ಒಪ್ಪೊ ಎನ್‌ಕೋ X TWS ಇಯರ್‌ಬಡ್ಸ್‌ ಬಿಡುಗಡೆ!.25 ಗಂಟೆಗಳ ಬ್ಯಾಟರಿ ವಿಶೇಷ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಒಪ್ಪೊ ಕಂಪೆನಿ ತನ್ನ ಹೊಸ ರೆನೋ 5 ಪ್ರೊ ಸ್ಮಾರ್ಟ್‌ಫೋನ್‌ ಜೊತೆಗೆ ಒಪ್ಪೊ ಎನ್‌ಕೋ X TWS ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಸ್ಪೋರ್ಟ್ ಏರ್‌ಪಾಡ್ಸ್ ಪ್ರೊ-ಲೈಕ್ ವಿನ್ಯಾಸವನ್ನು ಹೊಂದಿದೆ. ಇದು short stem ಮತ್ತು ಸಿಲಿಕೋನ್ ಇಯರ್ ಟಿಪ್ಸ್ ಹೊಂದಿದೆ. ಅಲ್ಲದೆ ಈ ಇಯರ್‌ಬಡ್ಸ್‌ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

ಒಪ್ಪೊ

ಹೌದು, ಒಪ್ಪೊ ಕಂಪೆನಿ ತನ್ನ ಹೊಸ ಒಪ್ಪೊ ಎನ್‌ಕೋ X TWS ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಇಯರ್‌ಫೋನ್‌ಗಳು ಬೆಣಚುಕಲ್ಲು ಆಕಾರದ ಚಾರ್ಜಿಂಗ್ ಕೇಸ್‌ನೊಂದಗೆ ಬರುತ್ತವೆ. ಇದು ಯುಎಸ್‌ಬಿ ಟೈಪ್-ಸಿ ವೈರ್ಡ್ ಮತ್ತು ಕಿ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಇಯರ್‌ಫೋನ್‌ಗಳು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌, ಡ್ಯಾನಿಶ್ ಸ್ಪೀಕರ್ ತಯಾರಕ ಡೈನಾಡಿಯೊ ಅವರ ಧ್ವನಿ ಶ್ರುತಿ, ಬ್ಲೂಟೂತ್ 5.2, ಮತ್ತು 25 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಹಾಗಾದ್ರೆ ಒಪ್ಪೊ ಎನ್‌ಕೋ X TWS ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒಪ್ಪೋ

ಒಪ್ಪೋ ಎನ್‌ಕೋ X TWS ಇಯರ್‌ಬಡ್ಸ್‌ ಪ್ರತಿ ಇಯರ್‌ಪೀಸ್‌ನಲ್ಲಿ 11mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಮತ್ತು 6 mm ಸಮತೋಲಿತ ಮೆಂಬರೇನ್ ಡ್ರೈವರ್‌ಗಳನ್ನು ಹೈಲೈಟ್ ಮಾಡುತ್ತದೆ. ಎಎನ್‌ಸಿ ಕ್ರಿಯಾತ್ಮಕತೆಗಾಗಿ ಡ್ಯುಯಲ್-ಮೈಕ್ರೊಫೋನ್ ವ್ಯವಸ್ಥೆಯನ್ನು ಬಳಸುವ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಬೆಂಬಲಿಸಲಿದೆ. ಎಕೋ ಸಿಸ್ಟಮ್‌ ಕಡಿತ ಮತ್ತು ಧ್ವನಿ ಸೆರೆಹಿಡಿಯುವಿಕೆಗಾಗಿ ಇಯರ್‌ಫೋನ್‌ಗಳು ಪ್ರತಿ ಇಯರ್‌ಪೀಸ್‌ನಲ್ಲಿ ಒಟ್ಟು ಮೂರು ಮೈಕ್ರೊಫೋನ್‌ಗಳನ್ನು ಪ್ಯಾಕ್ ಮಾಡುತ್ತವೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ ಜೋಡಿಯನ್ನು ಡ್ಯಾನಿಶ್ ಧ್ವನಿವರ್ಧಕ ತಯಾರಕ ಡೈನಾಡಿಯೊ ಉತ್ತಮವಾಗಿ ಟ್ಯೂನ್ ಮಾಡಿದ್ದಾರೆ ಮತ್ತು ಟಚ್‌ ಕಂಟ್ರೋಲ್‌ಗಳನ್ನು ನೀಡಿದ್ದಾರೆ. ಅಲ್ಲದೆ ಒಪ್ಪೋ ಎನ್‌ಕೋ X TWS ಇಯರ್‌ಫೋನ್‌ಗಳು ಆಕ್ಟಿವ್ ಶಬ್ದ ರದ್ದತಿಯೊಂದಿಗೆ 4 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಮತ್ತು ಎಎನ್‌ಸಿ ಆಫ್‌ನೊಂದಿಗೆ 5.5 ಗಂಟೆಗಳವರೆಗೆ ಇರುತ್ತದೆ ಎಂದು ರೇಟ್ ಮಾಡಲಾಗಿದೆ. 535mAh ಬ್ಯಾಟರಿಯನ್ನು ಹೊಂದಿರುವ ಚಾರ್ಜಿಂಗ್ ಕೇಸ್‌ನೊಂದಿಗೆ ಬ್ಯಾಟರಿ ಅವಧಿಯು 20 ಗಂಟೆಗಳವರೆಗೆ ಹೋಗುತ್ತದೆ.

ಇಯರ್‌ಫೋನ್‌

ಇದಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಇಯರ್‌ಫೋನ್‌ಗಳು ಎಸ್‌ಬಿಸಿ, ಎಎಸಿ ಮತ್ತು ಎಲ್‌ಎಚ್‌ಡಿಸಿ ಬ್ಲೂಟೂತ್ ಕೋಡೆಕ್‌ಗಳಿಗೆ ಬೆಂಬಲದೊಂದಿಗೆ ಬ್ಲೂಟೂತ್ ವಿ 5.2 ಅನ್ನು ಅವಲಂಬಿಸಿವೆ. ಲೋ-ಲೇಟೆನ್ಸಿ ಮೋಡ್ ಸಹ ಇದೆ. ಇದು ಬ್ಲೂಟೂತ್ ಆಡಿಯೊ ಪ್ರಸರಣ ವಿಳಂಬವನ್ನು 47 ಎಂಎಂಗಳಷ್ಟು ಕಡಿಮೆ ಮಾಡುವ ಭರವಸೆ ನೀಡುತ್ತದೆ. ಕೊನೆಯದಾಗಿ, ಒಪಿಪಿಒ ಎನ್‌ಕೋ ಇಯರ್‌ಫೋನ್‌ಗಳನ್ನು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಐಪಿ 54 ಎಂದು ರೇಟ್ ಮಾಡಲಾಗಿದೆ. ಸದ್ಯ ಭಾರತದಲ್ಲಿ ಒಪ್ಪೊ ಎನ್‌ಕೋ ಎಕ್ಸ್ ಟಿಡಬ್ಲ್ಯೂಎಸ್ ಬೆಲೆಯನ್ನು 9,990 ರೂ.ಗೆ ನಿಗದಿ ಪಡಿಸಲಾಗಿದೆ. ಇದು ಬಿಳಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ ಮತ್ತು ಜನವರಿ 22 ರಿಂದ ದೇಶದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.

Most Read Articles
Best Mobiles in India

English summary
OPPO Enco X TWS earbuds have a design similar to Apple AirPods Pro and feature active noise cancellation.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X