Home
ಸುದ್ದಿಜಾಲ

ಒಪ್ಪೋ F25 ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಇನ್ನೇನು ಕೆಲವೇ ದಿನ ಬಾಕಿ! ಫೀಚರ್ಸ್‌ ಲೀಕ್‌

ಒಪ್ಪೋ ಫೋನ್‌ಗಳು (Oppo phones) ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಪಡೆದಿವೆ. ಈ ಕಾರಣಕ್ಕೆ ವಿವಿಧ ರೀತಿಯ ಸರಣಿ ಫೋನ್‌ಗಳನ್ನು ಲಾಂಚ್‌ ಮಾಡಲಾಗುತ್ತದೆ. ಅದರಂತೆ ಈಗ ಒಪ್ಪೋ F25 ಸ್ಮಾರ್ಟ್‌ಫೋನ್‌ (Oppo F25 smartphone) ಅನ್ನು ಮುಂದಿನ ತಿಂಗಳು ಭಾರತದಲ್ಲಿ ಅನಾವರಣ ಮಾಡಲಿದೆ ಎಂದು ಹೇಳಲಾಗಿದೆ.

ಹೌದು, ಒಪ್ಪೋ ಸಾಮಾನ್ಯವಾಗಿ ಭಾರತದಲ್ಲಿ ಒಂದು ವರ್ಷದಲ್ಲಿ ಕೆಲವು ಎಫ್‌ ಸರಣಿ ಫೋನ್‌ಗಳನ್ನು ಲಾಂಚ್‌ ಮಾಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದೆ. ಕಳೆದ ವರ್ಷ ಒಪ್ಪೋ F23 ಸ್ಮಾರ್ಟ್ ಫೋನ್‌ (Oppo F23 is a smartphone) ಅನ್ನು ಅನಾವರಣ ಮಾಡುವ ಮೂಲಕ ಭಾರೀ ಸದ್ದು ಮಾಡಿತ್ತು. ಈಗ ಒಪ್ಪೋ F25 ಸ್ಮಾರ್ಟ್‌ಫೋನ್ ಅನ್ನು ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ಅನಾವರಣ ಮಾಡಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ಎಷ್ಟು ಅನ್ನೋ ಲೀಕ್‌ ಮಾಹಿತಿ ಇಲ್ಲಿದೆ ನೋಡಿ.

ಒಪ್ಪೋ F25 ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಕೆಲವೇ ದಿನ ಬಾಕಿ! ಫೀಚರ್ಸ್‌ ಲೀಕ್‌..

ಒಪ್ಪೋ F25 ಸ್ಮಾರ್ಟ್‌ಫೋನ್: ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರ ಇತ್ತೀಚಿನ ಲೀಕ್‌ ಮಾಹಿಡಿ ಪ್ರಕಾರ, ಮುಂಬರುವ ಒಪ್ಪೋ F25 ಸ್ಮಾರ್ಟ್‌ಫೋನ್‌ ಫೆಬ್ರವರಿಯಲ್ಲಿ ಅನಾವರಣ ಆಗಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಈ ವರ್ಷ ದೇಶದಲ್ಲಿ ಹೆಚ್ಚುವರಿ ಎಫ್ ಸರಣಿ ಫೋನ್‌ಗಳನ್ನು ಅನಾವರಣ ಮಾಡಲಾಗುತ್ತದೆ ಎನ್ನುವ ಮಾಹಿತಿ ಸಹ ಹರಿದಾಡುತ್ತಿದೆ. ಹಾಗಿದ್ರೆ ಈ ಫೋನ್ ಏನೆಲ್ಲಾ ಫೀಚರ್ಸ್‌ ಪಡೆದಿರಬಹುದು ಅನ್ನೋದನ್ನು ನೋಡೋಣ ಬನ್ನಿ.

ಯಾದವ್ ಪ್ರಕಾರ, ಒಪ್ಪೋ F25 ಫೋನ್ ರೆನೋ 11F 5G ಯ ಮರುಬ್ರಾಂಡೆಡ್ ಆವೃತ್ತಿಯಾಗಿರಲಿದೆಯಂತೆ. ಇನ್ನು ಈ ರೆನೋ 11F 5G ಸ್ಮಾರ್ಟ್‌ಫೋನ್‌ ಇಂಡೋನೇಷ್ಯಾದಲ್ಲಿ ಫ್ರೀ ಆರ್ಡರ್‌ಗಾಗಿ ಓಪನ್‌ ಆಗಿದೆ. ಫೆಬ್ರವರಿ 24 ರಂದು ಅಧಿಕೃತವಾಗಿ ಅನಾವರಣ ಆಗಲಿದೆ. ಅದರಲ್ಲೂ ಈ ರೆನೋ 11F 5G ಯ ಫೀಚರ್ಸ್‌ ಈಗಾಗಲೇ ಬಹಿರಂಗ ಆಗಿದ್ದು, ಇದೇ ಫೀಚರ್ಸ್‌ ಒಪ್ಪೋ F25 ಸ್ಮಾರ್ಟ್‌ಫೋನ್‌ನಲ್ಲೂ ಇರುತ್ತದೆ ಎಂದು ತೋರುತ್ತದೆ.

ಒಪ್ಪೋ F25 ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಕೆಲವೇ ದಿನ ಬಾಕಿ! ಫೀಚರ್ಸ್‌ ಲೀಕ್‌..

ಒಪ್ಪೋ ರೆನೋ 11F 5G ಲೀಕ್‌ ಫೀಚರ್ಸ್‌: ಈ ಸ್ಮಾರ್ಟ್‌ಫೋನ್ FHD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್‌, 2160Hz PWM ಮಬ್ಬಾಗಿಸುವಿಕೆ ಮತ್ತು ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಯೊಂದಿಗೆ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಡೈಮೆನ್ಸಿಟಿ 7050 ಚಿಪ್‌ಸೆಟ್ ಹಾಗೂ 8 GB RAM, 256 GB ಸ್ಟೋರೇಜ್‌ ಆಯ್ಕೆ, 67W ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ ಎಂದು ತಿಳಿದುಬಂದಿದೆ.

ಇನ್ನು ಒಪ್ಪೋ ರೆನೋ 11F 5G ಸ್ಮಾರ್ಟ್‌ಫೋನ್‌ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿರಲಿದ್ದು, 64 ಮೆಗಾಪಿಕ್ಸೆಲ್ ಓಮ್ನಿವಿಶನ್‌ OV64B ಪ್ರಾಥಮಿಕ ರಿಯರ್‌ ಕ್ಯಾಮೆರಾ, 8 ಮೆಗಾಪಿಕ್ಸೆಲ್ IMX55 ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸ್ನ್ಯಾಪರ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ಫೋನ್ ಕಲರ್‌ಓಎಸ್‌ 14 ಆಧಾರಿತ ಆಂಡ್ರಾಯ್ಡ್‌ 14 ನಲ್ಲಿ ರನ್ ಆಗಲಿದೆ ಎನ್ನಲಾಗಿದ್ದು, IP65-ರೇಟೆಡ್ ಚಾಸಿಸ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.

ಒಪ್ಪೋ F25 ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಕೆಲವೇ ದಿನ ಬಾಕಿ! ಫೀಚರ್ಸ್‌ ಲೀಕ್‌..

ಇದೆಲ್ಲದರ ಜೊತೆಗೆ ಈ ವಿಶೇಷ ಸ್ಮಾರ್ಟ್‌ಫೋನ್ ಗುಲಾಬಿ, ಹಸಿರು ಮತ್ತು ನೀಲಿ ಬಣ್ಣಗಳಲ್ಲಿ ಕಾಣಿಸಿಕೊಳ್ಳಿದೆ ಎಂದು ಹೇಳಲಾಗಿದೆ. ಅದಾಗ್ಯೂ ರಿಯಲ್‌ಮಿ ಈ ಫೋನ್‌ಗಳ ಬಗ್ಗೆ ಕೊಂಚ ಮಾಹಿತಿಯನ್ನೂ ಸಹ ಬಹಿರಂಗಪಡಿಸಿಲ್ಲ. ಹೀಗಾಗಿ ಈ ಫೋನ್‌ ಏನೆಲ್ಲಾ ಪ್ರಮುಖ ಫೀಚರ್ಸ್‌ ಹೊಂದಿರಲಿದೆ, ಇದರ ಬೆಲೆ ಎಷ್ಟಿರಲಿದೆ ಅನ್ನೋ ಮಾಹಿತಿಯನ್ನು ಫೆಬ್ರವರಿವರೆಗೆ ಕಾದು ನೋಡಬೇಕಿದೆ.

Best Mobiles in India

English summary
It is known that the Oppo F25 smartphone will be unveiled in February with a selection of advanced features. Some features of this phone have already been leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+