ಒಪ್ಪೋ F25 ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಬಹಿರಂಗ: ಏನೆಲ್ಲಾ ನಿರೀಕ್ಷೆ?
ಒಪ್ಪೋ F25 ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಎಂದು ವರದಿಯಾಗಿದೆ. ಈ ಸ್ಮಾರ್ಟ್‌ಫೋನ್ ಇದೇ ತಿಂಗಳು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ಬರಲಿದೆ ಎಂದು ವರದಿಯಾಗಿದೆ.
ಹೌದು, Oppo F25 ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ಸ್ಮಾರ್ಟ್‌ಫೋನ್‌ನ ಬಿಡುಗಡೆ ದಿನಾಂಕ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್ ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಪ್ಪೋ F25 ಫೀಚರ್ಸ್ ನಿರೀಕ್ಷೆ?
Oppo F25 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇಯು 950 ನಿಟ್ಸ್ ಪೀಕ್ ಬ್ರೈಟ್‌ನೆಸ್ ನೀಡಲಿದ್ದು, 120 Hz ರಿಫ್ರೆಶ್ ರೇಟ್ ಹಾಗೂ 240 Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿರಲಿದೆ.
ಒಪ್ಪೋ F25 ಪ್ರೊಸೆಸರ್ ಯಾವುದು?
ಒಪ್ಪೋ F25 ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ColorOS 14 ಆಧಾರಿತ Android 14 ನಲ್ಲಿ ರನ್ ಆಗುವ ಸಾಧ್ಯತೆಯಿದೆ. ಹಾಗೆಯೇ 8GB RAM ಮತ್ತು 128GB ಅಥವಾ 256GB ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ. ಇದಲ್ಲದೆ 8 GB ವರ್ಚುವಲ್ RAM ಅನ್ನು ಬೆಂಬಲಿಸಲಿದೆ. ಇದು ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಬರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಒಪ್ಪೋ F25 ಕ್ಯಾಮೆರಾ ಸೆಟಪ್ ನಿರೀಕ್ಷೆ?
ಒಪ್ಪೋ F25 ಸ್ಮಾರ್ಟ್‌ಪೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯಲ್ಲಿರಲಿದೆ. ಇದರ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿ ಬರಲಿದೆ. ಎರಡು ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಇದಲ್ಲದೆ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಬಹುದು ಎಂದು ವರದಿಯಾಗಿದೆ.
ಒಪ್ಪೋ F25 ಬ್ಯಾಟರಿ ಮತ್ತು ಇತರೆ
ಒಪ್ಪೋ F25 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಹೊಂದಿರಲಿದೆ ಎನ್ನಲಾಗಿದೆ ಇದಲ್ಲದೆ ಈ ಡಿವೈಸ್ 7.54mm ದಪ್ಪ ಮತ್ತು 177 ಗ್ರಾಂ ತೂಕದ IP65-ರೇಟೆಡ್ ಚಾಸಿಸ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಒಪ್ಪೋ F25 ಬೆಲೆ ಮತ್ತು ಲಭ್ಯತೆ
ಒಪ್ಪೋ F25 ಸ್ಮಾರ್ಟ್‌ಫೋನ್‌ನ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ಫೋನ್ ಭಾರತದಲ್ಲಿ ಮಾರ್ಚ್ 5 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇನ್ನು ಒಪ್ಪೋ ಕಂಪೆನಿ ಇತ್ತೀಚಿಗೆ ಒಪ್ಪೋ ರೆನೋ 11 ಮೊಬೈಲ್ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್ 6.70 ಇಂಚಿನ OLED ಕರ್ವ್ಡ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 1,080x2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 950 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 1Hz ನಿಂದ 120Hz ವರೆಗಿನ ಹೊಂದಾಣಿಕೆಯ ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಒಪ್ಪೋ ರೆನೋ 11 ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ ColorOS 14ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB + 128GB ಮತ್ತು 512GB ಹಾಗೂ 8GB + 256GB ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ 8GB ವರ್ಚುವಲ್ ಮೆಮೊರಿಯನ್ನು ವಿಸ್ತರಿಸಲು ಅವಕಾಶ ನೀಡಿದೆ.


Click it and Unblock the Notifications








