ ಅನ್ನು ಒಳಗೊಂಡಿದೆ. ಅಲ್ಲದೆ ವಾಯ್ಸ್‌ ಕಾಲ್‌ಗಳ ಸಮಯದಲ್ಲಿ ನಾಯ್ಸ್‌ ಕ್ಯಾನ್ಸೆಲೇಶನ್‌ ಸಾಧಿಸಲು ಎರಡೂ ಸ್ಪೀಕರ್‌ಗಳು ಕೂಡ ಎರಡು ಮೈಕ್ರೊಫೋನ್‌ಗಳನ್ನು ಒಳಗೊಂಡಿವೆ.

ಎನ್‌ಕೋ M31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್

ಎನ್‌ಕೋ M31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ನೆಕ್‌ಬ್ಯಾಂಡ್ ಶೈಲಿಯ ಮಾದರಿಯನ್ನ ಹೊಂದಿದೆ. ಇದು ಉತ್ತಮ ಗುಣಮಟ್ಟದ ಆಡಿಯೊಗಾಗಿ ಎಲ್‌ಡಿಎಸಿ ಜೊತೆಗೆ ಬ್ಲೂಟೂತ್ 5.0 ಅನ್ನು ಒಳಗೊಂಡಿದೆ. ಇದರಲ್ಲಿ ಪಿಇಟಿ ಟೈಟಾನಿಯಂ ಕಾಂಪೋಸಿಟ್ ಡಯಾಫ್ರಾಮ್‌ಗಳನ್ನ ನೀಡಲಾಗಿದೆ. ಅಲ್ಲದೆ ಸ್ವತಂತ್ರ ಬಾಸ್ ಚೇಂಬರ್ಸ್‌ಜೊತೆಗೆ 9.2mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದಲ್ಲದೆ ಕರೆಗಳ ಸಮಯದಲ್ಲಿ ಶಬ್ದ ಮತ್ತು ಮಾನವ ಧ್ವನಿಯನ್ನು ಪ್ರತ್ಯೇಕಿಸಲು ಶಬ್ದ ಕಡಿತ ವೈಶಿಷ್ಟ್ಯವನ್ನು ಇದರಲ್ಲಿರುವ AI ಟೆಕ್ನಾಲಜಿ ನೋಡಿಕೊಳ್ಳಲಿದೆ. ಇನ್ನು ಈ ನೆಕ್‌ಬ್ಯಾಂಡ್‌ ಅನ್ನು ದ್ರವ ಸಿಲಿಕೋನ್ ರಬ್ಬರ್‌ನಲ್ಲಿ ಮುಚ್ಚಿದ ಆಕಾರ-ಮೆಮೊರಿ ಲೋಹದಿಂದ ತಯಾರಿಸಲಾಗಿದೆ.

ಬೆಲೆ

ಇನ್ನು ಒಪ್ಪೊ ಎನ್‌ಕೋ M31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಬೆಲೆ 3999 ರೂ. ಆಗಿದ್ದು, ಇ-ಕಾಮರ್ಸ್‌ ತಾಣ ಅಮೆಜಾನ್‌ ನಲ್ಲಿ ಇದೇ ಮೇ 23 ರಿಂದ ಕಪ್ಪು ಅಥವಾ ಹಸಿರು ಬಣ್ಣದಲ್ಲಿ ಲಭ್ಯವಾಗಲಿದೆ. ಇನ್ನು ಒಪ್ಪೊ ಎನ್ಕೊ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ ಫೋನ್‌ ಬೆಲೆ 1999 ರೂ ಆಗಿದ್ದು, ಇದು ಕಪ್ಪು ಅಥವಾ ಬಿಳಿ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Oppo has launched two new audio products in India, the Enco W31 true wireless and Enco M31 neckband earphones.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+