ಒಪ್ಪೋ F23 5G: ಇದು ದೈತ್ಯ ಬ್ಯಾಟರಿ ಬ್ಯಾಕ್ ಅಪ್ ಫೋನ್
ಒಪ್ಪೋ ಕಂಪೆನಿ ತನ್ನ F ಸರಣಿಯಲ್ಲಿ ಹೊಸ ಒಪ್ಪೋ F23 5G ಫೋನ್ ಪರಿಚಯಿಸಿದೆ. ಒಪ್ಪೋ F23 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ಹೊಂದಿದ್ದು, 67W ಸೂಪರ್‌ವೂಕ್‌ಟಿಎಂ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್, 120Hz ಡಿಸ್‌ಪ್ಲೇ, 64 MP ಟ್ರಿಪಲ್- AI ಕ್ಯಾಮೆರಾ ಸೆಟಪ್, ಡ್ಯುಯಲ್-ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 13 ಸಾಫ್ಟ್‌ವೇರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅದರ ಪ್ರಭಾವಶಾಲಿ ಅಂಕಿಅಂಶಗಳ ಜೊತೆಗೆ, ಇದು ಬ್ಯಾಟರಿ ಬೀಸ್ಟ್ ಆಗಿದ್ದು ಅನೇಕ ಫ್ಲ್ಯಾಗ್‌ಶಿಪ್‌ಗಳನ್ನು ಮೀರಿಸುತ್ತದೆ.
ಬೃಹತ್ 5,000mAh ಬ್ಯಾಟರಿಯ ಹೊರತಾಗಿ, ಒಪ್ಪೋ F23 5G ಒಪ್ಪೋ ಸ್ವಾಮ್ಯದ ಬ್ಯಾಟರಿ ಹೆಲ್ತ್ ಎಂಜಿನ್ (BHE) ಅನ್ನು ಬಳಸುತ್ತದೆ. ಇದು ಬ್ಯಾಟರಿ ಜೀವಿತಾವಧಿಯನ್ನು ವಿಸ್ತರಿಸಲು ಪ್ರವರ್ತಕವಾಗಿದೆ. ಇನ್ನು ಒಪ್ಪೋ F23 5G ಸ್ಮಾರ್ಟ್‌ಫೋನ್‌ನಲ್ಲಿ BHE ಬ್ಯಾಟರಿ ಸ್ಟೇಟಸ್ ಅನ್ನು ಮೇಲ್ವಿಚಾರಣೆ ಮಾಡುತ್ತದೆ. ಚಾರ್ಜಿಂಗ್ ಕರೆಂಟ್ ಮತ್ತು ವೋಲ್ಟೇಜ್ ಅನ್ನು ನಿಯಂತ್ರಿಸುತ್ತದೆ. ಜೊತೆಗೆ ಬ್ಯಾಟರಿಯು 1,600 ಚಾರ್ಜ್ ಸೈಕಲ್‌ಗಳನ್ನು ಬೆಂಬಲಿಸಲು ಅನುವು ಮಾಡಿಕೊಡುತ್ತದೆ. ಇದು ಉದ್ಯಮದ ಗುಣಮಟ್ಟಕ್ಕಿಂತ ಎರಡು ಪಟ್ಟು ಹೆಚ್ಚು.
ಇದು ಮಾತ್ರವಲ್ಲದೆ ಒಪ್ಪೋದ ಬ್ಯಾಟರಿ ಹೆಲ್ತ್ ಇಂಜಿನ್ 2023 ರ ಸೀಲ್ ಬಿಸಿನೆಸ್ ಸಸ್ಟೈನಬಿಲಿಟಿ ಪ್ರಶಸ್ತಿಯನ್ನು ಗೆದ್ದಿದೆ! ಒಪ್ಪೋದ ಸ್ವದೇಶಿ BHE ಟೆಕ್‌ಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹೊಸ ತಾಂತ್ರಿಕ ಆವಿಷ್ಕಾರದ ಮೂಲಕ ಸುಸ್ಥಿರತೆಯನ್ನು ಹೆಚ್ಚಿಸಲು ಒಪ್ಪೋದ ಮಾಡುತ್ತಿರುವ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಕೂಡ ದೊರೆತಿದೆ.

ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಬಾಳಿಕೆಯನ್ನು ಇನ್ನಷ್ಟು ಸುಧಾರಿಸಲು ಪರದೆಯ ಹಿಂಬದಿ ಬೆಳಕನ್ನು ಮತ್ತು ಸಿಪಿಯು ಕಾರ್ಯಕ್ಷಮತೆಯನ್ನು ನಿಯಂತ್ರಿಸಲು F23 5G ಎಲ್ಲಾ ದಿನದ AI ಪವರ್ ಸೇವಿಂಗ್ ಅನ್ನು ಬಳಸಲಿದೆ. ಇದಲ್ಲದೆ, ಇದು ಸೂಪರ್ ನೈಟ್-ಟೈಮ್ ಸ್ಟ್ಯಾಂಡ್‌ಬೈ ಮೋಡ್‌ನೊಂದಿಗೆ ಕೇವಲ 2% ಪವರ್ ಅನ್ನು ಮಾತ್ರ ಬಳಸಲು ಬಳಕೆದಾರರ ಸ್ಲಿಪ್ ಪ್ಯಾಟ್ರನ್‌ಗಳಿಗೆ ಹೊಂದಿಕೊಳ್ಳುತ್ತದೆ. ಈ ತಂತ್ರಜ್ಞಾನಗಳು ಬ್ಯಾಟರಿಯ ಸಮಗ್ರತೆ ಮತ್ತು ಜೀವಿತಾವಧಿಯನ್ನು ಗಣನೀಯವಾಗಿ ಸುಧಾರಿಸುತ್ತದೆ. ಅಲ್ಲದೆ ದೀರ್ಘಾವಧಿಯಲ್ಲಿ ಉತ್ತಮ ಬ್ಯಾಟರಿ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಅತ್ಯುತ್ತಮ ಬ್ಯಾಟರಿ ಅವಧಿಯ ಹೊರತಾಗಿ, ಒಪ್ಪೋ 67W ಸೂಪರ್‌ವೂಕ್‌ಟಿಎಂ ಚಾರ್ಜಿಂಗ್ ಕಡಿಮೆಯಿಲ್ಲ. ಇದು ಕೇವಲ 18 ನಿಮಿಷಗಳಲ್ಲಿ 50% ಮತ್ತು ಕೇವಲ 44 ನಿಮಿಷಗಳಲ್ಲಿ 100% ಗೆ ಡಿವೈಸ್ ಅನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು 5 ನಿಮಿಷಗಳ ಚಾರ್ಜ್‌ನಲ್ಲಿ 2.5 ಗಂಟೆಗಳ ಯೂಟ್ಯೂಬ್ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡಲಿದೆ. ಆದಾಗ್ಯೂ, ಒಪ್ಪೋ ಅದರ 5-ಲೇಯರ್ ಚಾರ್ಜಿಂಗ್ ಪ್ರೊಟೆಕ್ಷನ್ ಹೊಂದಿದ್ದು, ವೇಗದ ಚಾರ್ಜಿಂಗ್‌ನೊಂದಿಗೆ ಬರುವ ಯಾವುದೇ ಅಪಾಯವನ್ನು ತಗ್ಗಿಸುತ್ತದೆ.
ಈ ವ್ಯವಸ್ಥೆಯು ಸಂಪೂರ್ಣ ಚಾರ್ಜಿಂಗ್ ಪ್ರಕ್ರಿಯೆಯಲ್ಲಿ ಸುರಕ್ಷತೆಯನ್ನು ಖಾತ್ರಿಗೊಳಿಸುವುದಕ್ಕೆ ಬಳಸಿರುವ ಹಂತಗಳು:
* ಅಡಾಪ್ಟರ್ ಓವರ್‌ಲೋಡ್ ರಕ್ಷಣೆ
* ಫ್ಲ್ಯಾಶ್ ಚಾರ್ಜ್ ಕಂಡಿಷನ್ ಅನ್ನು ಗುರುತಿಸುವ ರಕ್ಷಣೆ
* ಚಾರ್ಜಿಂಗ್ ಪೋರ್ಟ್ ಓವರ್‌ಲೋಡ್ ರಕ್ಷಣೆ
* ಬ್ಯಾಟರಿ ಕರೆಂಟ್/ ವೋಲ್ಟೇಜ್ ಓವರ್‌ಲೋಡ್ ರಕ್ಷಣೆ
* ಬ್ಯಾಟರಿ ಫ್ಯೂಸ್ ರಕ್ಷಣೆ
ಒಪ್ಪೋ ತನ್ನ ಸ್ವಾಮ್ಯದ BHE ತಂತ್ರಜ್ಞಾನದೊಂದಿಗೆ 48 ತಿಂಗಳ ನಿರರ್ಗಳ ರಕ್ಷಣೆಯ ಭರವಸೆ ನೀಡುತ್ತದೆ. ಇದು ದೀರ್ಘಾವಧಿಯಲ್ಲಿ ಸುಗಮ ಅನುಭವವನ್ನು ನೀಡುತ್ತದೆ. ಜೊತೆಗೆ ಒಪ್ಪೋ F23 5G ಅನ್ನು ಅತ್ಯುತ್ತಮ ಬ್ಯಾಟರಿ ಸಹಿಷ್ಣುತೆಯೊಂದಿಗೆ ಘನ ನಿರಂತರ ಕಾರ್ಯಕ್ಷಮತೆಯನ್ನು ನೀಡಲು ನಿರ್ಮಿಸಲಾಗಿದೆ. ದೀರ್ಘ ಸಹಿಷ್ಣುತೆ ಮತ್ತು ಘನ ಬಾಳಿಕೆಯನ್ನು ಖಚಿತಪಡಿಸಿಕೊಳ್ಳಲು ಇದು 100,000 ಗುಣಮಟ್ಟದ ಪರೀಕ್ಷೆಗಳಿಗೆ ಒಳಗಾಗಿದೆ.
ಒಪ್ಪೋ F23 5G ಸ್ಮಾರ್ಟ್‌ಫೋನ್ ನಂಬಲಾಗದ ಬೆಲೆಯನ್ನು ಹೊಂದಿದ್ದು, ಕೇವಲ 24,999ರೂ. ಬೆಲೆ ಹೊಂದಿದೆ. ಇದು ಅಮೆಜಾನ್, ಒಪ್ಪೋ ಸ್ಟೋರ್ ಮತ್ತು ಮುಖ್ಯ ಚಿಲ್ಲರೆ ವ್ಯಾಪಾರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಒಪ್ಪೋ F23 5G ಸ್ಮಾರ್ಟ್‌ಫೋನ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಇತ್ತೀಚಿನ ಇನ್ಫೋಗ್ರಾಫಿಕ್ ಅನ್ನು ಪರಿಶೀಲಿಸಿ.



Click it and Unblock the Notifications








